• March 14, 2026

ಬಾಲಿವುಟ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ಗ್ರೌಂಡ್ ಜೀರೋ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಕಳೆದ ಮೂರು ದಿನಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಎರಡು ದಿನಗಳಿಂದ ಕಾಶ್ಮೀರದಲ್ಲಿ ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಮ್ರಾನ್ ಹಶ್ಮಿ ಮೇಲೆ ಏಕಾ ಏಕಿ ದಾಳಿ ನಡೆದಿದ್ದು ಘಟನೆಯಿಂದ ಇಮ್ರಾನ್ ಅಘಾತಗೊಂಡಿದ್ದಾರೆ.  ಗ್ರೌಂಡ್ ಜೀರೋ ಸಿನಿಮಾದ ಶೂಟಿಂಗ್ ಕಾಶ್ಮೀರದ ಪಹಲ್ಗಾಂನಲ್ಲಿ ನಡೆಯುತ್ತಿದೆ. ಎರಡನೇ ದಿನದ ಶೂಟಿಂಗ್ ಮುಗಿಸಿಕೊಂಡ ಇಮ್ರಾನ್ ಕಾಶ್ಮೀರದ ಪಹಲ್ಗಾಂ ಮಾರುಕಟ್ಟೆಗೆ ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಇಮ್ರಾನ್ ಮೇಲೇ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಸಡನ್ ಆಗಿ ನಡೆದ ಈ ಬೆಳವಣಿಗೆಯಿಂದ ಇಮ್ರಾನ್ ಹಶ್ಮಿ ಆಘಾತಕ್ಕೆ ಒಳಗಾಗಿದ್ದಾರೆ. ಇಮ್ರಾನ್ ಮೇಲೆ ಕಲ್ಲು ತೂರಾಟ ನಡೆಸಿದ್ದ ಯಾರು ಏಕೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಪಹಲ್ಗಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now