• January 1, 2026

ದಿವ್ಯಾ ಗರ್ಭಪಾತ ಮಾಡಿಸಿಕೊಳ್ಳಲು ಈ ರೀತಿ ನಾಟಕವಾಡುತ್ತಿರಬೇಕು: ನಟ ಅಮ್ಜದ್ ಖಾನ್

ಕಳೆದ ಕೆಲ ದಿನಗಳ ಹಿಂದಷ್ಟೇ ಸಹ ನಟನ ಜೊತೆ ಹಸೆಮಣೆ ಏರಿದ್ದ ಆಕಾಶ ದೀಪ ಧಾರವಾಹಿಯ ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮೂರು ತಿಂಗಳ ಗರ್ಭಿಣಿಯಾಗಿರುವ ದಿವ್ಯಾ ಶ್ರೀಧರ್ ಪತಿಯ ಹಲ್ಲೆಯಿಂದ ಮಗುವಿಗೆ ತೊಂದರೆಯಾಗಿದೆ. ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕಿದೆ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದರು. ಇದೀಗ ದಿವ್ಯಾ ಆರೋಪಕ್ಕೆ ಅಮ್ಜದ್ ಪ್ರತಿಕ್ರಿಯೆ ನೀಡಿದ್ದಾರೆ. ದಿವ್ಯಾ ಮಾಡಿರುವ ಆರೋಪಕ್ಕೆ ಅಮ್ಜಾದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಹಲ್ಲೆ ಮಾಡುವಂತಹ ಹುಡುಗ ಅಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇದೆ. ಯಾರು ಬೇಕಾದರೂ ಬಂದು ನೋಡಬಹುದು. ದಿವ್ಯಾಗೆ ಕೆಲ ಕೆಟ್ಟ ಸ್ನೇಹಿತರ ಸಹವಾಸವಿದೆ. ಅವರೆಲ್ಲ ಸೇರಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳಲು ದಿವ್ಯಾ ಈ ರೀತಿಯಲ್ಲಿ ನಾಟಕವಾಡುತ್ತಿರಬೇಕು. ನನಗೆ ನನ್ನ ಮಗು ಬೇಕು. ನಾನು ಕೂಡ ಕಮಿಷನರ್ ಬಳಿ ದೂರು ನೀಡುವುದಾಗಿ ಹೇಳಿದ್ದಾರೆ. ಅಮ್ಜದ್ ಹಾಗೂ ದಿವ್ಯಾ ಶ್ರೀದರ್ ಆಕಾಶ ದೀಪ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಮೂಡಿ ಬಳಿಕ ಲಿವಿಂಗ್ ಟುಗೇದರ್ ನಲ್ಲಿದ್ದರು. ಕಳೆದ ಜೂನ್ ತಿಂಗಳಲ್ಲಿ ಹಸೆ ಮಣೆ ಏರಿದ್ದ ಜೋಡಿಗಳ ಮಧ್ಯೆ ಮನಸ್ತಾಪ ಮೂಡಿದ್ದು ಇಬ್ಬರು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ‘ನನ್ನ ಗಂಡ ಹಲ್ಲೆ ಮಾಡಿದ್ದು, ಈ ವೇಳೆ ಕೆಳಗೆ ಬಿದ್ದು ಹೊಟ್ಟೆಯ ಭಾಗಕ್ಕೆ ನೋವಾಗಿದೆ. ಕೈಕಾಲಿನ್ನೆಲ್ಲಾ ತುಳಿದು ನೋವು ತಡೆಯಲಾಗದೇ ಪೇಚಾಡಿದ್ದೇನೆ. ಈ ವೇಳೆ ಲೋ ಬಿಪಿಯಾಗಿ ಅಸ್ವಸ್ಥಗೊಂಡಿದೆ. ತುಂಬಾ ಸಮಯವಾದ ಮೇಲೆ ನನಗೆ ಪ್ರಜ್ಞೆ ಬಂತು. ನನ್ನ ಗಂಡ ಮನೆಯಲ್ಲೇ ಇದ್ದರೂ, ನನ್ನನ್ನು ಆಸ್ಪತ್ರೆಗೆ ಸೇರಿಸಿಲ್ಲ. ನನಗೆ ಪ್ರಜ್ಞೆ ಬಂದ ಬಳಿಕ ಮನೆಯಿಂದ ಹೊರಗಡೆ ಹೋದೆ. ಮರುದಿನ ಬೆಳಗ್ಗೆ ಅತೀವ ರಕ್ತಸ್ರಾವ ವಾಯ್ತು. ನನ್ನ ಗಂಡನಿಗೆ ಕರೆ ಮಾಡಿದೆ. ಅವನು ಬೇರೆ ಅಪಾರ್ಟ್‍ಮೆಂಟ್‍ನಲ್ಲಿ ಇದ್ದಾನೆ ಎಂದು ದಿವ್ಯಾ ಶ್ರೀಧರ್ ಆರೋಪ ಮಾಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now