ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರ ಸಾವು: ಬಿಗ್ ಬಾಸ್ ಗೆ ಬರ್ತಿದ್ದಾರೆ ಶನಿ ಪಾತ್ರಧಾರಿ
ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರವನ್ನು ನಿಭಾಯಿಸುತ್ತಿದ್ದ ನಟ ಸುನೀಲ್ ಇದೀಗ ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಾರೆ.ಇದೇ ಕಾರಣಕ್ಕೆ ತರಾತುರಿಯಲ್ಲಿ ರಾಜೇಶ್ ಪಾತ್ರವನ್ನು ಕೊಲೆ ಮಾಡಲಾಗಿದೆ. ಶನಿ ಧಾರಾವಾಹಿಯ ಮೂಲಕ ಫೇಮಸ್ ಆದ ಸುನೀಲ್ ಕೆಂಡಸಂಪಿಗೆ ಧಾರವಾಹಿಯಲ್ಲಿ ತಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸುನೀಲ್ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದೀಗ ಸುನೀಲ್ ಪಾತ್ರ ಕೊನೆಯಾಗಿರೋ ಕಾರಣಕ್ಕೆ ಸುನೀಲ್ ಬಿಗ್ ಬಾಸ್ ಮನೆಗೆ ಹೋಗೋದು ಕನ್ಪಾರ್ಮ್ ಆಗಿದೆ.
ನಟ ಸುನೀಲ್ ಜೊತೆ ನಟಿ ಪ್ರೇಮಾ, ನವೀನ್ ಕೃಷ್ಣ, ಸರಿಗಮಪ ಖ್ಯಾತಿಯ ಆಶಾ ಭಟ್ ಸೇರಿದಂತೆ ಇನ್ನೂ ಸಾಕಷ್ಟು ಮಂದಿ ಬಿಗ್ ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ.
