• March 14, 2026

ಎನ್ ಟಿ ಆರ್ ಪುತ್ರಿ ಉಮಾ ಮಹೇಶ್ವರಿ ಆತ್ಮಹತ್ಯೆಗೆ ಶರಣು

ಟಾಲಿವುಡ್‌ನ ಖ್ಯಾತ ನಟ ನಂದಮೂರಿ ತಾರಕ್ ರಾಮ ರಾವ್ ಅವರ ಕಿರಿಯ ಪುತ್ರಿ ಉಮಾ ಮಹೇಶ್ವರಿ ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ತಿಂಗಳಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಉಮಾ ಮಹೇಶ್ವರಿ ಮುಂಬೈನ ಜುಬ್ಲಿ ಹಿಲ್ಸ್ ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಎನ್‌ಟಿಆರ್ ಕಿರಿಯ ಪುತ್ರಿ ಅನಾರೋಗ್ಯದ ಬಳಲುತ್ತಿದ್ದರು. ಇದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು. ಆದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಮಾ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಉಮಾ ಮಹೇಶ್ವರಿ ದೇಹ ಪತ್ತೆಯಾಗಿದೆ. ಉಮಾ ಮಹೇಶ್ವರಿ ಸಾವಿಗೆ ರಾಜಕೀಯ ಗಣ್ಯರು, ಚಿತ್ರರಂಗದ ಕಲಾವಿದರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ. ದಿವಂಗತ ಎನ್‌ಟಿಆರ್ ಅವರಿಗೆ 12 ಜನ ಮಕ್ಕಳು ಎಂಟು ಮಂದಿ ಗಂಡು ಮಕ್ಕಳು, 4 ಜನ ಹೆಣ್ಣು ಮಕ್ಕಳಿದ್ದರು. ಉಮಾ ಮಹೇಶ್ವರಿ ಇವರಲ್ಲಿ ಕೊನೆಯ ಮಗಳಾಗಿದ್ದರು.    

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now