ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಟ್ರಾಫಿಕ್ ನಲ್ಲೇ ಕಾರು ಬಿಟ್ಟು 3 ಕಿಲೋ ಮೀಟರ್ ಓಡಿ ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಿ ಪ್ರಾಣ ಉಳಿಸಿದ ಡಾಕ್ಟರ್
ಆಗಸ್ಟ್ 30 ರಂದು ರೋಗಿಯೊಬ್ಬರಿಗೆ ಲ್ಯಾಪ್ರೋ ಸ್ಕೋಪಿಕ್ ಗ್ಲಾಡ್ ಬ್ಲಡರ್ ಚಿಕಿತ್ಸೆ ಮಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಡಾ. ಗೋವಿಂದ ನಂದಕುಮಾರ್ ಕನ್ನಿಂಗ್ ಹ್ಯಾಮ್‍ನಿಂದ ಸರ್ಜಾಪುರದ ಮಣಿಪಾಲ್ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಅಂದು ವಿಪರೀತ ಮಳೆಯಾದ ಪರಿಣಾಮ ಮಾರತಹಳ್ಳಿ ಮತ್ತು ಸರ್ಜಾಪುರದ ರಸ್ತೆ ಕಂಪ್ಲೀಟ್ ಜಾಮ್ ಆಗಿತ್ತು. ಬೆಳ್ಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು. ಟ್ರಾಫಿಕ್ ಇದ್ದ ಪರಿಣಾಮ ಆಸ್ಪತ್ರೆ ತಲುಪಲು 1 ಗಂಟೆ ಸಮಯ ಇಡಿಯುತ್ತಿತ್ತು. ಹೀಗಾಗಿ ವೈದ್ಯರು ಕಾರನ್ನು ಆಸ್ಪತ್ರೆಗೆ ತರುವಂತೆ ಕಾರು ಚಾಲಕನಿಗೆ ಹೇಳಿ 3 ಕಿ.ಮೀ ಓಡಿಹೋಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ವೈದ್ಯರು ಎಂದರೆ ದುಡ್ಡು ತಿನ್ನಲೆ ಇರುವವರು ಎನ್ನವವರ ಮಧ್ಯೆ ಡಾ.ಗೋವಿಂದ ನಂದ ಕುಮಾರ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ವೈದ್ಯೋ ನಾರಾಯಣ ಹರಿ ಎಂಬ ಮಾತನ್ನು ನಿಜ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗೋವಿಂದರಾಜು ಕೆಲಸವನ್ನು ಮೆಚ್ಚಿಕೊಂಡಿದ್ದು ಹ್ಯಾಟ್ಸ್ ಹೇಳುತ್ತಿದ್ದಾರೆ.
