• January 1, 2026

ನಟ ವಿಶಾಲ್ ಮನೆ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಕಲ್ಲು ತೂರಾಟ: ಆರೋಪಿಗಳ ಬಂಧನಕ್ಕೆ ಆಗ್ರಹ

ತಮಿಳಿನ ಖ್ಯಾತ ನಟ ವಿಶಾಲ್ ಅವರ ಚೆನ್ನೈನ ಅಣ್ಣಾ ನಗರದಲ್ಲಿರುವ ನಿವಾಸಕ್ಕೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅಣ್ಣಾ ನಗರದಲ್ಲಿರುವ ವಿಶಾಲ್ ಮನೆಯಲ್ಲಿ ಅವರ ತಂದೆ ತಾಯಿ ವಾಸಿಸುತ್ತಿದ್ದು ಕಿಡಿಗೇಡಿಗಳ ಕೃತ್ಯಕ್ಕೆ ಮನೆಯ ಕಿಟಕಿ ಗಾಜು ಪುಡಿ ಪುಡಿಯಾಗಿದೆ. ದಾಳಿಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳ ಬಂಧನಕ್ಕೆ ವಿಶಾಲ್ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಕೆಂಪು ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವಿಶಾಲ್ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್ ಆಗಿದ್ದಾರೆ. ದಾಳಿಯಲ್ಲಿ ಮನೆಯ ಬಾಲ್ಕನಿ ಗ್ಲಾಸ್ ಹಾಗೂ ಮನೆಯ ಇತರ ಸ್ಥಳಗಳಿಗೂ ಹಾನಿಯಾಗಿದೆ. ಈ ಬಗ್ಗೆ ವಿಶಾಲ್ ಮ್ಯಾನೇಜರ್ ಹರಿಕೃಷ್ಣನ್ ಅಣ್ಣಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಜೊತೆಗೆ ಸಿಸಿಟಿವಿ ವಿಡಿಯೋ ರೆಕಾರ್ಡಿಂಗ್ ಕ್ಲಿಪ್ ಅನ್ನು ಮ್ಯಾನೇಜನ್ ಪೊಲೀಸರಿಗೆ ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು ದಾಳಿಗೆ ಕಾರಣ ಏನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಘಟನೆ ವಿಶಾಲ್ ಅಭಿಮಾನಿಗಳಿಗೆ  ಅಘಾತವುಂಟು ಮಾಡಿದ್ದು ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ನಟ ವಿಶಾಲ್ ‘Lathi’ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಸುನೈನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದ ಹಾಗೂ ರಮಣ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಧಿಕ್ ರವಿಚಂದ್ರನ್ ನಿರ್ದೇಶನ ‘ಮಾರ್ಕ್ ಆಂಟನಿ’ ಹಾಗೂ Thupparivaalan 2 ಸಿನಿಮಾದಲ್ಲಿ ವಿಶಾಲ್ ತೊಡಗಿಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now