• March 14, 2026

ಕಾಂತಾರ ನೋಡಿ ಪಂಜುರ್ಲಿ ರೀಲ್ಸ್ ಮಾಡಿದ್ದ ಯುವತಿ: ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ

ರಿಷಬ್ ಶೆಟ್ಟಿ ನಿರ್ದೆಶಿಸಿ ನಟಿಸಿರುವ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಬರುವ ದೈವದ ರೂಪ ಹಾಗೂ ಹಾಡುಗಳು ಜನರಿಗೆ ಸಖತ್ ಇಷ್ಟವಾಗಿತ್ತು. ಅಲ್ಲದೆ ದೈವದ ವೇಷ ಹಾಕಿ ರೀಲ್ಸ್ ಮಾಡುವುದು, ಚಿತ್ರದಲ್ಲಿ ಬರುವ ಓ ಎಂಬ ಶಬ್ದವನ್ನು ಕೂಗುವುದು ಮಾಡುತ್ತಿದ್ದರು. ಹೀಗೆ ಮಾಡುವುದು ದೇವರಿಗೆ ಅವಮಾನ ಮಾಡಿದಂತೆ, ಇದನ್ನೆಲ್ಲಾ ಮಾಡದಂತೆ ರಿಷಬ್ ಶೆಟ್ಟಿ ಮನವಿ ಮಾಡಿದ್ದರು. ಆದರೂ ಬೆಂಗಳೂರಿನ ಮೇಕಪ್ ಆರ್ಟೀಸ್ಟ್ ಶ್ವೇತಾ ರೆಡ್ಡಿ ದೈವದ ವೇಷ ಧರಿಸಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು. ಶ್ವೇತಾ ರೆಡ್ಡಿ ರೀಲ್ಸ್ ಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿ ನೆಗೆಟೀವ್ ಕಾಮೆಂಟ್ ಬಂದ ಬಳಿಕ ಇದೀಗಾ ಶ್ವೇತಾ ರೆಡ್ಡಿ ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿದ್ದಾರೆ. ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಸಲ್ಲಿಸಿರುವ ಶ್ವೇತಾ ರೆಡ್ಡಿ ಸಮಸ್ತ ದೈವಾರಾಧಕರ ಬಳಿ ಕ್ಷಮೆ ಯಾಚಿಸಿದ್ದಾರೆ.  ಅಲ್ಲದೆ ತಾನು ಬೆಂಗಳೂರಿನವಳಾಗಿದ್ದು ಇದರ ಬಗ್ಗೆ ಏನು ಗೊತ್ತಿಲ್ಲ. ಮುಂದೆಂದೂ ಈ ರೀತಿ ಮಾಡಲ್ಲ. ನಾನು ದೈವ, ಯಕ್ಷಗಾನ ಒಂದೇ ಎಂದು ತಿಳಿದು ಹೀಗೆ ಮಾಡಿದೆ ಎಂದಿದ್ದಾರೆ. ಶ್ವೇತಾ ರೆಡ್ಡಿ ದೈವದ ವೇಷ ತೊಟ್ಟು ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಆಕೆಯ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಶ್ವೇತಾ ರೆಡ್ಡಿ ಧರ್ಮಸ್ಥಳಕ್ಕೆ ತಪ್ಪು ಕಾಣಿಸಿ ಒಪ್ಪಿಸಿ, ತೀರ್ಥ ಸ್ನಾನ ಮಾಡಿ ಕ್ಷಮೆ ಯಾಚಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now