ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
“ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರದ ಆಡಿಯೋ ರಿಲೀಸ್
‘ಮಾತಾಂಬುಜಾ ಮೂವೀಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಶ್ರೀ ಪ್ರಸನ್ನ ವೆಂಕಟದಾಸರು’ ಚಿತ್ರಕ್ಕೆ ಡಾ. ಮಧುಸೂದನ ಹವಾಲ್ದಾರ್ ನಿರ್ದೇಶನವಿದೆ. ಸದ್ದಿಲ್ಲದೆ ಈಗಾಗಲೇ ‘ಶ್ರೀ ಪ್ರಸನ್ನ ವೆಂಕಟದಾಸರು’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್, ‘ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ಪ್ರಸನ್ನ ವೆಂಕಟದಾಸರದ್ದು ಮೇರು ವ್ಯಕ್ತಿತ್ವ. ಅವರ ಜೀವನವನ್ನು ಪರಿಚಯಿಸುವ ಸಲುವಾಗಿ ಈ ಸಿನಿಮಾ ಮಾಡಿದ್ದೇವೆ. ಸಿನಿಮಾದ ಗೀತೆಗಳಲ್ಲೂ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನೇ ಬಳಸಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ನವೆಂಬರ್ ವೇಳೆಗೆ ‘ಪ್ರಸನ್ನ ವೆಂಕಟದಾಸರು’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ’ ಎಂದು ಮಾಹಿತಿ ನೀಡಿದರು.
ಶ್ರೀಪ್ರಸನ್ನ ವೆಂಕಟದಾಸರು’ ಚಿತ್ರಕ್ಕೆ ಡಾ. ರೇಖಾ ಕಾಖಂಡಕಿ ಚಿತ್ರಕಥೆ, ಸಂಭಾಷಣೆಯಿದೆ. ಚಿತ್ರದ ಹಾಡುಗಳಿಗೆ ವಿಜಯಕೃಷ್ಣ ಡಿ. ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ನಾರಾಯಣ ಸಿ. ಛಾಯಾಗ್ರಹಣ ಹಾಗೂ ಆರ್. ದೊರೈರಾಜ್ ಅವರ ಸಂಕಲನವಿದೆ. ಪ್ರಭಂಜನ ದೇಶಪಾಂಡೆ, ವಿಜಯಾನಂದ ನಾಯಕ, ಲಕ್ಷ್ಮೀ ಶ್ರೇಯಾಂಶಿ, ಸ್ವಾಮಿರಾವ್ ದೇಸಾಯಿ, ವಿಷ್ಣುತೀರ್ಥ ಜೋಶಿ, ಶರತ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
