• January 1, 2026

Tags : serial

ʻನೇತ್ರಾವತಿʼ ಧಾರವಾಹಿಯ 500 ಸಂಚಿಕೆ ಹಿನ್ನೆಲೆ: ಪುನೀತ್‌ ಪುಣ್ಯಭೂಮಿಗೆ ಪೂಜೆ

ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ʻನೇತ್ರಾವತಿʼ ಧಾರಾವಾಹಿ ತಂಡದ ಸದಸ್ಯರು ಇತ್ತೀಚೆಗೆ ಕಂಠೀರವ ಸ್ಟೂಡಿಯೋಗೆ ಭೇಟಿ ನೀಡಿ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್‌ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ಧಾರಾವಾಹಿಯ ಕಲಾವಿದರಾದ ಅಂಜಲಿ, ದುರ್ಗಾಶ್ರೀ, ಮಹೇಶ್‌, ಹೇಮಾ ನಾಡಿಗ್‌, ದೀಪಿಕಾ, ಸಚಿನ್‌, ಪಲ್ಲವಿ, ಮೋನಿಕಾ, ಮಾಲತಿ ಮೈಸೂರು, ಯತೀಶ್, ನಿರ್ದೇಶಕ ಸಂತೋಷ್‌ ಗೌಡ, ಛಾಯಾಗ್ರಾಹಕ ದಯಾಕರ್, ಸಂಕಲನಕಾರ ಗುರುಮೂರ್ತಿ ಹೆಗಡೆ ಮುಂತಾದವರು ಸಮಾಧಿಗೆ ಹೂ ಹಣ್ಣು, ಹಾರ ಅರ್ಪಿಸಿ ಪುನೀತ್‌ ಪುಣ್ಯಸ್ಮರಣೆ ಮಾಡಿಕೊಂಡರು. ಎಲ್ಲರೂ ಪುನೀತ್‌ ಚಿತ್ರವಿರುವ ಷರ್ಟ್‌ ಧರಿಸಿ ಅಭಿಮಾನ […]Read More

ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣ: ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಕಳೆದ ಮೂರು ದಿನಗಳ ಹಿಂದೆ ಹಿಂದಿಯ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಖಿನ್ನತೆಯಿಂದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ವೈಶಾಲಿ ಡೆತ್ ನೋಟ್ ನಲ್ಲಿ ಆಕೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಕುರಿತು ಬರೆದಿದ್ದಾರೆ. ನಟಿ ವೈಶಾಲಿ ಇಂದೋರ್ ನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿದ್ದು ತನಿಖೆ ಕೈಗೊಂಡಿದ್ದರು. ಈ […]Read More

ಲವ್ ಜಿಹಾದ್ ಆರೋಪ: ಗಂಡನ ಕಿರುಕುಳ ನೆನೆದು ಕಣ್ಣೀರಿಟ್ಟ ಕನ್ನಡದ ಕಿರುತೆರೆ ನಟಿ

ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಪತಿಯ ಕಿರುಕುಳದಿಂದ ಬೇಸತ್ತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಧಾರವಾಹಿಯ ಸಹನಟನ ಜೊತೆ ಹಸೆಮಣೆ ಏರಿದ್ದ ದಿವ್ಯಾ ಪತಿಯ ವರ್ತನೆಯಿಂದಾಗಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಕಷ್ಟದ ಕಾಲದಲ್ಲಿ ಕೈ ಹಿಡಿದ ಹೆಂಡಿತಯನ್ನು ಪತಿ ಅಮ್ಜದ್ ಖಾನ್ ಹೀನಾಯವಾಗಿ ನಡೆಸಿಕೊಂಡಿದ್ದಾಗಿ ಆರೋಪ ಕೇಳಿ ಬಂದಿದೆ. 2015ರಲ್ಲಿ ಪ್ರಸಾರವಾದ ತಮಿಳಿನ ಕೆಳದಿ ಕಣ್ಮಣಿ ಧಾರವಾಹಿಯಲ್ಲಿ ದಿವ್ಯಾ ಹಾಗೂ ಅಮ್ಜದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ […]Read More

ಸೀರಿಯಲ್ ಪ್ರಿಯರಿಗೆ ಸಿಹಿಸುದ್ದಿ: ಅಕ್ಕ, ತಂಗಿ ಬಾಂದವ್ಯದ ‘ಭಾಗ್ಯಲಕ್ಷ್ಮೀ’ಗೆ ಸುಷ್ಮಾ ನಾಯಕಿ

ಸೀರಿಯಲ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೊಚ್ಚ ಹೊಸ ಧಾರಾವಾಹಿಯೊಂದು ಹೊಸ ಕಥೆಯೊಂದಿಗೆ ಮನೆ ಮಂದಿಗೆಲ್ಲ ಮನರಂಜನೆ ನೀಡಲು ರೆಡಿಯಾಗಿದೆ. ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಭಾಗ್ಯಲಕ್ಷ್ಮೀ ಎಂಬ ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಈಗಾಗಲೇ ಪ್ರೋಮೋ ಮೂಲಕ ಗಮನ ಸೆಳೆದ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 10ರಿಂದ ಪ್ರತಿದಿನ ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡದಲ್ಲಿ ಒಲವಿನ ನಿಲ್ದಾಣ, ಕೆಂಡಸಂಪಿಗೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ಲಕ್ಷಣ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳ ಜೊತೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ […]Read More

‘ಮತ್ತೆ ಮಯಾಮೃಗ’ ಮೂಲಕ ಕಿರುತೆರೆಗೆ ಮರಳಿದ ಟಿ ಎನ್ ಸೀತಾರಾಮ್

ಟಿ.ಎನ್.ಸೀತಾರಾಮ್ ನಿರ್ದೇಶನದ ಈ ಧಾರಾವಾಹಿಯ ಮುಂದುವರೆದ ಭಾಗ “ಮತ್ತೆ ಮಾಯಾಮೃಗ” ಎಂಬ ಹೆಸರಿನಿಂದ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಧಾರಾವಾಹಿ ತಂಡ ಕೆಲವು ವಿಷಯಗಳನ್ನು ಹಂಚಿಕೊಂಡಿತ್ತು. ಸಿನಿಮಾಗಳಿಗೆ ಸೀಕ್ವೆಲ್ ಬರುವುದು   ಸಾಮಾನ್ಯ. ಹಿರಿತೆರೆಗೆ ಹೋಲಿಸಿದರೆ ಕಿರುತೆರೆಯಲ್ಲಿ ಸೀಕ್ವೆಲ್​ಗಳು ಬರುವುದು ಬಹಳ ಕಡಿಮೆ. ಆದರೆ, ಈ ರೀತಿಯ ಪ್ರಯತ್ನವನ್ನು ಮಾಡಲು ಸೀತಾರಾಮ್ ಅವರು ಮುಂದಾಗಿದ್ದಾರೆ. ಬರೋಬ್ಬರಿ 25 ವರ್ಷಗಳ ಬಳಿಕ ‘ಮಾಯಾಮೃಗ’ ಧಾರಾವಾಹಿಯ ಸೀಕ್ವೆಲ್ ಬರುತ್ತಿದೆ.  ಇಷ್ಟೊಂದು ವರ್ಷಗಳ ಬಳಿಕ ಈ ಧಾರಾವಾಹಿಯ ಮುಂದುವರೆದ ಭಾಗ ತರುವುದು […]Read More

ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ ಮನಸ್ತಾಪ: ಅನಿರುದ್ಧ್ ಎರಡು ವರ್ಷ ಬ್ಯಾನ್

ಝೀ ಕನ್ನಡ ವಾಹಿನಿಯಲ್ಲಿ ಪ್ರವಾರವಾಗುವ ಖ್ಯಾತ ಧಾರಾವಾಹಿ ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿತ್ತು. ಇದೀಗ ನಟ ಅನಿರುದ್ಧ್ ರನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಅನಿರುದ್ಧ್ ಹಾಗೂ ಧಾರವಾಹಿ ತಂಡದ ಮಧ್ಯೆ ಮನಸ್ತಾಪ ಹೆಚ್ಚಾಗಿತ್ತು, ಜೊತೆಗೆ ಎರಡು ದಿನಗಳ ಹಿಂದ ಶೂಟಿಂಗ್ ನಿಂದ ಅನಿರುದ್ಧ್ ಹೊರಟು ಹೋಗಿದ್ದರು. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘಕ್ಕೆ […]Read More

ಅನಿರುದ್ಧ್ ಇಲ್ಲದೆ ನಡೆಯಿತು ‘ಜೊತೆ ಜೊತೆಯಲಿ’ ಧಾರವಾಹಿ ಶೂಟಿಂಗ್

ಝೀ ಕನ್ನಡದ ಖ್ಯಾತ ಧಾರವಾಹಿ ಜೊತೆ ಜೊತೆಯಲ್ಲಿ ತಂಡದಿಂದ ನಟ ಅನಿರುದ್ಧ್ ಅವರನ್ನು ಕೈ ಬಿಡಲಾಗಿದೆ. ಅನಿರುದ್ಧ್ ಹಾಗೂ ಧಾರವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿದ್ದು ಇಂದು ಅನಿರುದ್ಧ್ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಅನಿರುದ್ಧ್ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಹೊಸ ಕಲಾವಿದರನ್ನು ಧಾರವಾಹಿ ತಂಡ ಹುಡುಕುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜೊತೆ ಜೊತೆಯಲಿ ಧಾರವಾಹಿಯ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು ಜಗದೀಶ್, ‘ಜೊತೆ ಜೊತೆಯಲಿ ಧಾರಾವಾಹಿಗೆ ಕಥೆಯೇ ಹೀರೋ ಹಾಗೂ ಹಿರೋಯಿನ್. ಯಾರೇ ಇರಲಿ, ಇರದೇ ಇರಲಿ […]Read More

ತನ್ನನ್ನೇ ತಾನು ಮದುವೆಯಾದ ಕಿರುತೆರೆ ನಟಿ

ಕಿರುತೆರೆಯಲ್ಲಿ ಸಾಕಷ್ಟು ಶೋ ಮತ್ತು ಸೀರಿಯಲ್ ಮೂಲಕ ಸದ್ದು ಮಾಡಿರುವ ಕಾನಿಷ್ಕಾ ಸೋನಿ ಕೂಡ ಇದೇ ರೀತಿಯ ಮದುವೆಯಿಂದ ಸಿಕ್ಕಾಪಟ್ಟೆ ಆಗ್ತಿದ್ದಾರೆ. ತನ್ನನ್ನು ತಾನೇ ಮದುವೆಯಾಗಿರುವ ನಟಿ ಕಾನಿಷ್ಕಾ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. `ದಿಯಾ ಔರ್ ಬಾತಿ ಹಮ್’ ಧಾರವಾಹಿ ಖ್ಯಾತಿಯ ನಟಿ ಕಾನಿಷ್ಕಾ ಸೋನಿ ಇತ್ತೀಚಿನ ದಿನಗಳಲ್ಲಿ ತಮ್ಮ ಖಾಸಗಿ ವಿಷಯಗಳಿಗೆ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇತ್ತೀಚೆಗೆ […]Read More

‘ಜೊತೆ ಜೊತೆಯಲಿ’ ಧಾರವಾಹಿ ತಂಡದಲ್ಲಿ ಮನಸ್ತಾಪ: ಸೀರಿಯಲ್ ನಿಂದ ಹೊರ ಹೋಗ್ತಾರಾ ಅನಿರುದ್ಧ್?

ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲೊಂದು ಝಿ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ. ಧಾರವಾಹಿಯಲ್ಲಿ ನಟ ಅನಿರುದ್ಧ್ ಆರ್ಯವರ್ಧನ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ವೀಕ್ಷಕರಿಂದ ಈ ಧಾರವಾಹಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಇದೀಗ ಧಾರವಾಹಿ ತಂಡದಲ್ಲಿ ಕಿರಿಕ್ ಶುರುವಾಗಿದ್ದು ನಟ ಅನಿರುದ್ಧ್ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಹಿಂದೆ ಧಾರವಾಹಿಯ ನಟಿ ಮೇಘಾ ಶೆಟ್ಟಿ ತಂಡದ ಜೊತೆ ಕಿರಿಕ್ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಅವರು ಧಾರವಾಹಿಯಿಂದ ಹೊರ ನಡೆಯಲಿದ್ದು ಆ ಜಾಗಕ್ಕೆ ಮತ್ತೊಬ್ಬ ನಟಿ ಎಂಟ್ರಿಕೊಡ್ತಾರೆ […]Read More

ಹಸೆಮಣೆ ಏರಲು ಸಜ್ಜಾದ ಕಮಲಿ ಧಾರವಾಹಿಯ ಮತ್ತೊಂದು ಜೋಡಿ  

ಕಳೆದೊಂದು ದಿನಗಳ ಹಿಂದಷ್ಟೇ ಕಮಲಿ ಧಾರವಾಹಿ ಖ್ಯಾತಿಯ ನಿಂಗಿ ಅಲಿಯಾಸ್ ಅಂಕಿತಾ ಹಸೆಮಣೆ ಏರಿದ್ದರು. ಈ ಬೆನ್ನಲ್ಲೇ ಈ ಧಾರವಾಹಿಯ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಕಮಲಿ ಧಾರವಾಹಿಯ ಅನಿಕಾ ಅಲಿಯಾಸ್ ಗೇಬ್ರಿಯೆಲಾ ಮತ್ತು ಶಂಬು ಅಲಿಯಾಸ್ ಸುಹಾಸ್ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕಮಲಿ ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಗೇಬ್ರಿಯೆಲಾ ಹಾಗೂ ಸುಹಾಸ್ ಮಧ್ಯೆ ಪ್ರೀತಿ ಶುರುವಾಗಿದ್ದು ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲೇ ಈ […]Read More

Phone icon
Call Now
Reach us!
WhatsApp icon
Chat Now