• January 1, 2026

Tags : sandalwood news

ನಿರ್ದೇಶನದತ್ತ ನಟಿ ಶ್ರುತಿ ಹರಿಹರನ್ ಒಲವು: ನಟನೆಗೆ ಫುಲ್ ಸ್ಟಾಪ್ ಇಡ್ತಾರಾ ಲೂಸಿಯಾ

ಕಳೆದ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಾಗಿದ್ದ ನಟಿ ಶ್ರುತಿ ಹರಿಹರನ್ ಮತ್ತೆ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ನಿರ್ದೇಶನದತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಶ್ರುತಿ ತೀರ್ಮಾನ ಇದೀಗ ಅಭಿಮಾನಿಗಳ ಪ್ರಶ್ನೆಗೆ ಕಾರಣವಾಗಿದೆ. ಮಲಯಾಳಂ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಶ್ರುತಿ ಹರಿಹರನ್ ಗೆ ಖ್ಯಾತಿ ತಂದುಕೊಟ್ಟಿದ್ದು ಲೂಸಿಯಾ ಸಿನಿಮಾ. ಕನ್ನಡದ ಮೊದಲ ಸಿನಿಮಾದಲ್ಲೇ ಸದ್ದು ಮಾಡಿದ್ದು ಶ್ರುತಿ ಹರಿಹರನ್ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಿಗೆ […]Read More

ಚಿಕಿತ್ಸೆ ಫಲಕಾರಿಯಾಗದೆ ಕನ್ನಡದ ಹಿರಿಯ ನಟ ಲೋಹಿತಾಶ್ವ ನಿಧನ

ಸ್ಯಾಂಡಲ್ ವುಡ್ ನ ಹಿರಿಯ ನಟ ಲೋಹಿತಾಶ್ವ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಹಿತಾಶ್ವ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಲೋಹಿತಾಶ್ವ ನಟ ಶರತ್ ಲೋಹಿತಾಶ್ವ ಅವರ ತಂದೆ. ಸುಸ್ತು, ವಾಂತಿ-ಭೇದಿ, ಚಳಿ, ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಸಂದರ್ಭದಲ್ಲಿ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲೋಹಿತಾಶ್ವ ಅವರಿಗೆ ೮೦ ವರ್ಷ ವಯಸ್ಸಾಗಿತ್ತು. ಆಸ್ಪತ್ರೆಗೆ ದಾಖಲಾದ […]Read More

“ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರದ ಆಡಿಯೋ ರಿಲೀಸ್

ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯಲ್ಲಿ ತಮ್ಮ ಕೀರ್ತನೆಗಳ ಮೂಲಕ, ಪ್ರಸಿದ್ಧರಾಗಿರುವ ದಾಸಶ್ರೇಷ್ಠರಲ್ಲಿ ಪ್ರಸನ್ನ ವೆಂಕಟದಾಸರು ಪ್ರಮುಖರು. ರಾಯಚೂರು ಮೂಲದ ಪ್ರಸನ್ನ ವೆಂಕಟದಾಸರ ಜೀವನ ಮತ್ತು ಸಾಧನೆ ಆಧಾರಿತವಾಗಿರುವ ಈ ಚಿತ್ರ, ‘ಶ್ರೀಪ್ರಸನ್ನ ವೆಂಕಟದಾಸರು’ ಎಂಬ ಹೆಸರಿನಲ್ಲಿ  ಬೆಳ್ಳಿತೆರೆಗೆ ಬರುತ್ತಿದೆ. ವಿಜಯ್ ಕೃಷ್ಣ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಬಿಡುಗಡೆ ‌ಸಮಾರಂಭ ಇತ್ತೀಚಿಗೆ ನಡಯಿತು. ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ , ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ […]Read More

ಹಂಟರ್ ಆಗಿ ಕನ್ನಡದಕ್ಕೆ ಎಂಟ್ರಿಕೊಟ್ಟ ಹಾಲಿವುಡ್, ಬಾಲಿವುಡ್ ನಟ ಕಬೀರ್ ಬೇಡಿ

ಅಂತರರಾಷ್ಟ್ರೀಯ  ಖ್ಯಾತಿಯ ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಅವರು ಮೊಟ್ಟಮೊದಲ ಬಾರಿಗೆ  “ಹಂಟರ್” ( ನಿ: ವಿನಯ್) ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿರುತ್ತಾರೆ.  ಇದೀಗ ನಿರ್ಮಾಪಕ  ತ್ರಿವಿಕ್ರಮ ಸಪಲ್ಯ ರವರು ನಮ್ಮ ಭಾಷೆಯ ಚಿತ್ರಕ್ಕೂ ಅವರನ್ನು ಪರಿಚಯಿಸಿರುವುದು ಚಿತ್ರದ ಕುತೂಹಲವನ್ನು ಹೆಚ್ಚಿಸಿದೆ.ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ಮತ್ತು […]Read More

ಕೆಜಿಎಫ್ ತಾತನ ‘ನ್ಯಾನೋ ನಾರಾಯಣಪ್ಪ’ ಟ್ರೈಲರ್ ರಿಲೀಸ್: ಮುಂದಿನ ತಿಂಗಳು ಚಿತ್ರ ತೆರೆಗೆ

ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿಗಳಿಸಿರುವ ಕೆಜಿಎಫ್ ತಾತಾ ಎಂದೇ ಕರೆಸಿಕೊಳ್ಳೋ ಕೃಷ್ಣಾಜಿ ರಾವ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈಗ ಫುಲ್ ಬ್ಯುಸಿ. ‘ನ್ಯಾನೋ ನಾರಾಯಣಪ್ಪ’ ಸಿನಿಮಾದಲ್ಲಿ ಕೃಷ್ಣ ಜಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಬಿಡುಗಡೆಯ ಬಾಗಿಲಲ್ಲಿರುವ ಈ ಚಿತ್ರದ ಟ್ರೇಲರ್ ಪ್ರೇಕ್ಷಕರೆದುರು ತೆರೆದುಕೊಂಡಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಕುಮಾರ್ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ‘ನ್ಯಾನೋ ನಾರಾಯಣಪ್ಪ’. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೃಷ್ಣಾಜಿ ರಾವ್ […]Read More

‘ಗಜರಾಮ’ನಾದ ಡಿಂಗ್ರಿ ನಾಗರಾಜ್ ಪುತ್ರ: ರಗಡ್ ಲುಕ್ ನಲ್ಲಿ ರಾಜವರ್ಧನ್

ಮ್ಯಾಸಿವ್ ಸ್ಟಾರ್ ರಾಜವರ್ಧನ್ ಈಗ ಫುಲ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ರಾಜವರ್ಧನ್ ಅಕೌಂಟ್ ಗೆ ಹೊಸ ಚಿತ್ರವೊಂದು ಸೇರ್ಪಡೆಯಾಗಿದೆ. ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ ಸಾರಥ್ಯದಲ್ಲಿ ಮೂಡಿ ಬರ್ತಿರುವ ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ನಾಯಕನಾಗಿ ನಟಿಸುತ್ತಿದ್ದು, ಇದೀಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ರಗಡ್ ಲುಕ್ ನಲ್ಲಿ ಡಿಂಗ್ರಿ ನಾಗರಾಜ್ ಪುತ್ರ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರಾದ ಯೋಗರಾಜ್ ಭಟ್, ಸೂರಿ ಗರಡಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ […]Read More

ರಾಜಕೀಯಕ್ಕೆ ಎಂಟ್ರಿಕೊಟ್ಟ ಸ್ಯಾಂಡಲ್ ವುಡ್ ನಟಿ ಆರೋಹಿತ

ಸ್ಯಾಂಡಲ್‌ವುಡ್ ನಟಿ ಆರೋಹಿತ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಎಎಪಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಆರೋಹಿತ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ಇದೇ ವೇಳೆ ವಸಂತನಗರ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಬಯಕೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ ಆರೋಹಿತ ಅಲಿಯಾಸ್ ಪ್ರಿಯಾಂಕ ಬಿ.ಕಾಂ ಪದವೀಧರೆಯಾಗಿದ್ದು ವಿದ್ಯಾಭ್ಯಾಸದ ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕಿರಿಕ್ ಪಾರ್ಟಿ,ಗೌಡ್ರು ಹೋಟೆಲ್,ಜಗ್ಗಿ, ಅಧ್ಯಕ್ಷ ಸೇರಿದಂತೆ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಆರೋಹಿತ ಇದೀಗ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ […]Read More

‘ಸೂರ್ಯ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ ಡಾಲಿ ಧನಂಜಯ್

ಹಿರಿಯ ನಿರ್ದೇಶಕ, ಕಲಾವಿದ ಬಿ. ಸುರೇಶ್‌ ಅವರ ಜೊತೆ ಸಾಕಷ್ಟು ವರ್ಷ ನಿರ್ದೇಶನ ವಿಭಾಗದಲ್ಲಿ  ಕೆಲಸಮಾಡಿ ಅನುಭವ ಪಡೆದಿರುವ ಸಾಗರ್‌ ಈಗ  ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನದ  ಚಿತ್ರದ ಹೆಸರು  ಸೂರ್ಯ. `ಪವರ್‌ ಆಫ್‌ ಲವ್‌’ ಎಂಬ ಟ್ಯಾಗ್‌ಲೈನ್‌ ಇದಕ್ಕಿದೆ. ಯುವ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕ ನಟ. ಹೆಸರಿನಷ್ಟೇ ಪವರ್‌ಫುಲ್‌ ಕಥೆಯನ್ನು ಸಿದ್ಧಪಡಿಸಿಕೊಂಡು ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ ಡೈರೆಕ್ಟರ್‌ ಸಾಗರ್‌. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್‌ ‌ಲುಕ್‌ ಅನಾವರಣಗೊಂಡಿದ್ದು, ಡಾಲಿ ಧನಂಜಯ್‌ […]Read More

ಚಾಪಿಂಯನ್ ಸಿನಿಮಾದ ಟ್ರೈಲರ್ ರಿಲೀಸ್: ಚಿತ್ರಕ್ಕೆ ಸಾಥ್ ನೀಡಿದ ಡೈನಾಮಿಕ್ ಸ್ಟಾರ್ ದೇವರಾಜ್

ಸಚಿನ್ ಧನಪಾಲ್ ಹಾಗೂ ಅದಿತಿ ಪ್ರಭುದೇವ ನಾಯಕ, ನಾಯಕಿಯಾಗಿ ನಟಿಸಿರುವ “ಚಾಂಪಿಯನ್” ಚಿತ್ರದ ಟ್ರೇಲರ್ ಡೈನಾಮಿಕ್ ಸ್ಟಾರ್ ದೇವರಾಜ್ ಅವರಿಂದ ಇತ್ತೀಚಿಗೆ ಬಿಡುಗಡೆಯಾಯಿತು.‌ ಚಿತ್ರ ಅಕ್ಟೋಬರ್ 14 ರಂದು ತೆರೆಗೆ ಬರುತ್ತಿದೆ. ನಾನು ಹದಿನಾಲ್ಕು ವರ್ಷಗಳ ಹಿಂದೆ ನನ್ನ ಸ್ನೇಹಿತ ಸಚಿನ್ ಧನಪಾಲ್ ಗೆ ಹೇಳಿದ್ದೆ.  ನನಗೇನಾದರೂ ತುಂಬಾ ದುಡ್ಡು ಬಂದರೆ, ನಿನ್ನನ್ನು ಸಿನಿಮಾ ಹೀರೋ ಮಾಡುತ್ತೀನಿ ಎಂದು. ಈಗ ಆ ಮಾತು ನಿಜವಾಗಿದೆ. ಸಚಿನ್ ಧನಪಾಲ್ ನಾಯಕನಾಗಿ ನಟಿಸಿರುವ “ಚಾಂಪಿಯನ್” ಚಿತ್ರವನ್ನು ನಾನು ನಿರ್ಮಾಣ ಮಾಡಿದ್ದೀನಿ. […]Read More

ಸರ್ಕಾರಿ ಶಾಲೆಗಳ ಸಮಸ್ಯೆ ತೆರೆದಿಡುವ ‘ಕರುನಾಡ ಶಾಲೆ’ಚಿತ್ರದ ಹಾಡು ಬಿಡುಗಡೆ

ಶಿಕ್ಷಣ ಖಾಸಗೀಕರಣವಾದ ಮೇಲಂತೂ ಸರ್ಕಾರಿ ಶಾಲೆಗಳ ಪರಿಸ್ಥಿತಿಯಂತೂ ಅಧಪತನದತ್ತ ಸಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರು ಅದು ಯಶಸ್ಸು ಕಂಡಿಲ್ಲ. ಹೀಗಿದ್ಮೇಲೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಬಗ್ಗೆ ವಿವರಿಸೋದು ಬೇಕಾಗಿಲ್ಲ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲಿರುವ ಪ್ರಯತ್ನಕ್ಕೆ ಕರುನಾಡ ಶಾಲೆ ಸಿನಿಮಾ ಕೈ ಹಾಕಿದೆ. ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ   ಚಿತ್ರತಂಡವು ಶಿಕ್ಷಕರ ದಿನಾಚರಣೆ ದಿನದಂದು […]Read More

Phone icon
Call Now
Reach us!
WhatsApp icon
Chat Now