• January 1, 2026

ಮಾನ್ವಿತಾ ಕಾಮತ್ ತಾಯಿಯ ಸಹಾಯಕ್ಕೆ ಧಾವಿಸಿದ ಸೋನು ಸೂದ್: ರಿಯಲ್ ಹೋರೋ ಎಂದು ನಟಿ

ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ ಸಹಾಯ ಮಾಡಿ ರಿಯಲ್ ಹೀರೋ ಅನಿಸಿಕೊಂಡಿದ್ದರು. ಆ ಬಳಿಕ ಸೋನು ಸೂದ್ ಸೋಷಿಯಲ್ ಸರ್ವಿಸ್ ಮೂಲಕವೇ ಅಭಿಮಾನಿಗಳ ಮನ ಗೆದ್ದು ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಇದೀಗ ಸೋನು ಸೂಡ್ ಕಡೆಯಿಂದ ಕನ್ನಡದ ನಟಿ ಮಾನ್ವಿತಾ ಕಾಮತ್ ಕುಟುಂಬಕ್ಕೆ ಸಹಾಯ ಸಿಕ್ಕಿದೆ. ಇದನ್ನು ಮಾನ್ವಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೆಂಡಸಂಪಿಗೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಮಾನ್ವಿತಾ ಕಾಮತ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಾನ್ವಿತ ನಟನೆಯ ಶಿವ 143 ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಮಾನ್ವಿತಾ ಕುಟುಂಬದಲ್ಲಿ ಸಮಸ್ಯೆ ಎದುರಾಗಿದ್ದು ಇದಕ್ಕೆ ಸೋನು ಸೂಪ್ ಫೌಂಡೇಷನ್ ಸಹಾಯ ಮಾಡಿದೆ. ಮಾನ್ವಿತಾ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ನುರಿತ ವೈದ್ಯರ ಸಲಹೆ ನೀಡುವಂತೆ ಮಾನ್ವಿತಾ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕಿಸಿದ್ದು ಸೋನು ಸೂದ್ ಫೌಂಡೇಶನ್ ಮೂಲಕ ಸಹಾಯ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಮಾನ್ವಿತಾ ಕಾಮತ್, . “ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೋ ಸರ್. ಎಲ್ಲದಕ್ಕೂ ಧನ್ಯವಾದಗಳು” ಎಂದು ಮಾನ್ವಿತಾ ಕಾಮತ್ ತಮ್ಮ ಟ್ವೀಟ್‌ನಲ್ಲಿ ಬರೆದು ನಟ ಸೋನು ಸೂದ್ ಟ್ಯಾಗ್ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now