ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತಮಿಳು ಚಿತ್ರರಂಗದ ಯುವನಟಿ ದೀಪಾ ಆತ್ಮಹತ್ಯೆ: ಬಾಯ್ ಫ್ರೆಂಡ್ ಗಾಗಿ ಪೊಲೀಸರ ಶೋಧ
ದೀಪಾ ಅವರ ಮೂಲಕ ಹೆಸರು ಪೌಲಿನ್ ಜೆಸ್ಸಿಕಾ. ಆದರೆ ಚಿತ್ರರಂಗದಲ್ಲಿ ದೀಪಾ ಹೆಸರಿನಲ್ಲಿ ಸಾಕಷ್ಟು ಗುರುತಿಸಿಕೊಂಡಿದ್ದರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರೂಪ ಕಳೆದ ಕೆಲ ಸಮಯದಿಂದ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಮೂಲಗಳ ಪ್ರಕಾರ ದೀಪಾ ಆತ್ಮಹತ್ಯೆಗೆ ಪ್ರೇಮವೇ ಕಾರಣ ಎನ್ನಲಾಗುತ್ತಿದೆ. ದೀಪಾ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದಿದ್ದಾರೆ. ಆದರೆ ಆತ ಯಾರು ಅನ್ನೋದನ್ನ ಬರೆದಿಲ್ಲ. ಹೀಗಾಗಿ ಪೊಲೀಸರು ದೀಪಾ ಪ್ರೇಮಿಗಾಗಿ ಶೋಧ ನಡೆಸಿದ್ದಾರೆ.
ದೀಪಾ ಅವರ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಪ್ರೀತಿ, ಪ್ರೇಮದ ವಿಚಾರವಾಗಿಯೇ ಈ ಸಾವು ಸಂಭವಿಸಿದೆ ಎನ್ನಲಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ದೀಪಾ ಅವರು ಈಗತಾನೇ ಗುರುತಿಸಿಕೊಳ್ಳುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರಿಗೂ ಈ ಸಾವಿನ ಸುದ್ದಿ ಶಾಕ್ ನೀಡಿದೆ. ಅನೇಕ ಆಫರ್ಗಳು ದೀಪಾ ಅವರ ಕೈಯಲ್ಲಿದ್ದವು ಎಂದು ಹೇಳಲಾಗುತ್ತಿದೆ.
