• February 10, 2026

ದರ್ಶನ್ ಇಷ್ಟ, ಯಶ್ ನನ್ನ ಹುಡುಗ ಅಲ್ಲ ಎಂದ ಸನ್ನಿ ಲಿಯೋನ್

ಬಾಲಿವುಡ್ ನಟಿ ಸನ್ನಿ ಲಿಯೋನ್ ಪರಭಾಷೆಯಲ್ಲೂ ಸದ್ದು ಮಾಡಿದ್ದಾರೆ. ಈಗಾಗ್ಲೆ ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಇದೀಗ ನಟಿ ಸನ್ನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ.   ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಸನ್ನಿ ಲಿಯೋನ್ ಯಶ್ ಹಾಗೂ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಎಂದರೆ ತುಂಬಾ ಇಷ್ಟ ಎಂದ ಸನ್ನಿ, “ಅವರು ತುಂಬಾ ಒಳ್ಳೆಯವರು. ಅವರು ಅಂದ್ರೆ ಇಷ್ಟ”. ಎಂದಿದ್ದಾರೆ. ಇನ್ನೂ ಯಶ್ ನಟನೆಯ ಕೆಜಿಫ್ ಫೋಸ್ಟರ್ ನೋಡಿದ ಸನ್ನಿ ಲಿಯೋನ್ ‘ಇದು ರಾಕಿ ಭಾಯ್’ ಅಂತಾರೆ. ಜೊತೆಗೆ ಅವರನ್ನು ನೋಡಿ “ಅವರು ನನ್ನ ಹುಡುಗ ಅಲ್ಲ” ಅಂತ ಹೇಳಿ ನಕ್ಕಿದ್ದಾರೆ. ಈ ಮೂಲಕ ಸನ್ನಿ ಲಿಯೋನಿ ಕನ್ನಡ ಸಿನಿಮಾ ರಂಗದ ಮೇಲೆ ತಮಗಿರುವ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ.   ಇತ್ತೀಚೆಗೆ ಸಚಿನ್ ಹಾಗೂ ಅದಿತಿ ಪ್ರಭುದೇವ್ ನಟನೆಯ ಚಾಂಪಿಯನ್ ಸಿನಿಮಾದ ಸ್ಪೆಷಲ್ ಹಾಡೊಂದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಸ್ಫೋರ್ಟ್ ಕಥೆಯಾಧರಿಸಿದ ಚಾಂಪಿಯನ್ ಸಿನಿಮಾ ತಂಡ ಇತ್ತೀಚೆಗೆ ಆಡಿಯೋ ಲಾಂಚ್ ಮಾಡಿದ್ದು ಈ ಕಾರ್ಯಕ್ರಮಕ್ಕೂ ಸನ್ನಿ ಲಿಯೋನ್ ಹಾಜರಾಗಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now