ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಆರ್ ಜಿ ವಿ ಜೊತೆಗಿನ ಆ ವಿಡಿಯೋ ನನ್ನ ಕುಟುಂಬವನ್ನೇ ದೂರ ಮಾಡಿದೆ: ನಟಿ ಇನಾಯಾ
ಆದರೆ ಇದೇ ವಿಡಿಯೋದಿಂದ ಇನಾಯಾ ಇದೀಗ ಮನೆಯವರ ವಿರೋಧ ಕಟ್ಟಿಕೊಂಡಿದ್ದಾರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ‘ನನಗೆ ಸಿನಿಮಾದಲ್ಲಿ ಬರಲು ಆಸಕ್ತಿ ಇದ್ದ ಕಾರಣ ಮನೆಯಲ್ಲಿ ಇಷ್ಟವಿಲ್ಲದಿದ್ದರೂ ಹೊರಗೆ ಬಂದ್ದು, ಹೈದರಾಬಾದ್‌ನಲ್ಲಿ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದೆ ಎಂದರು.
ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಿರುವಾಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಸಂಪರ್ಕ ಸಿಕ್ಕಿತ್ತು. ಈ ವೇಳೆ ವರ್ಮಾ ಅವರ ಹುಟ್ಟುಹಬ್ಬದ ಪಾರ್ಟಿಗೆ ನನ್ನನ್ನು ಆಹ್ವಾನಿಸಿದ್ದರು. ಈ ವೇಳೆ ನಾನು ವರ್ಮಾ ಜೊತೆ ಡ್ಯಾನ್ಸ್ ಮಾಡಿದ್ದು ನಾಲ್ಕು ದಿನಗಳ ಬಳಿಕ ಅದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ವಿಡಿಯೋ ನೋಡಿದ ನನ್ನ ತಾಯಿ ಫೋನ್ ಮಾಡಿ ತುಂಬಾ ಬೇಸರ ಮಾಡಿಕೊಂಡರು. ಹೀಗಾಗಿ ಇದೀಗ ನನ್ನ ಕುಟುಂಬ ಅದೊಂದು ವಿಡಿಯೋದಿಂದ ಸಾಕಷ್ಟು ಬೇಸರಕ್ಕೆ ಒಳಗಾಗಿದ್ದು, ಇದರಿಂದ ನನ್ನ ಕುಟುಂಬ ನನ್ನನ್ನು ದ್ವೇಷಿಸುತ್ತಿದೆ ಎಂದರು.
