• February 10, 2026

Tags : muhurtha

‘ಉತ್ತರಕಾಂಡ’ ಚಿತ್ರದ ಮುಹೂರ್ತದಲ್ಲಿ ಮಿಂಚಿದ ರಮ್ಯಾ, ಡಾಲಿ

ಸ್ಯಾಂಡಲ್ ವುಡ್ ನ ಮೋಹಕ ತಾರೆ ಅಭಿಮಾನಿಗಳಿತೆ ಮತ್ತೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ಸುದ್ದಿ ನೀಡಿದ್ದ ರಮ್ಯಾ ಬಳಿಕ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಇದೀಗ ರಮ್ಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾದ ಮೂಲಕ ರಮ್ಯಾ ಕಂಬ್ಯಾನ್ ಆಗುವ ಸುದ್ದಿ ನೀಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅದರಲ್ಲಿ ರಮ್ಯಾ […]Read More

ಡಾ.ರಾಜ್ ಅಭಿಮಾನಿಯ ‘ಕಾಳಿಪ್ರಸಾದ್’ ಚಿತ್ರಕ್ಕೆ ಭೂಮಿಕಾ ಥಿಯೇಟರ್ ನಲ್ಲಿ ಚಾಲನೆ

ವರನಟ ಡಾ. ರಾಜಕುಮಾರ್ ಅವರ ಅಭಿಮಾನಿ ಸಮೂಹ ಬಹಳ ದೊಡ್ಡದು. ಕರ್ನಾಟಕ ಮಾತ್ರವಲ್ಲ.‌ ಇಡೀ ವಿಶ್ವದಾದ್ಯಂತ ರಾಜಕುಮಾರ್ ಅವರನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ. ತಮಿಳುನಾಡಿನವರಾದ ಕೆ.ವಿ.ಎಸ್ ರಾಯ್ ಅವರು ಸಹ ಅಣ್ಣವ್ರ ದೊಡ್ಡ ಅಭಿಮಾನಿ. “ಗುರಿ” ಚಿತ್ರದಲ್ಲಿ ಡಾ.ರಾಜ್ ಹೆಸರು ಕಾಳಿಪ್ರಸಾದ್ ಎಂದು. ಈಗ ಅದೇ ಹೆಸರಿನಲ್ಲಿ ಕೆ.ವಿ.ಎಸ್ ರಾಯ್ ಚಿತ್ರವನ್ನು ಆರಂಭಿಸಿದ್ದಾರೆ. “ಕಾಳಿಪ್ರಸಾದ್” ಚಿತ್ರದ ಮುಹೂರ್ತ ಸಮಾರಂಭ ಭೂಮಿಕಾ ಚಿತ್ರಮಂದಿರದಲ್ಲಿ ನಡೆಯಿತು. ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ “ಕಾಳಿಪ್ರಸಾದ್” ಚಿತ್ರಕ್ಕೆ ಚಾಲನೆ ನೀಡಿದರು. ಅನೇಕ ಗಣ್ಯರು […]Read More

ಸೆಟ್ಟೇರಿತು ಪ್ರಿಯಾಂಕ ಉಪೇಂದ್ರ ನಟನೆಯ ‘ಕೈಮರ’ ಚಿತ್ರ

ನಟಿ ಪ್ರಿಯಾಂಕ ಉಪೇಂದ್ರ ಒಂದರ ಹಿಂದೊಂದಂತೆ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಾರೆ. ಈಗಾಗ್ಲೆ ಪ್ರಿಯಾಂಕ ನಟನೆಯ ಐದಾರು ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದು ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಈ ಮಧ್ಯೆ ಪ್ರಿಯಾಂಕ ನಟನೆಯ ಹೊಸ ಸಿನಿಮಾದ ಮುಹೂರ್ತ ವಿಜಯದಶಮಿಯಂದು ನೆರವೇರಿದೆ. ಗೌತಮ್ ವಿಮಲ್ ನಿರ್ದೇಶನದ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ, ಪ್ರಿಯಮಾಣಿ ಹಾಗೂ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ವಿ.ಮತ್ತಿಯಳಗನ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರಕ್ಕೆ ”ಕೈಮರ” ಎಂದು ಟೈಟಲ್ ಇಡಲಾಗಿದ್ದು ರಾಜರಾಜೇಶ್ವರಿ ನಗರದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ವಿಜಯ […]Read More

ಸೆಟ್ಟೇರಿತು ಶಶಾಂಕ್, ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಹೊಸ ಸಿನಿಮಾ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಶಶಾಂಕ್ ಮತ್ತೆ ಬ್ಯುಸಿಯಾಗಿದ್ದಾರೆ. ಲವ್ 360 ಸಿನಿಮಾದ ಬಳಿಕ ಶಶಾಂಕ್ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಂಡಿದ್ದು ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಮಾಡಿ ಮುಗಿಸಿದ್ದಾರೆ. ಶಶಾಂಕ್ ಸಿನಿಮಾಸ್ ಮತ್ತು ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ  ಬಣ್ಣ ಹಚ್ಚುತ್ತಿದ್ದಾರೆ. ಸಿಕ್ಸರ್ ಸಿನಿಮಾದ ಮೂಲಕ ನಿರ್ದೇಶಕನಾಗಿ ಸಿನಿ ಜರ್ನಿ ಆರಂಭಸಿದ ಶಶಾಂಕ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಯಶ್ ಹಾಗೂ ರಾಧಿಕಾ ಪಂಡಿತ್ ನಟನೆಯ ಮೊಗ್ಗಿನ ಮನಸ್ಸು […]Read More

‘The Darwin’s in ದಂಡಿದುರ್ಗ’ ಹೊಸಬರ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಅಜಯ್

ಕನ್ನಡ ಸಿನಿ ಉದ್ಯಾನವನದಲ್ಲಿ ವಿಭಿನ್ನ ಮಾದರಿಯ ಸಿನಿಮಾಗಳ ಮೂಲಕ ಹೊಸ ಹೊಸ ತಂಡಗಳ ಆಗಮನವಾಗುತ್ತಿದೆ. ಈಗ ಅದೇ ಹಾದಿಯಲ್ಲಿ ಹಾದಿಯಲ್ಲಿ ಯುವ ಸಿನಿಮೋತ್ಸಾಹಿ ತಂಡವೊಂದು ಚಿತ್ರರಂಗ ಪ್ರವೇಶಿಸಿದ್ದು, ‘The Darwin’s in ದಂಡಿದುರ್ಗ’ ಎಂಬ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಕೆಲಸ ಮಾಡಿರುವ ಅನುಭವವಿರುವ ತ್ರಿಭುವನ್ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರ ಮೂಲಕ ತ್ರಿಭುವನ್ ನಿರ್ದೇಶಕರಾಗಿ […]Read More

ವೇಮಗಲ್ ಜಗನ್ನಾಥ ರಾವ್  ನಿರ್ದೇಶನದ “ನನ್ನ ಹುಡುಕಿ ಕೊಡಿ” ಚಿತ್ರದಲ್ಲಿ ಧನ್ವಿತ್ ಗೆ

ಕನ್ನಡ ಚಿತ್ರರಂಗಕ್ಕೆ “ತುಳಸಿದಳ” ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ನಿರ್ದೇಶನದ “ನನ್ನ ಹುಡುಕಿ ಕೊಡಿ” ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನಡೆಯಿತು. ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಆರಂಭ ಫಲಕ ತೋರಿದರು. ನಿರ್ದೇಶಕ ಮಹೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ಕನಕಪುರದ ಧನ್ವಿತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ, ಬಂಡವಾಳವನ್ನು ಹೂಡುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಚಿತ್ರದ […]Read More

ವಿಜ್ಞಾನ ಮತ್ತು ಪುರಾಣ ಮಿಶ್ರಣದ ’ಧ್ರುವ 369’ ಚಿತ್ರದಲ್ಲಿ ರಾಜ್ಯಪಾಲರಾದ ರಾಘವೇಂದ್ರ ರಾಜ್

ನೂತನ ಶ್ರೀರ್ಷಿಕೆ ಹೊಂದಿರುವ ’ಧ್ರುವ 369’ ಚಿತ್ರದ ಮುಹೂರ್ತ ಸಮಾರಂಭವು ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ರಮೇಶ್‌ಭಟ್  ಕ್ಲಾಪ್ ಮಾಡಿದರೆ, ’ಟಕ್ಕರ್’ ಖ್ಯಾತಿಯ ನಟ ಮನೋಜ್‌ಕುಮಾರ್ ಕ್ಯಾಮಾರ ಆನ್ ಮಾಡಿದರು. ಅಚಿಂತ್ಯ: ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಮಂಗಳೂರಿನ ಶ್ರೀಕೃಷ್ಣ ಕಾಂತಿಲ ಗ್ರಾಫಿಕ್ಸ್ ಡಿಸೈನರ್ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಶಂಕರ್‌ನಾಗ್.ಎಸ್.ಎಸ್. ಅವರಿಗೆ ಎರಡನೇ ಅವಕಾಶ. ಆರೋಗ್ಯದಲ್ಲಿ […]Read More

ವಿಜಯ್ ರಾಘವೇಂದ್ರ ಹಾಗೂ ಹರ್ಷಿಕಾ ನಟನೆಯ ‘ಕಾಸಿನ ಸರ’ ಚಿತ್ರದ ಮುಹೂರ್ತ

ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ಹರ್ಷಿಕಾ ಪೂಣಚ್ಚ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮನ ಗೆಲ್ಲೋಕೆ ರೆಡಿಯಾಗಿದ್ದಾರೆ. ಕೊಡಗಿನ ಕುವರಿಗೆ ನಟ ವಿಜಯ್ ರಾಘವೇಂದ್ರ ಸಾಥ್ ನೀಡುತ್ತಿದ್ದಾರೆ. ಹಿರಿಯ ನಿರ್ದೇಶಕ ನಂಜುಂಡೇಗೌಡ ನಿರ್ದೇಶನದ ಕಾಸಿನ ಸರ ಸಿನಿಮಾದಲ್ಲಿ ನಟಿ ಹರ್ಷಿಕಾ ಪೂಣಚ್ಚ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗಷ್ಟೇ ನೆರವೇರಿದ್ದು ಸಚಿವ ಎಸ್ ಟಿ ಸೋಮಶೇಖರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಾಸಿನ ಸರ […]Read More

Phone icon
Call Now
Reach us!
WhatsApp icon
Chat Now