• January 2, 2026

ಮೊಬೈಲ್ ನಂಬರ್ ಹಂಚಿಕೊಂಡ ಬಿಗ್ ಬಾಸ್ ಬೆಡಗಿ ಸೋನು ಗೌಡ

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿರುವ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ದಿನಕ್ಕೊಂದರಂತೆ ಸುದ್ದಿಯಾಗ್ತಿದ್ದಾರೆ.  ಸಾಕಷ್ಟು ವಿರೋಧಗಳ ನಡುವೆಯೂ ದೊಡ್ಮನೆಯಲ್ಲಿ ಸೋನು ಸದ್ದು ಮಾಡ್ತಿದ್ದಾರೆ. ಇದೀಗ ಸೋನು ಶ್ರೀನಿವಾಸ್ ಗೌಡ ತಮ್ಮ ಮೊಬೈಲ್ ನಂಬರ್ ಅನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಮೊಬೈಲ್ ನಂಬರ್ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದ್ರೆ ಸೋನು ತಮ್ಮ ನಂಬರ್ ಹಂಚಿಕೊಂಡ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ 8 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲಾ ತಾಣದಲ್ಲಿ ಮಿಂಚುತ್ತಿರುವ ಸೋನು ಅವರ ನಂಬರ್ ತೆಗೆದುಕೊಳ್ಳಬೇಕು ಅನ್ನೋ ಆಸೆ ಸಾಕಷ್ಟು ಮಂದಿಗೆ ಇದ್ದೆ ಇರುತ್ತೆ. ಆದರೆ ಇಲ್ಲೂ ಸೋನು ತಮ್ಮ ಬುದ್ದಿವಂತಿಕೆ ತೋರಿಸಿದ್ದಾರೆ. ಸೋನು ಅವರ ಬಳಿಕ ಬೇಗ ಮೊಬೈಲ್ ನಂಬರ್ ಹೇಳಮ್ಮ ಎಂದು ಲೋಕೇಶ್ ಕೇಳಿದ್ದಾರೆ. ಅದಕ್ಕೆ ಸೋನು ಗೌಡ 99876543210 ಎಂದು ನಂಬರ್ ಹೇಳೀದ್ದಾರೆ. ಈ ನಂಬರ್ ಸುಳ್ಳು ಎಂದು ಸ್ಫೂರ್ತಿ ಗೌಡ ಹೇಳಿದ್ದಾರೆ. ಅದನ್ನು ನಾನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂಥ ಜಾಣರು ಇರ್ತೀರಿ ಅಂತ ನಂಗೆ ಗೊತ್ತು ಎಂದು ಸೋನು ಗೌಡ ತಮ್ಮ ಚಾಲಾಕಿತನ ತೋರಿಸಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಸೋನು ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾಲೆ ಇದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now