• January 1, 2026

ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ ಮನಸ್ತಾಪ: ಅನಿರುದ್ಧ್ ಎರಡು ವರ್ಷ ಬ್ಯಾನ್

ಝೀ ಕನ್ನಡ ವಾಹಿನಿಯಲ್ಲಿ ಪ್ರವಾರವಾಗುವ ಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿತ್ತು. ಇದೀಗ ನಟ ಅನಿರುದ್ಧ್ ರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದ ಮಧ್ಯೆ ಮನಸ್ತಾಪ ಹೆಚ್ಚಾಗಿತ್ತು, ಜೊತೆಗೆ ಎರಡು ದಿನಗಳ ಹಿಂದ ಶೂಟಿಂಗ್ ನಿಂದ ಅನಿರುದ್ಧ್ ಹೊರಟು ಹೋಗಿದ್ದರು. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿತ್ತು.ಸದ್ಯ ನಿರ್ಮಾಪಕರ ಸಂಘದಲ್ಲಿ ಚರ್ಚೆ ನಡೆದಿದ್ದು ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಿರುತೆರೆಯ ಪ್ರಡ್ಯೂಸರ್ ಅಸೋಸಿಯೇಷನ್ ಅಧ್ಯಕ್ಷರಾದ ಭಾಸ್ಕರ್ ಮಂಗಾಡಹಳ್ಳಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಅನಿರುದ್ಧ್ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿ ಹಾಗೂ ರಿಯಾಲಿಟಿ ಶೋನಿಂದ ಬ್ಯಾನ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ್ ಮಂಗಾಡಹಳ್ಳಿ,” ಅನಿರುದ್ಧ್ ಅವರ ವರ್ತನೆಯನ್ನು ಪರಿಗಣಿಸಿ ಎರಡು ದಿನ ಚರ್ಚೆ ಮಾಡಿದ್ದೇವೆ. ಕಿರುತೆರೆಯ ಎಲ್ಲಾ ನಿರ್ಮಾಪಕರ ಒಕ್ಕೊರಲಿನ ನಿರ್ಧಾರದಂತೆ ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಹಾಕಿಕೊಳ್ಳುವಂತಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.” ಎಂದರು. ಇನ್ನೂ ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಕಾಣಿಸಿಕೊಳ್ಳುವುದು ಬಹುತೇಕ ಅಸಾಧ್ಯ. ಅಲ್ಲದೆ ಅವರಿಗೆ ಬೇರೆ ಮನರಂಜನ ವಾಹಿನಿಯ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಗುವುದು ಅನುಮಾನವೇ ಆಗಿದೆ. ಇತ್ತ ಆರ್ಯವರ್ಧನ್ ಆಗಿ ಗುರುತಿಸಿಕೊಂಡಿರೋ ಅನಿರುದ್ಧ್ ಜಾಗಕ್ಕೆ ಬೇರೆ ಯಾರು ಬರುತ್ತಾರೆ? ಅವರು ಆರ್ಯವರ್ಧನ್ ಜಾಗವನ್ನು ತುಂಬುತ್ತಾರಾ? ಜನ ಅವರನ್ನು ಸ್ವೀಕರಿಸುತ್ತಾರಾ? ಅನ್ನೋ ಅನುಮಾನ ಶುರುವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now