ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪತಿ ಮಾಡಿದ ಯಡವಟ್ಟು ಕೆಲಸದಿಂದ ಆಸ್ಪತ್ರೆಗೆ ದಾಖಲಾದ ನಯನತಾರಾ
ಹೊಸ ದಂಪತಿ ನಯನತಾರಾ ಹಾಗೂ ವಿಘ್ನೇಶ್ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಿದ್ದಾರೆ. ಮದುವೆಯ ಆರಂಭದಲ್ಲಿ ಕೆಲವೊಂದು ಸಮಸ್ಯೆಗಳನ್ನು ಮಾಡಿಕೊಂಡಿದ್ದ ದಂಪತಿಗಳು ಬಳಿಕ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದರು. ಆದ್ರೆ ಇದೀಗ ನಯನತಾರಾ ಆಸ್ಪತ್ರೆಗೆ ದಾಖಲಾಗಿರೋದು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಮುದ್ದಿನ ಪತ್ನಿಗಾಗಿ ವಿಘ್ನೇಶ್ ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿದ್ದಾರೆ. ಪತಿ ವಿಘ್ನೇಶ್ ಮಾಡಿದ ಅಡುಗೆ ತಿಂದು ನಯನತಾರಾ ಆರೋಗ್ಯ ಕೆಟ್ಟಿದೆ. ಅಡುಗೆ ತಿಂದ ಬಳಿಕ ನಯನತಾರಾ ವಾಂತಿ ಮಾಡಿಕೊಂಡಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ನಯನತಾರಾ ಆರೋಗ್ಯ ಸ್ಥಿತಿ ಸುಧಾರಿಸಿದ್ದ ಮನೆಗೆ ಮರಳಿದ್ದಾರೆ. ಒಟ್ನಲ್ಲಿ ಪ್ರೀತಿಯಿಂದ ವಿಘ್ನೇಶ್ ಮಾಡಿದ ಅಡುಗೆ ತಿಂದು ನಯನತಾರಾ ಆಸ್ಪತ್ರೆಗೆ ದಾಖಲಾಗಿರೋ ವಿಷಯ ತಿಳಿದ ಲೇಡಿ ಸೂಪರ್ ಅಭಿಮಾನಿಗಳು ಮಾತ್ರ ಬೇಸರಗೊಂಡಿದ್ದಾರೆ.
