• February 10, 2026

ಖಾಸಗಿ ವಿಡಿಯೋ ಲೀಕ್ ಆದಾಗ ಮನೆಯವರ ರಿಯಾಕ್ಷನ್ ಹೇಗಿತ್ತು? ಸೋನು ಗೌಡ ಬಿಚ್ಚಿಟ್ಟ ನೋವಿನ ಸಂಗತಿ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಹುಡುಗಿ ಸೋನು ಗೌಡ ಇದೀಗ ಬಿಗ್ ಬಾಸ್ ಓಟಿಟಿ ಮನೆಯಿಂದ ಹೊರ ಬಂದಿದ್ದಾರೆ. 42 ದಿನಗಳ ಕಾಲ ದೊಡ್ಮನೆಯಲ್ಲಿದ್ದು ಹೊರ ಬಂದ ಸೋನು ಗೌಡ ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಆ ಸಂದರ್ಭದಲ್ಲಿ ತಮ್ಮ ಮನೆಯವರ ರಿಯಾಕ್ಷನ್ ಹೇಗಿತ್ತು ಅನ್ನೊದನ್ನ ಹೇಳಿದ್ದಾರೆ. ಸೋನು ಗೌಡ ಅವರ ಖಾಸಗಿ ವಿಡಿಯೋವೊಂದು ಲೀಕ್ ಆಗಿ ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಸೋನು ಗೌಡ ಅವರನ್ನು ಬಿಗ್ ಬಾಸ್ ಮನೆಯೊಳಗೆ ಕಳುಹಿಸುವ ಕುರಿತು ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆಕೆಯನ್ನು ಯಾವುದೇ ಕಾರಣಕ್ಕೂ ಬಿಗ್ ಬಾಸ್ ಮನೆಯೊಳಗೆ ಬಿಡಬಾರದು ಎಂದು ಸಾಕಷ್ಟು ಮಂದಿ ಹೇಳಿದ್ದರು. ಕೊನೆಗೂ ಸೋನು ಗೌಡ ಬಿಗ್ ಬಾಸ್ ಮನೆಗೆ ಕಾಲಿಟ್ಟು 42 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದರು.  ಸಾಕಷ್ಟು ವಿರೋಧಗಳ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ ಸೋನು ಗೌಡ ಒಂದು ವರ್ಗದ ಪ್ರೇಕ್ಷಕರ ಮನ ಗೆಲ್ಲವಲ್ಲಿ ಸಕ್ಸಸ್ ಆಗಿದ್ದರು. ತಮ್ಮ ನೇರಾ ನೇರಾ ಮಾತುಗಳಿಂದ ಮನೆ ಮಂದಿ ಹಾಗೂ ವೀಕ್ಷಕರ ಮನ ಗೆದ್ದಿದ್ದರು. ಇದೀಗ ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಸಂದರ್ಭದಲ್ಲಿ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೋನು ಗೌಡ ಹೇಳಿಕೊಂಡಿದ್ದಾರೆ. ನಾನು ಎಷ್ಟೇ ಕಷ್ಟ ಬಂದರೂ ಸುಳ್ಳು ಹೇಳುವುದಿಲ್ಲ. ಸತ್ಯ ಒಂದು ಗಂಟೆ ಅಷ್ಟೇ ಕೋಪ ತರಿಸುತ್ತದೆ. ಆದರೆ, ಅದಕ್ಕೆ ಬೆಲೆ ಇದೆ. ಆದರೆ ಸುಳ್ಳು ಆ ರೀತಿ ಅಲ್ಲ. ಒಂದು ಸುಳ್ಳನ್ನು ಮುಚ್ಚಿ ಹಾಕಲು ಸಾವಿರ ಸುಳ್ಳು ಹೇಳಬೇಕಾಗುತ್ತದೆ. ಈ ಕಾರಣಕ್ಕೆ ಮನೆಯಲ್ಲಿ ನಾನು ಎಲ್ಲವನ್ನೂ ಒಪ್ಪಿಕೊಂಡೆ’ ಎಂದು ಸೋನು ಗೌಡ ಹೇಳಿದ್ದಾರೆ. ವಿಡಿಯೋ ಲೀಕ್ ಆದ ‘ಆ ಸಂದರ್ಭ ನೆನಪಿಸಿಕೊಂಡರೆ ನನಗೆ ಬೇಸರ ಆಗುತ್ತದೆ. ಇಡೀ ಫ್ಯಾಮಿಲಿ 2 ವಾರ ನನ್ನ ಜೊತೆ ಮಾತನಾಡಲಿಲ್ಲ. ಮನೆಯವರು ಮಾತನಾಡಿಸಿದ್ದನ್ನು ಬಿಡಲೂ ಒಂದು ಕಾರಣ ಇದೆ ಎಂಬುದನ್ನು ಅವರು ನನಗೆ ಅರ್ಥ ಮಾಡಿಸಿದರು. ನಮ್ಮ ಮನೆಯಲ್ಲಿ ನನ್ನನ್ನು ಪ್ರತಿಯೊಬ್ಬರು ಅತಿಯಾಗಿ ಪ್ರೀತಿಸುತ್ತಾರೆ’ ಎಂದು ಸೋನು  ಶ್ರೀನಿವಾಸ್ ಗೌಡ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now