• June 20, 2026

ಬಡ ವಿದ್ಯಾರ್ಥಿಗಳಿಗೆ ಉಚಿತ IAS ಕೋಚಿಂಗ್ ನೀಡಲು ಮುಂದಾದ ನಟ ಸೋನು ಸೂದ್

ನಟ ಸೋನು ಸೂದ್ ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸೂಪರ್ ಸ್ಟಾರ್ ಅನ್ನೋದು ಗೊತ್ತೆ ಇದೆ. ಕೋವಿಡ್ ಸಂದರ್ಭದಲ್ಲಿ ನೂರಾರು ಜನರಿಗೆ ನೆರವಾದ ಸೋನು ಸೂದ್ ಇದೀಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೌದು, ಕೊರೋನಾ ಸಂದರ್ಭದಲ್ಲಿ ಒಂದು ಹೊತ್ತಿನ ತುತ್ತಿಗೂ ಲಕ್ಷಾಂತರ ಮಂದಿ ಪರದಾಡಿದ್ದರು. ಈ ವೇಳೆ ಸೋನು ಸೋದ್ ತಮ್ಮದೇ ಚಾರಿಟಿ ಟ್ರಸ್ಟ್ ಮೂಲಕ ಸಾವಿರಾರು ಜನರಿಗೆ ಆಹಾರದ ವ್ಯವಸ್ಥೆ, ಧನ ಸಹಾಯ ಮಾಡಿದ್ದರು. ಜೊತೆಗೆ ಸಾಕಷ್ಟು ಮಂದಿಯನ್ನು ತನ್ನ ಊರುಗಳಿಗೆ ತಲುಪಲು ಸಹಾಯ ಮಾಡಿದ್ದರು. ಇದರ ಜೊತೆಗೆ ಬಡವರ ವೈದ್ಯಕೀಯ ನೆರವಿಗೂ ಸೋನು ಸೋದ್ ಸಾಕಷ್ಟು ಭಾರಿ ಮುಂದಾಗಿದ್ದಾರೆ. ಇದೀಗ ಐಎಎಸ್ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಉಚಿತ ಆನ್ ಲೈನ್ ಕೋಚಿಂಗ್ ನೀಡಲು ಮುಂದಾಗಿದ್ದಾರೆ. ಸೋನು ಸೂದ್ ಚಾರಿಟಿ ಫೌಂಡೇಶನ್ 2022-23ನೇ ಸಾಲಿನ ಐಎಎಸ್ ಆಕಾಂಕ್ಷಿಗಳಿಗೆ ಉಚಿತ ಆನ್ ಲೈನ್ ಕೋಚಿಂಗ್ ನೀಡಲಿದೆ. ಡಿವೈನ್ ಇಂಡಿಯಾ ಯೂತ್ ಅಸೋಸಿಯೇಷನ್ ಜೊತೆ ಸೋನು ಸೂದ್ ಫೌಂಡೇಶನ್ ಸಂಭವಂ ವಿದ್ಯಾರ್ಥಿವೇತನ ಯೋಜನೆಯಡಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಮುಂದಾಗಲಿದೆ. ಸಂಭವಂ ವಿದ್ಯಾರ್ಥಿ ವೇತನದ ಯೋಜನೆಯಡಿಯಲ್ಲಿ ಹಣಕಾಸಿನ ತೊಂದರೆಯಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸೋನು ಸೂದ್ ಚಾರಿಟಿ ಸಂಸ್ಥೆ ಮುಂದಾಗಿದೆ. ಈ ಮೂಲಕ ದೇಶದಾದ್ಯಂತ ಹಣಕಾಸಿನ ಸಮಸ್ಯೆ ಇರುವ ಬಡ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಮಾತನಾಡಿದ ನಟ ಸೋನು ಸೂದ್, ಎಲ್ಲಾ ಆರ್ಥಿಕ ಹಿನ್ನೆಲೆಯ ಐಎಎಸ್ ಆಕಾಂಕ್ಷಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಹಾಗೂ ಜ್ಞಾನದಿಂದ ಅವರನ್ನು ಸಬಲೀಕರಣಗೊಳಿಸುವುದು ಇದರ ಗುರಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜ್ಞಾನವೇ ಶಕ್ತಿ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now