• January 2, 2026

Tags : assult

ಲವ್ ಜಿಹಾದ್ ಆರೋಪ: ಗಂಡನ ಕಿರುಕುಳ ನೆನೆದು ಕಣ್ಣೀರಿಟ್ಟ ಕನ್ನಡದ ಕಿರುತೆರೆ ನಟಿ

ಕನ್ನಡದ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಪತಿಯ ಕಿರುಕುಳದಿಂದ ಬೇಸತ್ತು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಧಾರವಾಹಿಯ ಸಹನಟನ ಜೊತೆ ಹಸೆಮಣೆ ಏರಿದ್ದ ದಿವ್ಯಾ ಪತಿಯ ವರ್ತನೆಯಿಂದಾಗಿ ಇದೀಗ ಆಸ್ಪತ್ರೆ ಸೇರುವಂತಾಗಿದೆ. ಕಷ್ಟದ ಕಾಲದಲ್ಲಿ ಕೈ ಹಿಡಿದ ಹೆಂಡಿತಯನ್ನು ಪತಿ ಅಮ್ಜದ್ ಖಾನ್ ಹೀನಾಯವಾಗಿ ನಡೆಸಿಕೊಂಡಿದ್ದಾಗಿ ಆರೋಪ ಕೇಳಿ ಬಂದಿದೆ. 2015ರಲ್ಲಿ ಪ್ರಸಾರವಾದ ತಮಿಳಿನ ಕೆಳದಿ ಕಣ್ಮಣಿ ಧಾರವಾಹಿಯಲ್ಲಿ ದಿವ್ಯಾ ಹಾಗೂ ಅಮ್ಜದ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ […]Read More

ಕಾಶ್ಮೀರದಲ್ಲಿ ಯಾವುದೇ ದಾಳಿ ನಡೆದಿಲ್ಲ ಎಂದ ಇಮ್ರಾನ್ ಹಶ್ಮಿ: ಸುಳ್ಳು ಹೇಳುತ್ತಿದ್ದಾರೆ ಎಂದ

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ತೆರಳಿದ್ದ ವೇಳೆ ಅವರ ಮೇಲೆ ಕಲ್ಲು ಎಸೆಯಲಾಗಿದೆ ಎಂಬ ಸುದ್ದಿ ಹರಡಿತ್ತು. ಏಕಾ ಏಕಿ ನಡೆದ ದಾಳಿಯಿಂದ ಗಾಬರಿಗೊಂಡ ಇಮ್ರಾನ್ ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇದೀಗ ಇದೆಲ್ಲಾ ಸುಳ್ಳು ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ. ನನ್ನ ಮೇಲೆ ಕಲ್ಲು ತೂರಾಟವಾಗಲಿ, ದಾಳಿಯಾಗಲಿ ನಡೆದಿಲ್ಲ. ಇದೆಲ್ಲಾ ಗಾಸಿಪ್ ಅಷ್ಟೇ. ನಾನು ಕಾಶ್ಮೀರದಲ್ಲಿ ಸೇಫ್ ಆಗಿದ್ದು, ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇನೆ ಎಂದು ಹಶ್ಮಿ ಹೇಳಿದ್ದಾರೆ. ಇಮ್ರಾನ್ […]Read More

ಬಾಲಿವುಟ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ಗ್ರೌಂಡ್ ಜೀರೋ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಕಳೆದ ಮೂರು ದಿನಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಎರಡು ದಿನಗಳಿಂದ ಕಾಶ್ಮೀರದಲ್ಲಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಮ್ರಾನ್ ಹಶ್ಮಿ ಮೇಲೆ ಏಕಾ ಏಕಿ ದಾಳಿ ನಡೆದಿದ್ದು ಘಟನೆಯಿಂದ ಇಮ್ರಾನ್ ಅಘಾತಗೊಂಡಿದ್ದಾರೆ.  ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಕಾಶ್ಮೀರದ ಪಹಲ್ಗಾಂನಲ್ಲಿ ನಡೆಯುತ್ತಿದೆ. ಎರಡನೇ ದಿನದ ಶೂಟಿಂಗ್ ಮುಗಿಸಿಕೊಂಡ ಇಮ್ರಾನ್ ಕಾಶ್ಮೀರದ ಪಹಲ್ಗಾಂ ಮಾರುಕಟ್ಟೆಗೆ ತೆರಳಿದ್ದಾರೆ. ಈ […]Read More

‘ವಿಕ್ರಾಂತ್ ರೋಣ’ ಸಿನಿಮಾ ಪ್ರದರ್ಶನದ ವೇಳೆ ಮಾರಾಮಾರಿ: ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರದರ್ಶನದ ವೇಳೆ ಚಿಕ್ಕಮಗಳೂರಿನ ಮಿಲನ ಚಿತ್ರಮಂದಿರಲ್ಲಿ ಯುವಕರ ಮಧ್ಯೆ ಹಲ್ಲೆ ನಡೆದಿತ್ತು. ಹಾಡು ಹಗಲೆ ಲಾಂಗು ಮಚ್ಚುಗಳಿಂದ ನಡೆದ ಹಲ್ಲೆ ಇಡೀ ನಗರವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ನಾಲ್ಕೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರು ಮಂದಿ ಆರೋಪಿಗಳನ್ನು ಬಂಧಿಸಿರೋ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ 11 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಕ್ರಾಂತ್ […]Read More

ಇನ್ನು ಮುಂದೆ ಆ ಧಾರವಾಹಿಯಲ್ಲಿ ನಟಿಸಲ್ಲ: ಚಂದನ್ ಕುಮಾರ್

ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಮೇಲೆ ತೆಲುಗು ಧಾರವಾಹಿ ಚಿತ್ರೀಕರಣದ ವೇಳೆ ಹಲ್ಲೆ ನಡೆದಿದ್ದು ಈ ಕುರಿತು ನಟ ಚಂದನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆ ಪೂರ್ವ ನಿಯೋಜಿತ. ಇದು ಕನ್ನಡದ ನಟರ ಮೇಲೆ ಅವರಲ್ಲಿರುವ ಅಸಹನೆಯನ್ನು ಸೂಚಿಸುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಮದ ನಿಂದಿಸಿ, ಹಲ್ಲೆ ನಡೆಸಿದರು. ಅದನ್ನು ವಿಡಿಯೋ ಮಾಡಿಕೊಂಡು ಕೆಲವು ದೃಶ್ಯಗಳನ್ನಷ್ಟೇ ಎಡಿಟ್ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು. ‘’ಹೈದರಾಬಾದ್‌ನಲ್ಲಿ ನನ್ನ ಮೇಲೆ […]Read More

ನನ್ನ ಮೇಲೆ ನಡೆದ ಕಪಾಳ ಮೋಕ್ಷ ಪ್ರಕರಣ ಪೂರ್ವ ನಿಯೋಜಿತ: ನಟ ಚಂದನ್

ಇಂದು ಮುಂಜಾನೆಯಿಂದಲೂ ನಟ ಚಂದನ್ ಕುಮಾರ್ ಗೆ ತೆಲುಗು ಧಾರವಾಹಿಯ ಶೂಟಿಂಗ್ ಸೆಟ್ ನಲ್ಲಿ ನಡೆದ ಹಲ್ಲೆಯ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಚಂದನ್ ಮೇಲೆ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದ್ದು ಇದು ಒಂದು ತಿಂಗಳ ಹಿಂದೆ ನಡೆದ ಘಟನೆಯಲ್ಲ, ನಿನ್ನೆಯಷ್ಟೇ ನಡೆದಿದೆ ಎನ್ನಲಾಗುತ್ತಿದೆ. ಘಟನೆ ಕುರಿತು ಮಾತನಾಡಿದ ಚಂದನ್, ‘ನಿನ್ನೆ ನನ್ನ ಕಾಲ್ ಶೀಟ್ ಇರಲಿಲ್ಲ. ಆದರೂ, ಶೂಟಿಂಗೆಗೆ ಹೋಗಿದ್ದೆ. ಅದು ನನ್ನ ವೃತ್ತಿ ಬದ್ಧತೆ ಆಗಿತ್ತು. ನನ್ನ ತಾಯಿಗೆ ಹುಷಾರಿಲ್ಲ ಎಂದರೂ, ನಾನು […]Read More

ಬೇಗ ಗುಣಮುಖರಾಗಿ ಅಮ್ಮ: ಹಲ್ಲೆ ಬೆನ್ನಲ್ಲೇ ಹೊಸ ಪೋಸ್ಟ್ ಹಂಚಿಕೊಂಡ ಚಂದನ್ ಕುಮಾರ್

ಸ್ಯಾಂಡಲ್ ವುಡ್ ನಟ ಚಂದನ್ ಕನ್ನಡದ ಜೊತೆಗೆ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಶ್ರೀಮತಿ ಶ್ರೀನಿವಾಸ್ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಕಿರಿಕ್ ಮಾಡಿಕೊಂಡ ಕಾರಣಕ್ಕೆ ಇಂದು ಮುಂಜಾನೆಯಿಂದಲೇ ಚಂದನ್ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ನಟ ಚಂದನ್ ಭಾವುಕರಾಗಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತೆಲುಗು ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ಚಂದನ್ ಕ್ಯಾಮೆರಾಮೆನ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ತಂತ್ರಜ್ಞರು ಕೂಡ ಚಂದನ್ ವಿರುದ್ಧ ಕಿಡಿಕಾರಿದ್ದರು. ಬಳಿಕ ಚಂದನ್ ಕ್ಷಮೆ ಕೂಡ ಕೇಳಿದ್ದರು. ಈ ವಿಚಾರ ಅಲ್ಲಿಗೆ ನಿಲ್ಲದೇ ಚಂದನ್‌ಗೆ […]Read More

ಧಾರವಾಹಿ ಶೂಟಿಂಗ್ ವೇಳೆ ನಟ ಚಂದನ್ ಕುಮಾರ್ ಗೆ ಕಪಾಳ ಮೋಕ್ಷ

ಕನ್ನಡದ ಕಿರುತೆರೆಯಲ್ಲಿ ಖ್ಯಾತಿ ಘಳಿಸಿ ಬಳಿಕ ಕೆಲ ಸಿನಿಮಾದಲ್ಲೂ ಕಾಣಿಸಿಕೊಂಡ ನಟ ಚಂದನ್ ಕುಮಾರ್ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ತಂತ್ರಜ್ಞರು ಚಂದನ್ ಕುಮಾರ್ ಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡದ ಜೊತೆ ಜೊತೆಗೆ ತೆಲುಗು ಧಾರವಾಹಿಗಳಲ್ಲೂ ಚಂದನ್ ಬ್ಯುಸಿಯಾಗಿದ್ದು ಅಲ್ಲೂ ಸಾಕಷ್ಟು ಜನಪ್ರಿಯತೆ ಘಳಿಸಿದ್ದಾರೆ. ಚಂದನ್ ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಧಾರವಾಹಿಯ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಧಾರವಾಹಿಯ ಚಿತ್ರೀಕರಣ ನಡೆಯುತ್ತಿದ್ದು ಧಾರವಾಹಿ ಸೆಟ್ […]Read More

Phone icon
Call Now
Reach us!
WhatsApp icon
Chat Now