ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನನ್ನ ಮಗ ಚಿನ್ನ, ಆತನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ: ನಟ ಸ್ನೇಹಿತ್ ಪೋಷಕರು
ಘಟನೆಯ ಬಳಿಕ ಪ್ರೇಸ್ ಮೀಟ್ ಕರೆದ ಮಾತನಾಡಿದ ಸ್ನೇಹಿತ್ ಪೋಷಕರು ಪ್ರಕರಣದಲ್ಲಿ ನನ್ನ ಮಗನನ್ನು ಬೇಕಂತಲೆ ಸಿಲುಕಿಸಲಾಗಿದೆ. ಆತ ಮುಗ್ದ ಎಂದಿದ್ದಾರೆ. ಪ್ರೇಸ್ ಮೀಟ್ ನಲ್ಲಿ ಮಾತನಾಡಿದ ಸ್ನೇಹಿತ್ ತಂದೆ ಜಗದೀಶ್, ‘ಕಳೆದ ವರ್ಷ ಇದೇ ರೀತಿಯ ಪ್ರಕರಣ ನಡೆದಿತ್ತು. ರಜತ್ ಗೌಡ ಅವರು ನಮಗೆ ಸಾಕಷ್ಟು ತೊಂದರೆ ಕೊಟ್ಟರು. ಕೊಡಬಾರದ ಕಾಟ ಕೊಟ್ಟರು. ಕೊನೆಗೆ ಈ ಪ್ರಕರಣದಲ್ಲಿ ರಜತ್ ಅವರು ತಪ್ಪೊಪ್ಪಿಕೊಂಡರು. ಆ ಪ್ರಕರಣ ಅಲ್ಲಿಗೆ ಕ್ಲೋಸ್ ಆಯ್ತು. ನಮ್ಮ ಕಾರು ಚಾಲಕನ ಹೆಸರು ರಕ್ಷಿತ್. ಮನೆ ಮುಂದೆ ಕಾರು ತೊಳೆಯುವಾಗ ಆತನಿಗೆ ರಜತ್ ತೊಂದರೆ ಕೊಟ್ಟಿದ್ದಾರೆ. ಕೆಟ್ಟ ಶಬ್ದಗಳಿಂದ ಬೈದಿದ್ದಾರೆ. ನಾನು ಆತ್ಮಹತ್ಯೆ ಮಾಡ್ಕೋತಿನಿ ಎಂದು ರಕ್ಷಿತ್ ನೋವಿನಿಂದ ಬಂದು ಹೇಳಿಕೊಂಡಿದ್ದ. ಆ ಬಳಿಕ ಆತ ರಜತ್ ವಿರುದ್ಧ ದೂರು ದಾಖಲು ಮಾಡಿದ್ದಾನೆ. ರಜತ್ ಹಾಗೂ ಶಮಂತ್ ಬಂದು ಕೇಸ್ ಹಿಂಪಡೆಯಿರಿ ಎಂದು ಆವಾಜ್ ಹಾಕಿದ್ದಾರೆ. ಕೇಸ್ ಹಾಕಿದ್ದು ರಕ್ಷಿತ್. ಆ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ’ ಎಂದಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಸ್ನೇಹಿತ್ ತಾಯಿ ರೇಖಾ. ‘ಅವರು ಸುಳ್ಳು ಆರೋಪ ಮಾಡುತ್ತಾ ನಮ್ಮನ್ನು ಬ್ಲಾಕ್ಮೇಲ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಮಗ ಚಿನ್ನ. ಆತನಿಗೆ ಯಾವುದೇ ಕೆಟ್ಟ ಹವ್ಯಾಸ ಇಲ್ಲ. ಅವನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೆವು. ಕಳೆದ ವರ್ಷ ಇದೇ ರೀತಿ ಪ್ರಕರಣ ನಡೆದಾಗ ನಾವು ಖಿನ್ನತೆಗೆ ಒಳಗಾಗಿದ್ದೆವು. ಎರಡು ತಿಂಗಳು ಮನೆಯಲ್ಲೇ ಇರಬೇಕಾಯಿತು. ಬ್ರಿಡ್ಜ್ ಮೇಲೆ ನನ್ನ ಮಗ ಆವಾಜ್ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ. ನನ್ನ ಮಗ ಅಲ್ಲಿ ಇರಲೇ ಇಲ್ಲ’ ಎಂದಿದ್ದಾರೆ.
