ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡ ಸನ್ನಿ ಲಿಯೋನ್
ಬಿಟೌನ್ ಬ್ಯೂಟಿ ಸನ್ನಿ ಲಿಯೋನ್ ಹಿಂದಿ, ಕನ್ನಡ, ತೆಲುಗು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳನ್ನ ಇಟ್ಟುಕೊಂಡು ಬ್ಯಾಕ್ ಟು ಬ್ಯಾಕ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋ ಸನ್ನಿ ಲಿಯೋನ್ ಗೆ ಇದೀಗ ಬಂಪರ್ ಆಫರ್ ಸಿಕ್ಕಿದ್ದು ಈ ಬಗ್ಗೆ ಸ್ವತಃ ಸನ್ನಿ ಲಿಯೋನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಸಾಕಷ್ಟು ಮಂದಿಯ ಕನಸು. ಅಂತಹ ಕನಸು ಸನ್ನಿಗೂ ಇದ್ದು ಅದು ಇದೀಗ ನನಸಾಗಿದೆ. ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾದಲ್ಲಿ ಸನ್ನಿ ಲಿಯೋನ್ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಸನ್ನಿ, ಕಶ್ಯಪ್ ಅವರ ಚಿತ್ರದಲ್ಲಿ ನಟಿಸುವ ಕನಸು ನನಸಾಗಿದೆ. ಅನುರಾಗ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ನನ್ನ ಪ್ರಯಾಣ ಅದ್ಭುತವಾಗಿದೆ ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಅನುರಾಗ್ ಚಿತ್ರದಲ್ಲಿ ಆಡಿಷನ್ ಮಾಡುತ್ತೀರಾ ಎಂದು ಕೇಳಲು ನನಗೆ ಕರೆ ಬಂದಿತ್ತು. ನಿಮ್ಮ ಅದ್ಭುತ ಸಿನಿಮಾದ ಭಾಗವಾಗಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
