• March 16, 2026

ಮತ್ತೊಮ್ಮೆ ಬಾಂಬ್ ಸಿಡಿಸಿದ ಚಿನ್ಮಯಿ ಶ್ರೀಪಾದ್: ಸಮಂತಾ ಪಾತ್ರಕ್ಕೆ ಡಬ್ಬಿಂಗ್ ಮಾಡಲಾರೆ ಎಂದ ಗಾಯಕಿ

ತಮಿಳು ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ್ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಖ್ಯಾತ ನಟ, ನಟಿಯರ ಖಾಸಗಿ ಜೀವನದ ಕುರಿತಾಗಿ ಸಿನಿಮಾ ರಂಗದಲ್ಲಿ ಕೋಲಾಹಲ ಎಬ್ಬಿಸಿದ್ದ ಚಿನ್ಮಯಿ ಶ್ರೀಪಾದ್ ಇದೀಗ ಸಮಂತಾ ಪಾತ್ರಗಳಿಗೆ ಡಬ್ಬಿಂಗ್ ಮಾಡುವುದಿಲ್ಲ ಎಂದು ನೇರಾ ನೇರವಾಗಿ ಹೇಳಿದ್ದಾರೆ. ಸಮಂತಾ ನಟನೆಯ ಪಾತ್ರಗಳಿಗೆ ತಮ್ಮ ಧ್ವನಿಯ ಮೂಲಕವೇ ಜೀವ ತುಂಬುತ್ತಿದ್ದವರು ಚಿನ್ಮಯಿ ಶ್ರೀಪಾದ್. ಸಮಂತ ನಟನೆಯನ್ನು ಅಭಿಮಾನಿಗಳು ಎಷ್ಟು ಮೆಚ್ಚುಕೊಳ್ಳುತ್ತಿದ್ದರೋ ಅವರ ಪಾತ್ರದ ಧ್ವನಿಯನ್ನು ಅಷ್ಟೇ ಇಷ್ಟ ಪಡುತ್ತಿದ್ದರು. ಸಮಂತಾ ಶರೀರವಾದರೆ ಚಿನ್ಮಯಿ ಶ್ರೀಪಾದ್ ಶರೀರಾವಾಗಿದ್ದರು. ಆದರೆ ಇನ್ನು ಮುಂದೆ ಸಮಂತಾರ ಹಿಂದಿನ ಮುದ್ದು ಧ್ವನಿ ಪ್ರೇಕ್ಷಕರಿಗೆ ಕೇಳುವುದು ಅನುಮಾನವಾಗಿದೆ. ಕಳೆದ ಕೆಲ ಸಮಯದಿಂದ ಸಮಂತಾ ಹಾಗೂ ಚಿನ್ಮಯಿ ಮಧ್ಯೆ ಮನಸ್ತಾಪ ಉಂಟಾಗುತ್ತಿದೆ. ಮೇಲಿಂದ ಮೇಲೆ ಮನಸ್ತಾಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ಮಯಿ ಇಂಥದೊಂದು ದೃಡ ನಿರ್ಧರ ಕೈಗೊಂಡಿದ್ದಾರೆ. ಸಮಂತಾರ ಮುಂದಿನ ಸಿನಿಮಾಗಳಿಗೆ ವಾಯ್ಸ್ ನೀಡುವುದಿಲ್ಲ ಎಂದಿರುವ ಚಿನ್ಮಯಿ ಇನ್ನು ಮುಂದೆ ಅವರ ಜೊತೆ ಯಾವುದೇ ರೀತಿಯ ಕಾಟ್ಯಾಕ್ಟ್ ಕೂಡ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚಿನ್ಮಯಿ ಶ್ರೀಪಾದ್ ಧೃಡ ನಿರ್ಧಾರದಿಂದ ಸಮಂತಾ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ರಂಗದ ಮಧ್ಯಸ್ಥಿಕೆಯಿಂದ ಚಿನ್ಮಯಿ ನಿರ್ಧಾರ ಬದಲಿಸುತ್ತಾರಾ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now