ತಮಿಳು ಚಿತ್ರ ರಂಗದ ಖ್ಯಾತ ನಟಿ ಆಕಾಂಕ್ಷಾ ಮೋಹನ್ ಮುಂಬೈನ ವೆರ್ಸೋವಾದಲ್ಲಿರುವ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕಾಂಕ್ಷ ನಟನೆಯ ಹಿಂದಿ ಸಿನಿಮಾ ‘ಸಿಯಾ’ ಕಳೆದ ಎರಡು ವಾರಗಳ ಹಿಂದಷ್ಟೇ ಬಿಡುಗಡೆ ಆಗಿದೆ. ಸೆಪ್ಟೆಂಬರ್ 28ರಂದು ಹೋಟೆಲ್ ನಲ್ಲಿ ರೂಂ ಪಡೆದಿದ್ದ ನಟಿ ಆಕಾಂಕ್ಷ ಎರಡು ದಿನಗಳ ಬಳಿಕ ಅಂದ್ರೆ ಸೆ.30ರಂದು ಶವವಾಗಿ ಪತ್ತೆಯಾಗಿದ್ದಾರೆ. ನಟಿ ಆಕಾಂಕ್ಷ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಆಕಾಂಕ್ಷ ಸೆ.28 ರಂದು ಎರಡು ದಿನಗಳ ಮಟ್ಟಿಗೆ ರೂಮ್ ಬುಕ್ ಮಾಡಿದ್ದರು. ಆದರೆ ಎರಡು ದಿನ ಕಳೆದರು ರೂಂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಬಂದ ಬಳಿಕೆ ಬಾಗಿಲು ತೆರೆದು ನೋಡಿದ್ದು ಈ ವೇಳೆ ಆಕಾಂಕ್ಷ ಮೃತ ದೇಹ ಪತ್ತೆಯಾಗಿದೆ. ಮೃತ ದೇಹದ ಬಳಿಯೇ ಡೆತ್ ನೋಟ್ ಪತ್ತೆಯಾಗಿದ್ದು ಡೆತ್ ನೋಟ್ ನಲ್ಲಿ ನನಗೆ ನೆಮ್ಮದಿ ಬೇಕು. ಹಾಗಾಗಿ ಸಾಯುತ್ತಿದ್ದೇನೆ. ನನ್ನ ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣವಲ್ಲ’ ಎಂದು ಬರೆದಿದ್ದಾರೆ.

ಮಾನಸೀಕ ಖಿನ್ನತೆಯಿಂದ ಬಳಲುತ್ತಿದ್ದ ಆಕಾಂಕ್ಷ ಕಳೆದ ಕೆಲ ಸಮಯದಿಂದ ಮುಂಬೈ ನಗರದ ಲೋಖಂಡವಾಲಾ ಪ್ರದೇಶದ ಯಮುನಾ ನಗರದ ಸೊಸೈಟಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮಾನಸೀಕ ಖಿನ್ನತೆಯಿಂದ ಆಕಾಂಕ್ಷ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ತಮಿಳಿನ ‘9 ಥಿರದರ್ಗಳ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಆಕಾಂಕ್ಷಾ ಮೋಹನ್, ಹಿಂದಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಆಕಾಂಕ್ಷ ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಂತ್ಯ ಕಂಡಿರೋದು ಬೇಸರಕ್ಕೆ ಕಾರಣವಾಗಿದೆ.