• January 1, 2026

Tags : song

ಸುಮಧುರವಾಗಿದೆ “ವಿಜಯಾನಂದ” ಚಿತ್ರದ ಹಾಡು!

ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ “ವಿಜಯಾನಂದ” ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿದ್ದು ಈ ಚಿತ್ರದ “ಹಾಗೆ ಆದ ಆಲಿಂಗನ” ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆ ಆಗಿದೆ. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, “ಗೀತಾ ಗೋವಿಂದಂ” ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ […]Read More

ಕಾಂತಾರದ ವರಾಹ ರೂಪಂ ಹಾಡಿಗೆ ತಡೆ ಸಂಕಷ್ಟ ತಂದ ಪಾಲಕ್ಕಾಡ್ ಕೋರ್ಟ್

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ‘ವರಾಹ ರೂಪಂ’ ಸಖತ್ ಖ್ಯಾತಿ ಘಳಿಸಿದೆ. ಚಿತ್ರದ ಕೊನೆಯಲ್ಲಿ ಬರುವ ಈ ಹಾಡಿಗೆ ವಿವಾದಗಳು ಅಂಟಿಕೊಂಡಿದೆ. ಇತ್ತೀಚಿಗೆ ಈ ಹಾಡಿಗೆ ಟ್ಯೂನ್ ಕದ್ದ ಆರೋಪವನ್ನು ಮಾಡಿದ್ದ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ವರಾಹ ರೂಪಂ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು. ಕೋರ್ಟ್ ತಡೆಯಾಜ್ಞೆ ನೀಡಿದ್ದರು ಕಾಂತಾರ ಚಿತ್ರದಲ್ಲಿ ಹಾಡನ್ನು ಮುಂದುವರೆಸಲಾಗುತ್ತಿದೆ. ಅಲ್ಲದೆ ಈ ಹಾಡನ್ನು ಕದ್ದಿಲ್ಲ ಎಂದು […]Read More

ಕಾಂತಾರ ಸಿನಿಮಾದ ವರಹ ರೂಪಂ ಟ್ಯೂನ್ ಕದ್ದಿದ್ದಾ? ಸ್ಪಷ್ಟನೆ ನೀಡಿದ ಅಜನೀಶ್ ಲೋಕನಾಥ್

ಸದ್ಯ ಎಲ್ಲಿ ನೋಡಿದ್ರು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ್ದೇ ಸದ್ದು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದ್ರು ಎಲ್ಲೆಲ್ಲೂ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಕಾಂತಾರ ಚಿತ್ರವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ದತೆ ನಡೆಯುತ್ತಿದೆ. ಕಾಂತಾರ ಸಿನಿಮಾವನ್ನು ಕರಾವಳಿ ದೈವ ಕೋಲದ ಕುರಿತಾಗಿ ಚಿತ್ರಿಸಲಾಗಿದ್ರು ದೇಶ, ವಿದೇಶದ ಅಭಿಮಾನಿಗಳು ಕಾಂತಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗ್ಲೆ ಹಿಂದಿಗೆ ಡಬ್ ಮಾಡಿ ಟ್ರೈಲರ್ ಬಿಡುಗಡೆ ಆಗಿದ್ದು […]Read More

‘ತ್ರಿಬಲ್ ರೈಡಿಂಗ್’ ಹೊರಟ ‘ಗೋಲ್ಡನ್ ಸ್ಟಾರ್‌’ ಗಣೇಶ್; ರಿಲೀಸ್‌ ಆಯ್ತು ಮೊದಲ ಹಾಡು

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ತ್ರಿಬಲ್ ರೈಡಿಂಗ್” ಚಿತ್ರದ “ಯಟ್ಟಾ ಯಟ್ಟಾ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಹಾಡಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.  ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ನಾನು “ಮುಂಗಾರು‌ ಮಳೆ” ಸಮಯದಿಂದ ಗಣೇಶ್ ಅವರನ್ನು ಬಲ್ಲೆ. ಆಗಿನಿಂದಲೂ ನನಗೆ ಅವರಿಗೊಂದು ಸಿನಿಮಾ ಮಾಡುವ ಆಸೆ. ಕಾಲ ಈಗ […]Read More

ಸರ್ಕಾರಿ ಶಾಲೆಗಳ ಸಮಸ್ಯೆ ತೆರೆದಿಡುವ ‘ಕರುನಾಡ ಶಾಲೆ’ಚಿತ್ರದ ಹಾಡು ಬಿಡುಗಡೆ

ಶಿಕ್ಷಣ ಖಾಸಗೀಕರಣವಾದ ಮೇಲಂತೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯಂತೂ ಅಧಪತನದತ್ತ ಸಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರು ಅದು ಯಶಸ್ಸು ಕಂಡಿಲ್ಲ. ಹೀಗಿದ್ಮೇಲೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿವರಿಸೋದು ಬೇಕಾಗಿಲ್ಲ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲಿರುವ ಪ್ರಯತ್ನಕ್ಕೆ ಕರುನಾಡ ಶಾಲೆ ಸಿನಿಮಾ ಕೈ ಹಾಕಿದೆ. ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ   ಚಿತ್ರತಂಡವು ಶಿಕ್ಷಕರ ದಿನಾಚರಣೆ ದಿನದಂದು […]Read More

ಜಂಕಾರ್ ಮ್ಯೂಸಿಕ್ ನಿಂದ ಬಿಡುಗಡೆಯಾಯ್ತು ವಿನಾಯಕ ಚೌತಿಗೆ ವಿಶೇಷ ಹಾಡು.

ಹಲವು ವರ್ಷಗಳಿಂದ ಸಂಗೀತ ಕ್ಷೇತ್ರಕ್ಕೆ ತನ್ನದೇ‌ ಆದ ಕೊಡುಗೆ ನೀಡುತ್ತಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈ ಬಾರಿ ವಿನಾಯಕ ಚೌತಿಗೆ “ಗಣೇಶ ದಿ ಪವರ್” ಎಂಬ ವಿಶಿಷ್ಟ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದೆ‌. ಇದು ಮಾಮೂಲಿ ತರಹದ  ಭಕ್ತಿಗೀತೆಗಳ ಹಾಗಿಲ್ಲ. ಈಗಿನ ಯುವಪೀಳಿಗೆಗೆ ಹಿಡಿಸುವ ಹಾಗೆ ಈ ಹಾಡು ಇದೆ. ಟ್ರಾನ್ಸ್ ಮ್ಯೂಸಿಕ್ ಶೈಲಿಯಲ್ಲಿ ವಿನಾಯಕನ ಕುರಿತ ಈ ಸುಮಧುರ ವಿಡಿಯೋ ಹಾಡು ಮೂಡಿಬಂದಿದೆ. ನೂರಾರು ಗಣಪತಿ ಮೂರ್ತಿಗಳ ಸನ್ನಿಧಿಯಲ್ಲಿ ಈ ಹಾಡು ಚಿತ್ರೀಕರಣವಾಗಿದೆ. ಜೆಮ್ ಶಿವು […]Read More

ಬಿಡುಗಡೆ ಆದ ಎರಡೇ ದಿನಕ್ಕೆ 18 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದ ಕಾಂತಾರ

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸಖತ್ ಸದ್ದು ಮಾಡ್ತಿದ್ದಾರೆ. ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕಾಂತಾರ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದ್ದು 18 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಕರಾವಳಿ ಸೊಗಡಿನಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಮೂಡಿಬಂದಿರುವ ಸಿಂಗಾರ ಸಿರಿಯೇ ಹಾಡಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರೋ, ಪ್ರಮೋದ್ ಮರವಂತೆ […]Read More

‘ಸಂಭ್ರಮ’ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದ ಚಿತ್ರತಂಡ

ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ಸಂಭ್ರಮ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಆಡೋಕೆ ಸಾವಿರ ಆಟ ಎಂಬ ಸಾಹಿತ್ಯವಿರುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣವನ್ನು ಹಾಗೂ ಒಂದಷ್ಟು ಫಿಲಾಸಪಿ ಮತ್ತು ಹೆಚ್ಚು ನೆನಪುಗಳನು ನೆನಪಿಸುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, […]Read More

ರಿಲೀಸ್ ಗೆ ರೆಡಿಯಾದ ಹೊಸಬರ ‘ಧಮ್’ ಸಿನಿಮಾ

ಕಿಚ್ಚ ಸುದೀಪ್ ನಟನೆಯ 2002ರಲ್ಲಿ ತೆರೆಗೆ ಬಂದ ಧಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೊಸರಿನಲ್ಲಿ ಹೊಸಬರ ತಂಡವೊಂದು ಸಿನಿಮಾವನ್ನು ಕಂಪ್ಲೀಟ್ ಮಾಡಿದೆ. ಈಗಾಗ್ಲೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿದೆ. ಅಂದಹಾಗೆ ಈ ಸಿನಿಮಾಗೆ ಮೊದಲು ಸಂಚಾರಿ ವಿಜಯ್ ರನ್ನು ಹಿರೋ ಆಗಿ ಆಯ್ಕೆ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿದ್ದು. ಆದರೆ ಸಂಚಾರಿ ವಿಜಯ್ ಅವರ ದಿಡೀರ್ ನಿಧನದ ಹಿನ್ನೆಲೆಯಲ್ಲಿ ಶ್ರೀಜಿತ್ ನಾಯಕನಾಗಿ ನಟಿಸಿದ್ದಾರೆ. ವಿಆರ್ ಆರ್ […]Read More

ಮನಸೂರೆಗೊಳ್ಳುತ್ತಿದೆ “ಮೇಡ್ ಇನ್ ಬೆಂಗಳೂರು” ಹಾಡು

……….ನಾನಾ ಊರುಗಳಿಂದ ನಾನಾ ಭಾಷೆಗಳನ್ನಾಡುವ ಜನ ಹಲವು ಕಾಲಗಳಿಂದ ಬೆಂಗಳೂರಿನಲ್ಲಿದ್ದಾರೆ. ಅಂತಹ ಬೆಂಗಳೂರಿನ ಕುರಿತಾಗಿ ಬರುತ್ತಿರುವ ಚಿತ್ರ “ಮೇಡ್ ಇನ್ ಬೆಂಗಳೂರು”. ಈ ಚಿತ್ರದ ” ಬನ್ನಿರೆ ಬೆಂಗಳೂರಿಗೆ” ಎಂಬ ಹಾಡನ್ನು ಖ್ಯಾತ ನಿರ್ದೇಶಕ ಭಗವಾನ್ ಬಿಡುಗಡೆ ಮಾಡಿದರು. ಚಿತ್ರದ ಪೋಸ್ಟರ್ ಹೆಸರಾಂತ ಪಿ ಆರ್ ಓ ಸುಧೀಂದ್ರ ವೆಂಕಟೇಶ್ ಅವರಿಂದ ಅನಾವರಣವಾಯಿತು. ಈ ಹಾಡನ್ನು ಹನ್ನೊಂದು  ಭಾಷೆಗಳನ್ನು ಬಳಸಿ ರಚಿಸಲಾಗಿದೆ.  ಜನಪ್ರಿಯ ಗಾಯಕರಾದ  ಶ್ರೀಹರ್ಷ ಎಂ.ಆರ್, ಕಂಬದ ರಂಗಯ್ಯ,  ರೋಹಿತ್ ಭಟ್, ಮದ್ವೇಶ್ ಭಾರದ್ವಾಜ್, ಮೇಘ […]Read More

Phone icon
Call Now
Reach us!
WhatsApp icon
Chat Now