• January 1, 2026

Tags : banaras

ನಟ ಝೈದ್ ಖಾನ್ ಜೊತೆ ಬನಾರಸ್ ಚಿತ್ರ ವೀಕ್ಷಿಸಿದ ಸಿದ್ದರಾಮಯ್ಯ

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅದ್ದೂರಿ ಬಜೆಟ್ ನಲ್ಲಿ ರೆಡಿಯಾದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ನಟ ಝೈದ್ ಖಾನ್ ಜೊತೆ ಚಿತ್ರ ವೀಕ್ಷಿಸಿ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. `ಝೈದ್ ಖಾನ್ ಹಾಗೂ ಸೋನಲ್‌ ಮಾಂಟೇರೋ ಅಭಿನಯದ […]Read More

ಇಂದು ಬನಾರಸ್ ಸಿನಿಮಾ ರಿಲೀಸ್: ಸಾವಿರಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಝೈದ್ ಖಾನ್

ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ಚೊಚ್ಚಲ ಚಿತ್ರ ಬನಾರಸ್ ಇಂದು ಸಖತ್ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಸುಮಾರು ಒಂದು ಸಾವಿರ ಥಿಯೇಟರ್ ಗಳಲ್ಲಿ ಬನಾರಸ್ ತೆರೆಗೆ ಬರಲಿದ್ದು ಈ ಮೂಲಕ ಹೊಸ ನಟನ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿ ಸದ್ದು ಮಾಡಲು ರೆಡಿಯಾಗಿದೆ ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬನಾರಸ್ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಮೊದಲು ಕನ್ನಡ […]Read More

ರಾಜ್ಯೋತ್ಸವದಂದು ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ‘ಬನಾರಸ್’ ಹೀರೋ

ಕರ್ನಾಟಕದ ಬಹುಭಾಗಗಳಲ್ಲಿ ಯಶಸ್ವಿಯಾಗಿ ರೋಡ್ ಶೋಗಳನ್ನು ನಡೆಸಿದ್ದ ಬನಾರಸ್ ಹೀರೋ ಝೈದ್ ಖಾನ್ ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ವಿಶೇಷವೆಂದರೆ, ಸದಾ ಭಾಷೆ ಮತ್ತು ಗಡಿ ವಿವಾದದಿಂದ ಸದ್ದು ಮಾಡುವ ಬೆಳಗಾವಿಯ ನೆಲದಲ್ಲಿಯೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ನಿಮಿತ್ತವಾಗಿ ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ ಬೆಳಗಾವಿ ಸೀಮೆಯ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯ್ತು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಮನ್ಸೂರ್, ಕನ್ನಡ ರಕ್ಷಣಾ ವೇದಿಕೆಯ ರಾಜು ಕಲ್ಲೂರ್ ಮುಂತಾದವರು […]Read More

ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ‘ಬನಾರಸ್’ ಯಾತ್ರೆ!

ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಚಿತ್ರ ಬಿಡುಗಡೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರ ನವೆಂಬರ್ ೪ರಂದು ದೇಶಾದ್ಯಂತ ತೆರೆಗಾಣಲಿದೆ. ಇದುವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಬನಾರಸ್ ಅನ್ನು ಮುನ್ನೆಲೆಗೆ ತರಲಾಗಿದೆ. ಇದೀಗ ಕಡೇಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ ಊರಿಂದೂರಿಗೆ ಬನಾರಸ್ ಯಾತ್ರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ೮.೩೦ಕ್ಕೆ ಸರಿಯಾಗಿ, ಬೆಂಗಳೂರಿನ ಟೌನ್ ಹಾಲ್‌ನಿಂದ ಈ ಯಾತ್ರೆ ಆರಂಭವಾಗಿದೆ. ಅಲ್ಲಿಂದ ಹೊರಟ ಬನಾರಸ್ ಯಾತ್ರೆ ಆ ನಂತರದಲ್ಲಿ […]Read More

ಹುಬ್ಬಳಿಯಲ್ಲಿ ಅದ್ದೂರಿಯಾಗ ನಡೆಯಿತು ಬನಾರಸ್ ಪ್ರೀರಿಲೀಸ್ ಕಾರ್ಯಕ್ರಮ

ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ ಖಾನ್ ನಟನೆಯ ಬನಾರಸ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಅದ್ದೂರಿಯಾಗಿ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಬನಾರಸ್ ಸಿನಿಮಾ ಈಗಾಗ್ಲೆ ಟ್ರೈಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ಮೊದಲ ಚಿತ್ರದಲ್ಲೇ ಝೈದ್ ಖಾನ್ ಭರವಸೆ ಮೂಡಿಸಿದ್ದು ಗಾಂಧಿನಗರದಲ್ಲಿ […]Read More

‘ಗಂಗಾರತಿ’ಯಲ್ಲಿ ಪಾಲ್ಗೊಂಡ ‘ಬನಾರಸ್’ ಜೋಡಿ ಝೈದ್, ಸೋನಾಲ್

ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ದಿನಗಳು ಮಾತ್ರವೇ ಭಾಕಿ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು ಇದೇ ಕಾರಣಕ್ಕೆ ಭರ್ಜರಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದೆ ಬನಾರಸ್ ಸಿನಿಮಾ ತಂಡ. ಸದ್ಯ ಹಿಂದಿ ಪ್ರಬಲವಾಗಿರುವ ಸ್ಥಳಗಳಲ್ಲಿ ಬನಾರಸ್ ತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಇದೇ ಮೊದಲ ಭಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಝೈದ್ […]Read More

ತಮಿಳುನಾಡಿನಲ್ಲಿ ಬನಾರಸ್ ವಿತರಣಾ ಹಕ್ಕು ಪಡೆದ ಶಕ್ತಿ ಫಿಲಂ ಫ್ಯಾಕ್ಟರಿ!

ಝೈದ್ ಖಾನ್ ನಾಯಕನಾಗಿ ನಟಿಸಿರುವ ಪ್ಯಾನಿಂಡಿಯಾ ಚಿತ್ರ ಬನಾರಸ್. ಒಂದು ಯಶಸ್ವೀ ಸಿನಿಮಾ ಹೇಗೆಲ್ಲ ಸದ್ದು ಮಾಡಬಹುದೋ, ಆ ದಿಕ್ಕಿನಲ್ಲೆಲ್ಲ ವ್ಯಾಪಕವಾಗಿ ಸುದ್ದಿ ಮಾಡುತ್ತಾ ಬನಾರಸ್ ಬಿಡುಗಡೆಯ ಹಾದಿಯಲ್ಲಿದೆ. ಸಾಮಾನ್ಯವಾಗಿ ಪ್ಯಾನಿಣಂಡಿಯಾ ಮಟ್ಟದಲ್ಲಿ ಯಾವ ಸಿನಿಮಾವನ್ನಾದರೂ ನೆಲೆಗಾಣಿಸಬೇಕೆಂದರೆ, ಅದರಲ್ಲಿ ವಿತರಣೆಯ ಜವಾಬ್ದಾರಿ ಪಡೆಯುವ ಸಂಸ್ಥೆಗಳ ಪಾತ್ರವೂ ಬಹು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಬನಾರಸ್‌ನದ್ದು ಯಶಸ್ವೀ ಯಾನ. ಯಾಕೆಂದರೆ, ನಾನಾ ಭಾಷೆಗಳಲ್ಲಿ ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿರುವ ಸಂಸ್ಥೆಗಳೇ ಬನಾರಸ್ ಸಾರಥ್ಯ ವಹಿಸಿಕೊಂಡಿವೆ. ಇದೀಗ […]Read More

‘ಬನಾರಸ್’ ವಿತರಣೆ ಹಕ್ಕು ಖರೀದಿಸಿದ ಖ್ಯಾತ ಬಾಲಿವುಡ್ ಸಂಸ್ಥೆ

ಕನ್ನಡದ ಜೊತೆಗೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಬನಾರಸ್ ಸಿನಿಮಾದ ಬಗ್ಗೆ ಈಗಾಗ್ಲೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಕ್ರಿಯೇಟ್ ಆಗಿದೆ. ಈಗಾಗ್ಲೆ ಟ್ರೈಲರ್ ದೊಡ್ಟ ಮಟ್ಟದಲ್ಲಿ ಸದ್ದು ಮಾಡಿದ್ದು ಬನಾರಸ್ ಸಿನಿಮಾದ ಡಿಸ್ಟ್ರಿಬ್ಯೂಷನ್ ರೈಟ್ಸ್ ನ ದೊಡ್ಡ ದೊಡ್ಡ ಸಂಸ್ಥೆಗಳು ಖರೀದಿ ಮಾಡುತ್ತಿದೆ. ಇದೀಗ ಚಿತ್ರತಂಡದ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದೇ ನವೆಂಬರ್ 4ರಂದು ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗ್ಲೇ […]Read More

ಬನಾರಸ್ ಸಿನಿಮಾದ ಕರ್ನಾಟಕ ವಿತರಣ ಹಕ್ಕು ಪಡೆದ ಡಿ ಬೀಟ್ಸ್

ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಸಖತ್ ಅದ್ದೂರಿಯಾಗಿ ಎಂಟ್ರಿಕೊಟ್ಟಿದ್ದಾರೆ. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಈಗಾಗ್ಲೆ ಟ್ರೈಲರ್ ಮೂಲಕ ಗಮನ ಸೆಳೆದಿರುವ ಝೈದ್ ಖಾನ್ ತಂಡದ ಕಡೆಯಿಂದ ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಬನಾರಸ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಝೈದ್ ಖಾನ್ ಫುಲ್ ಬ್ಯುಸಿಯಾಗಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬನಾರಸ್ ಸಿನಿಮಾವನ್ನು ಕಣ್ಮುಂಬಿಕೊಳ್ಳಲು ಅಭಿಮಾನಿಗಳು […]Read More

ಬನಾರಸ್ ವಿತರಣಾ ಹಕ್ಕು ಖರೀದಿಸಿದ ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆ

ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಅತ್ತ ಝೈದ್ ಖಾನ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬನಾರಸ್ ಸಿನಿಮಾವನ್ನು ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ, ಈ ಮಧ್ಯೆ ಚಿತ್ರತಂಡದ ಕಡೆಯಿಂದ ಮತ್ತೊಂದು ಖುಷಿಯ ವಿಚಾರ ಹೊರ ಬಿದ್ದಿದೆ. ಕೇರಳದಲ್ಲಿ ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್, ಬನಾರಸ್‌ ಸಿನಿಮಾದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಕೇರಳದಲ್ಲಿ ದೊಡ್ಡ […]Read More

Phone icon
Call Now
Reach us!
WhatsApp icon
Chat Now