ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಗುವಿಗೆ ವಾಯು ಎಂದು ಹೆಸರಿಟ್ಟ ಸೋನಂ ಕಪೂರ್: ಮಗನ ಹೆಸರಿನ ಅರ್ಥ ತಿಳಿಸಿದ ನಟಿ
ಮಗುವನ್ನ ಕೈಯಲ್ಲಿ ಹಿಡಿದುಕೊಂಡಿರೋ ಆನಂದ್ ಪತ್ನಿ ಸೋನಂಗೆ ಮುತ್ತು ನೀಡುತ್ತಿದ್ದಾರೆ. ಈ ವೇಳೆ ಸೋನಂ ಮಗುವಿನ ಮುಖವನ್ನೇ ನೋಡುತ್ತಿದ್ದಾರೆ. ಈ ವೇಳೆ ಮೂವರು ಕೂಡ ಹಳದಿ ಬಣ್ಣದ ಬಟ್ಟೆ ಧರಿಸಿದ್ದು ಅಭಿಮಾನಿಗಳು ಈ ಫೋಟೋಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ನಮ್ಮ ಮಗನಿಗೆ ವಾಯು ಕಪೂರ್ ಅಹೂಜ ಎಂದು ಹೆಸರು ಇಟ್ಟಿದ್ದೇವೆ. ಹಿಂದೂ ಧರ್ಮಗ್ರಂಥದ ಪ್ರಕಾರ ವಾಯುವು ಪಂಚ ಭೂತಗಳಲ್ಲಿ ಒಂದು. ವಾಯುವು ಉಸಿರಾಟದ ದೇವತೆ, ಹನುಮಂತನ ತಂದೆ ವಾಯು’ ಎಂದು ಸೋನಂ ಕಪೂರ್ ಬರೆದುಕೊಂಡಿದ್ದಾರೆ.
2007ರಲ್ಲಿ ತೆರೆಕಂಡ ಸಾವರಿಯಾ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ ಸುಮಾರು 20 ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆದರೆ ಆಕೆಗೆ ಹೇಳಿಕೊಳ್ಳುವಂತ ಬ್ರೇಕ್ ಸಿಗಲಿಲ್ಲ. ಹೀಗಾಗಿ 2018ರಲ್ಲಿ ಉದ್ಯಮಿ ಆನಂದ್ ಕಪೂರ್ ಕೈ ಹಿಡಿದಿದ್ದು ಇದೀಗ ಮುದ್ದು ಮಗುವಿನ ತಾಯಿಯಾಗಿದ್ದಾರೆ.
