• January 1, 2026

Tags : sandalwood

ಜನ ಸೇವೆಗಾಗಿ ಈ ಬಾರಿ ಕಾಂಗ್ರೆಸ್ ನಿಂದ ಚುನಾವಣೆಗೆ ನಿಲ್ತೀನಿ: ನಟಿ ಭಾವನಾ

ಕಾಂಗ್ರೆಸ್ ನಿಂದ ಈ ಬಾರಿ ನಾನೂ ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ಚುನಾವಣೆಗೆ ನಿಲ್ತೀನಿ ಎಂದು ಕನ್ನಡದ ಖ್ಯಾತ ನಟಿ ಭಾವನಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ಭಾವನ, ನಾನು ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳ್ತೀನಿ. ಜನರ ಸೇವೆಗಾಗಿ ನಾನು ಚುನಾವಣೆಗೆ ನಿಲ್ತೀನಿ. ಮುಂದೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದರು. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಹುಲ್ ಗಾಂಧಿ […]Read More

ಸ್ಯಾಂಡಲ್ ವುಡ್ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ ಲೋಹಿತಾಶ್ವ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ನಿಗಾ ಘಟಕದಲ್ಲಿ ಲೋಹಿತಾಶ್ವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲೋಹಿತಾಶ್ವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಟ ಲೋಹಿತಾಶ್ವ ಖ್ಯಾತ ಖಳ ನಟ ಶರತ್ ಲೋಹಿತಾಶ್ವ ಅವರ ತಂದೆಯಾಗಿದ್ದು ಲೋಹಿತಾಶ್ವ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.Read More

ಸಿನಿಮಾಗಾಗಿ ಮನೆ ಮಠ ಕಳೆದುಕೊಂಡ್ರು ಜನರ ಪ್ರೀತಿ ಗಳಿಸಿದೆ: ಹಿರಿಯ ನಟ ದ್ವಾರಕೀಶ್

ಸಿನಿಮಾಗಳಿಗಾಗಿ ನಾನು ಮನೆ, ಆಸ್ತಿಗಳನ್ನು ಕಳೆದುಕೊಂಡೆ. ಎಲ್ಲವನ್ನು ಮಾರಿ ಕಷ್ಟಗಳನ್ನು ಅನುಭವಿಸಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾನು ಮಾರಲಿಕ್ಕೇ ಆಗದೆ ಇರುವ ಮನೆಯನ್ನು ಮಂತ್ರಾಲಯದಲ್ಲಿ ಕಟ್ಟಿದ್ದೇನೆ. ಕಳೆದುಕೊಳ್ಳುವುದಕ್ಕೆ ಆಗದೆ ಇರುವಂತಹ ಆಸ್ತಿಯನ್ನು ಚಿತ್ರರಂಗದಲ್ಲಿ ಸಂಪಾದಿಸಿದ್ದೇನೆ’ ಎಂದು ಹೇಳುತ್ತ ಹಿರಿಯ ನಟ ದ್ವಾರಕೀಶ್‌ ಭಾವುಕರಾದರು. ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ದ್ವಾರಕೀಶ್, ನಾನು 20 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಇದುವರೆಗೂ 300ಕ್ಕೂ […]Read More

‘The Darwin’s in ದಂಡಿದುರ್ಗ’ ಹೊಸಬರ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಅಜಯ್

ಕನ್ನಡ ಸಿನಿ ಉದ್ಯಾನವನದಲ್ಲಿ ವಿಭಿನ್ನ ಮಾದರಿಯ ಸಿನಿಮಾಗಳ ಮೂಲಕ ಹೊಸ ಹೊಸ ತಂಡಗಳ ಆಗಮನವಾಗುತ್ತಿದೆ. ಈಗ ಅದೇ ಹಾದಿಯಲ್ಲಿ ಹಾದಿಯಲ್ಲಿ ಯುವ ಸಿನಿಮೋತ್ಸಾಹಿ ತಂಡವೊಂದು ಚಿತ್ರರಂಗ ಪ್ರವೇಶಿಸಿದ್ದು, ‘The Darwin’s in ದಂಡಿದುರ್ಗ’ ಎಂಬ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಕೆಲಸ ಮಾಡಿರುವ ಅನುಭವವಿರುವ ತ್ರಿಭುವನ್ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರ ಮೂಲಕ ತ್ರಿಭುವನ್ ನಿರ್ದೇಶಕರಾಗಿ […]Read More

ಸೆಪ್ಟೆಂಬರ್ ನಲ್ಲಿ ತೆರೆಗೆ ಬರಲಿದೆ ಮಹಿಳಾ ಪ್ರಧಾನ ‘ಮರ್ದಿನಿ’ ಸಿನಿಮಾ

ಅಂಕಿತ್ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ನಿರ್ಮಾಣ ಮಾಡಿರುವ, ಕಿರಣ್ ಕುಮಾರ್ ವಿ ನಿರ್ದೇಶಿಸಿರುವ “ಮರ್ದಿನಿ” ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು. “ಮರ್ದಿನಿ” ಇದೊಂದು ಮಹಿಳಾ ಪ್ರಧಾನ ಚಿತ್ರ. ರಿತನ್ಯ ಹೂವಣ್ಣ “ಮರ್ದಿನಿ” ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.  ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೊರೋನ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ […]Read More

ಮಾನ್ವಿತಾ ಕಾಮತ್ ತಾಯಿಯ ಸಹಾಯಕ್ಕೆ ಧಾವಿಸಿದ ಸೋನು ಸೂದ್: ರಿಯಲ್ ಹೋರೋ ಎಂದು

ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ ಸಹಾಯ ಮಾಡಿ ರಿಯಲ್ ಹೀರೋ ಅನಿಸಿಕೊಂಡಿದ್ದರು. ಆ ಬಳಿಕ ಸೋನು ಸೂದ್ ಸೋಷಿಯಲ್ ಸರ್ವಿಸ್ ಮೂಲಕವೇ ಅಭಿಮಾನಿಗಳ ಮನ ಗೆದ್ದು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಸೋನು ಸೂಡ್ ಕಡೆಯಿಂದ ಕನ್ನಡದ ನಟಿ ಮಾನ್ವಿತಾ ಕಾಮತ್ ಕುಟುಂಬಕ್ಕೆ ಸಹಾಯ ಸಿಕ್ಕಿದೆ. ಇದನ್ನು ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ […]Read More

‘ಸಂಭ್ರಮ’ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಿದ ಚಿತ್ರತಂಡ

ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ ಸಂಭ್ರಮ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಆಡೋಕೆ ಸಾವಿರ ಆಟ ಎಂಬ ಸಾಹಿತ್ಯವಿರುವ ಹಾಡು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣವನ್ನು ಹಾಗೂ ಒಂದಷ್ಟು ಫಿಲಾಸಪಿ ಮತ್ತು ಹೆಚ್ಚು ನೆನಪುಗಳನು ನೆನಪಿಸುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, […]Read More

ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಿದ ಕೀರ್ತಿ ಸುರೇಶ್: ಸ್ಯಾಂಡಲ್ ವುಡ್ ಗೆ

ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್ ಸಾಲು ಸಾಲು ಸಿನಿಮಾಗಳನ್ನು ಹೊರ ತರುತ್ತಿದೆ. ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್ ಈಗಾಗ್ಲೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು ಕೆಜಿಎಫ್ ಚಿತ್ರದ ಮೂಲಕ ದೇಶ-ವಿದೇಶದಲ್ಲೂ ಸದ್ದು ಮಾಡುತ್ತಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಮತ್ತೊಂದು ಹೊಸ ನ್ಯೂಸ್ ಸಿಕ್ಕಿದೆ. ಕನ್ನಡದ ಜೊತೆಗೆ ಪರಭಾಷೆಯ ಸ್ಟಾರ್ ಗಳ ಜೊತೆಗೆ ಹೊಂಬಾಳೆ ಫಿಲ್ಸ್ಮ್ ಕೈ ಜೋಡಿಸಿದೆ. ಇತ್ತೀಚೆಗಷ್ಟೇ ಮಲಯಾಳಂ ಸ್ಟಾರ್ ನಟ ಫಹಾದ್ ಜೊತೆ ಸಿನಿಮಾ […]Read More

ಹನಿಟ್ರ್ಯಾಪ್ ಆರೋಪ: ಸಿನಿಮಾ ರಿಲೀಸ್ ಗೂ ಮುನ್ನವೇ ಸ್ಯಾಂಡಲ್ ವುಡ್ ನಟನ ಬಂಧನ

ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಮ್ ಮಾಡಿದ ಆರೋಪದ ಮೇಲೆ ಕನ್ನಡದ ಯುವ ನಟ ಯುವ ಅಲಿಯಾಸ್ ಯುವರಾಜ್ ಎಂಬುವವನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟ ಇದೀಗ ಹನಿಟ್ರ್ಯಾಮ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ನಟ ಯುವರಾಜ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿರೋ ಉದ್ಯಮಿಯೊಂದಿಗೆ ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. […]Read More

ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರೂಪ್ ಭಂಡಾರಿ: ನೆಚ್ಚಿನ ನಟನಿಗೆ ಶುಭಾಶಗಳ ಸುರಿಮಳೆ

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ನಿರೂಪ್ ಭಂಡಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವರ್ಷಕ್ಕೆ ಕಾಲಿಟ್ಟಿರೋ ನಿರೂಪ್ ಭಂಡಾರಿಗೆ ಅಭಿಮಾನಿಗಳು ಶುಭಾಷಯ ಕೋರಿದ್ದಾರೆ. ಆಗಸ್ಟ್ 13ರಂದು ಪುತ್ತೂರಿನಲ್ಲಿ ಜನಿಸಿದ ನಿರೂಪ್ ಭಂಡಾರಿ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರು. ನಿರೂಪ್ ಭಂಡಾರಿ ತಂದೆ ಸುಧಾಕರ್ ಭಂಡಾರಿ ನಿರ್ದೇಶಕರಾಗಿದ್ದು ಅಣ್ಣ ಅನೂಪ್ ಭಂಡಾರಿ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ಸಾಹಿತಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧರರಾದ ನಿರೂಪ್ […]Read More

Phone icon
Call Now
Reach us!
WhatsApp icon
Chat Now