ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಪ್ಪು ಅಭಿಮಾನಿಗಳ ಕ್ಷಮೆ ಕೋರಿದ ಚಕ್ರವರ್ತಿ ಸೂಲಿಬೆಲೆ
ಬಿಜೆಪಿ ಸರ್ಕಾರ ಹಾಗೂ ಬೊಮ್ಮಾಯಿ ಕುರಿತಾಗಿ ಟ್ವೀಟ್ ಮಾಡಿದ್ದ ಸೂಲಿಬೆಲೆ, ತಮ್ಮದೇ ಪಕ್ಷದ ಶಾಸಕರ ಫೈಲ್ಸ್ ಗೆ ಸಹಿ ಮಾಡಲು ಮುಖ್ಯಮಂತ್ರಿಗಳಿಗೆ ಸಮಯದ ಅಭಾವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರಿಮಿಯರ್ ಶೋ ಅಟೆಂಡ್ ಮಾಡಲು, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟನೊಬ್ಬನು ನಿಧನರಾದಾಗ ಮೂರು ದಿನಗಳ ಕಾಲ ಸಮಯ ಕೊಟ್ಟಿದ್ದಾರೆ. ಮುಂದೆ ವಿಕ್ರಾಂತ್ ರೋಣ ಸಿನಿಮಾವನ್ನೂ ಅವರು ನೋಡಲಿದ್ದಾರೆ ಎಂದು ಟ್ವಿಟ್ ಮಾಡಿದ್ದರು. ಇದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.MLAs complain that CM not even signs file may be lack of time😂
— Chakravarty Sulibele (@astitvam) August 1, 2022
But he has all the time to watch Premier movies and shed tears. During the death of Movie Actor, he gave his three days to get involved.
If not this outrage he would have watched VIkrantRona for sure 14/n
ಬಿಜೆಪಿ ಸರ್ಕಾರ ಅಥವಾ ಬೊಮ್ಮಾಯಿ ಕುರಿತು ಸೂಲಿಬೆಲೆ ಯಾವುದೇ ಪ್ರತಿಕ್ರಿಯೆ ಬೇಕಿದ್ದರೂ ನೀಡಲಿ. ಆದರೆ ಪುನೀತ್ ಬಗ್ಗೆ ಯಾವುದೇ ಮಾತುಗಳನ್ನು ಆಡಬಾರದು, ಪುನೀತ್ ನಿಧನವನ್ನು ನಮ್ಮಿಂದ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ನಿಧನರಾದಾಗ ಯಾರೂ ಬರದೇ ಇದ್ದರೂ, ಅಭಿಮಾನಿಗಳು ಮೂರು ದಿನವಲ್ಲ, ನೂರು ದಿನವಾದರೂ ಅವರಿಗೆ ಗೌರವ ಸೂಚಿಸಿ ಕಳುಹಿಸಿ ಕೊಡುತ್ತಿದ್ದೆವು. ಈ ರೀತಿಯಲ್ಲಿ ಅವಮಾನ ಮಾತುಗಳನ್ನು ಕೇಳುವುದಕ್ಕೆ ಸಾಧ್ಯವಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಸೂಲಿಬೆಲೆ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಮೇತ ಟ್ವಿಟ್ ಮಾಡಿರುವ ಸೂಲಿಬೆಲೆ ‘ಈ ಟ್ವಿಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವಿಟ್ ಅನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು ಎಂದು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು.🙏 pic.twitter.com/JRd3Bt4g8o
— Chakravarty Sulibele (@astitvam) August 1, 2022
