• January 1, 2026

Tags : acter

ಕನ್ನಡ ಕಿರುತೆರೆ ಧಾರವಾಹಿ ನಿರ್ದೇಶಕ ಸಯ್ಯದ್ ಅಶ್ರಫ್ ನಿಧನ

ಕನ್ನಡ ಕಿರುತೆರೆಯ ಖ್ಯಾತ ನಟ ಕಂ ನಿರ್ದೇಶಕ ಸಯ್ಯದ್ ಅಶ್ರಫ್ ಇಂದು ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಭಕ್ತಿ ಪ್ರಧಾನ ಹಾಗೂ ಪ್ಯಾಂಟಿಸಿ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಖ್ಯಾತಿ ಘಳಿಸಿದ್ದ ಸಯ್ಯದ್ ಅಶ್ರಫ್ ಕೇವಲ 42 ವರ್ಷಕ್ಕೆಲ್ಲ ನಿಧನರಾಗಿರೋದು ಧಾರವಾಹಿ ಲೋಕಕ್ಕೆ ತೀವ್ರ ದುಃಖಕರವಾಗಿದೆ. ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಸಾವಿರಾರು ಕಂತುಗಳಲ್ಲಿ ಪ್ರಸಾರವಾಗಿರುವ ಧಾರಾವಾಹಿಗಳಿಗೆ ಸಯ್ಯದ್ ಅಶ್ರಫ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲೂ ಬಿ.ಸುರೇಶ ಅವರ ಸಾರಥ್ಯದಲ್ಲಿ […]Read More

ಮತ್ತೆ ಹೀರೋ ಆಗಿ ಮಿಂಚಲು ರೆಡಿಯಾದ ಜೋಗಿ ಪ್ರೇಮ್

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ನಿರ್ದೇಶಕ ಜೋಗಿ ಪ್ರೇಮ್ ತಮ್ಮದೇ ಆದ ಹೆಸರು ಮಾಡಿದ್ದಾರೆ. ಸದ್ಯ ಪ್ರೇಮ್ ಧ್ರುವ ಸರ್ಜಾ ನಟನೆಯ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಇದೇ 20ರಂದು ಚಿತ್ರದ ಟೈಟಲ್ ಲಾಂಚ್ ಮಾಡಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸಲು ಪ್ರೇಮ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. 2015ರಲ್ಲಿ ತೆರೆಕಂಡ ಡಿಕೆ ಸಿನಿಮಾದ ಬಳಿಕ ನಾಯಕನಾಗಿ ಯಾವುದೇ ಸಿನಿಮಾಗೂ ಬಣ್ಣ ಹಚ್ಚಿರಲಿಲ್ಲ. ನಿರ್ದೇಶನದ ಕಡೆ ಸಂಪೂರ್ಣ ಗಮನ ಹರಿಸಿದ್ದ ಜೋಗಿ ಪ್ರೇಮ್ ಬರೋಬ್ಬರಿ 7 […]Read More

ನನಸಾಗಲೇ ಇಲ್ಲ ಮಂಡ್ಯ ರವಿಯ ಅದೊಂದು ಕನಸು: ದುರದೃಷ್ಟ ಎಂದು ಭಾವುಕರಾಗಿದ್ದ ಕಲಾವಿದ

ಕನ್ನಡ ಕಿರುತೆರೆಯ ಖ್ಯಾತ ಕಲಾವಿದ, ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯ ಚಂದು ಭಾರ್ಗಿ ಖ್ಯಾತಿಯ ನಟ ಮಂಡ್ಯ ರವಿ ನಿನ್ನೆ ಸಂಜೆ 6.30ರ ಸುಮಾರಿಗೆ ನಿಧನರಾಗಿದ್ದಾರೆ. ಚಂದು ನಿಧನದ ಕುರಿತು ಬಿಜಿಎಸ್ ಆಸ್ಪತ್ರೆ ವೈದ್ಯರು ಅಧಿಕೃತ ಘೋಷಣೆ ಮಾಡಿದ್ದಾರೆ. ಕಿಡ್ನಿ ಸಮಸ್ಯೆ ಹಾಗೂ ಜಾಂಡೀಸ್ ನಿಂದ ಬಳಲುತ್ತಿದ್ದ ಮಂಡ್ಯ ರವಿ ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು ರವಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ […]Read More

ನಟ ಕಮಾಲ್ ಆರ್ ಖಾನ್ ಗೆ ಎದೆನೋವು: ಬಂಧನದ ಬಳಿಕ ಹೆಚ್ಚಿತು ಮತ್ತಷ್ಟು

ಒಂದಲ್ಲ ಒಂದು ವಿವಾದಗಳಿಂದಲೇ ಬಿಟೌನ್ ನಲ್ಲಿ ಕುಖ್ಯಾತಿ ಘಳಿಸಿರುವ ನಟ ಕಂ ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಸದ್ಯ ಪೊಲೀಸರ ಬಂಧನದಲ್ಲಿದ್ದಾರೆ. ಸೆಲೆಬ್ರಿಟಿಗಳು ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಕಾರಣಕ್ಕೆ ಮುಂಬೈ ಪೊಲೀಸರು ಕಮಾಲ್ ಖಾನ್ ರನ್ನು ಬಂಧಿಸಿದ್ದಾರೆ. ದುಬೈಗೆ ತೆರಳಿದ್ದ ಕಮಾಲ್ ಖಾನ್ ರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಮಧ್ಯೆ  […]Read More

ಸಿನಿಮಾಗಾಗಿ ಮನೆ ಮಠ ಕಳೆದುಕೊಂಡ್ರು ಜನರ ಪ್ರೀತಿ ಗಳಿಸಿದೆ: ಹಿರಿಯ ನಟ ದ್ವಾರಕೀಶ್

ಸಿನಿಮಾಗಳಿಗಾಗಿ ನಾನು ಮನೆ, ಆಸ್ತಿಗಳನ್ನು ಕಳೆದುಕೊಂಡೆ. ಎಲ್ಲವನ್ನು ಮಾರಿ ಕಷ್ಟಗಳನ್ನು ಅನುಭವಿಸಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಾನು ಮಾರಲಿಕ್ಕೇ ಆಗದೆ ಇರುವ ಮನೆಯನ್ನು ಮಂತ್ರಾಲಯದಲ್ಲಿ ಕಟ್ಟಿದ್ದೇನೆ. ಕಳೆದುಕೊಳ್ಳುವುದಕ್ಕೆ ಆಗದೆ ಇರುವಂತಹ ಆಸ್ತಿಯನ್ನು ಚಿತ್ರರಂಗದಲ್ಲಿ ಸಂಪಾದಿಸಿದ್ದೇನೆ’ ಎಂದು ಹೇಳುತ್ತ ಹಿರಿಯ ನಟ ದ್ವಾರಕೀಶ್‌ ಭಾವುಕರಾದರು. ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ದ್ವಾರಕೀಶ್, ನಾನು 20 ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಇದುವರೆಗೂ 300ಕ್ಕೂ […]Read More

ಕನ್ನಡದ ಹಿರಿಯ ನಟ ಉಮೇಶ್ ಸಿನಿ ಪಯಣಕ್ಕೆ 62ರ ಸಂಭ್ರಮ: ವಾಣಿಜ್ಯ ಮಂಡಳಿಯಿಂದ

ರಂಗಭೂಮಿ ಹಾಗೂ ಚಲನಚಿತ್ರರಂಗದ ಹಿರಿಯ ಹಾಸ್ಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು. ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಅಡಿಯಿಟ್ಟರು. ಕನ್ನಡದ ಸುಮಾರು 250ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿರುವ ಉಮೇಶ್ ಹಾಸ್ಯ ನಟರಾಗಿ ಹೆಸರುವಾಸಿ. ಕಥಾಸಂಗಮದ ‘ಮುನಿತಾಯಿ’ಯಲ್ಲಿ ತಿಮ್ಮರಾಯಿ ಪಾತ್ರ ಅವರ ಕಲಾ ಪ್ರೌಢಿಮೆಯನ್ನು ಬೆಳಕಿಗೆ ತಂದಿತ್ತು. ಈ ಪಾತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಮುತ್ತಿಟ್ಟಿರುವ ಉಮೇಶ್ ಕಲಾ ಪಯಣಕ್ಕೆ […]Read More

ಹನಿಟ್ರ್ಯಾಪ್ ಆರೋಪ: ಸಿನಿಮಾ ರಿಲೀಸ್ ಗೂ ಮುನ್ನವೇ ಸ್ಯಾಂಡಲ್ ವುಡ್ ನಟನ ಬಂಧನ

ಉದ್ಯಮಿಯೊಬ್ಬರಿಗೆ ಹನಿಟ್ರ್ಯಾಮ್ ಮಾಡಿದ ಆರೋಪದ ಮೇಲೆ ಕನ್ನಡದ ಯುವ ನಟ ಯುವ ಅಲಿಯಾಸ್ ಯುವರಾಜ್ ಎಂಬುವವನನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಿದ್ದ ನಟ ಇದೀಗ ಹನಿಟ್ರ್ಯಾಮ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ನಟ ಯುವರಾಜ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿರೋ ಉದ್ಯಮಿಯೊಂದಿಗೆ ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. […]Read More

Phone icon
Call Now
Reach us!
WhatsApp icon
Chat Now