ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
’ಮಾದೇವ’ನಿಗೆ ಜೋಡಿಯಾದ ಸೋನಲ್ ಮೊಂಥೆರೋ…ಮತ್ತೆ ಒಂದಾಗ್ತಿದ್ದಾರೆ ‘ರಾಬರ್ಟ್’ ಜೋಡಿ
ವಿನೋದ್ ಹಾಗೂ ಸೋನಲ್ ಈ ಹಿಂದೆ ರಾಬರ್ಟ್ ಸಿನಿಮಾದಲ್ಲಿ ತನು-ರಾಘವ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನೆ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಖಾಕಿ ಸಿನಿಮಾ ಸಾರಥಿ ನವೀನ್ ಬಿ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮಾದೇವ ಚಿತ್ರದಲ್ಲಿ ಸೋನಲ್ 80ರ ದಶಕದ ಮಧ್ಯಮವರ್ಗದ ಹುಡುಗಿಯಾಗಿ ಬಣ್ಣ ಹಚ್ಚಲಿದ್ದಾರೆ.
80 ದಶಕದ ಎಮೋಷನಲ್ ಹಾಗೂ ಮಾಸ್ ಎಲಿಮೆಂಟ್ ಕಂಟೆಂಟ್ ಹೊಂದಿರುವ ಮಾದೇವ ಸಿನಿಮಾ ರೈಲು ಮತ್ತು ಜೈಲಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯಲಿದೆ. ವಿನೋದ್ ಪ್ರಭಾಕರ್ ಈ ಹಿಂದಿನ ಪಾತ್ರಗಳಿಗಿಂತ ಈ ಚಿತ್ರದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಶಿವಮೊಗ್ಗ, ಧಾರವಾಡ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. ಹಿರಿಯ ನಟಿ ಶ್ರುತಿ, ಪೋಷಕ ಕಲಾವಿದ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದು, ಬಾಲಕೃಷ್ಣ ತೋಟ ಕ್ಯಾಮೆರಾ ಕೈಚಳಕ, ಪ್ರದ್ಯೋಥನ್ ಮ್ಯೂಸಿಕ್ ಪುಳಕ ಸಿನಿಮಾಕ್ಕಿದೆ. ಗಾಯತ್ರಿ ರಾಜೇಶ್ ಹಾಗೂ ಲವ್ ಗುರು ಸುಮನ್ ನಿರ್ಮಾಣದ ಮಾದೇವ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ.
