• March 14, 2026

ಶ್ರೀನಿಧಿ ಶೆಟ್ಟಿ ಸಿನಿಮಾ ನೋಡಿ ಅಸಮಧಾನಗೊಂಡ ಅಭಿಮಾನಿ: ಕ್ಷಮೆ ಕೇಳಿದ ನಿರ್ದೇಶಕ

ಯಶ್ ನಟನೆಯ ಕೆಜಿಎಫ್ ಚಿತ್ರದಲ್ಲಿ ಕಾಣಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿಗೆ ಸಾಕಷ್ಟು ಆಫರ್ ಗಳು ಬರುತ್ತಿವೆ. ಮೊದಲ ಸಿನಿಮಾದಲ್ಲೇ ಸಾಕಷ್ಟು ಖ್ಯಾತಿ ಘಳಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀನಿಧಿ ಶೆಟ್ಟಿ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶ್ರೀನಿಧಿ ಶೆಟ್ಟಿ ನಟನೆಯ ಕೋಬ್ರಾ ಸಿನಿಮಾ ತೆರೆಕಂಡಿದ್ದು ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದಾರೆ. ಚಿಯಾನ್ ವಿಕ್ರಂ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ ಕೋಬ್ರಾ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ರಿಲೀಸ್ ಆಗಿತ್ತು. ಜೊತೆಗೆ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ ಎಂಬ ಕಾರಣಕ್ಕೆ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಕೋಬ್ರಾ ಹೇಳಿಕೊಳ್ಳುವಂತ ಹೆಸರು ಮಾಡಿಲ್ಲ. ಸಾಕಷ್ಟು ನಿರೀಕ್ಷೆಯೊಂದಿಗೆ ಥಿಯೇಟರ್ ಗೆ ಹೋದವರಿಗೆ ಕೋಬ್ರಾ ಸಿನಿಮಾ ಬೇಸರ ಮೂಡಿಸಿದೆ.  ಇದು ನಿರ್ದೇಶಕ ಅಜಯ್ ಜ್ಞಾನಮುತ್ತು ಗಮನಕ್ಕೆ ಬಂದಿದ್ದು ಕ್ಷಮೆ ಯಾಚಿಸಿದ್ದಾರೆ. ಕೆಲವರು ಕೋಬ್ರಾ ಸಿನಿಮಾ ಇಷ್ಟ ಪಟ್ಟರೆ ಮತ್ತೆ ಕೆಲವರು ಸಿನಿಮಾದ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ನಿಮ್ಮ ಸಿನಿಮಾದ ಸ್ಕ್ರೀನ್​ಪ್ಲೇ ಸಾಕಷ್ಟು ಗೊಂದಲಮಯವಾಗಿದೆ’ ಎಂದು ಅಭಿಮಾನಿಯೋರ್ವ ಹೇಳಿಕೊಂಡಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಅಜಯ್, ‘ನಿಮಗೆ ಕನ್​ಫ್ಯೂಸ್ ಎನಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ತಲೆಗೆ ಕೆಲಸ ನೀಡುವಂತಹ ಸಿನಿಮಾಗಳು ಎಂದರೆ ನನಗೆ ಇಷ್ಟ. ಈ ಬಾರಿಯೂ ನಾನು ಅದನ್ನು ಪ್ರಯತ್ನಿಸಿದ್ದೇನೆ. ಮತ್ತೊಮ್ಮೆ ಸಿನಿಮಾ ನೋಡಿ ಇಷ್ಟ ಆಗಬಹುದು’ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now