ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆರೆಗೆ ಬರುತ್ತಿದೆ ಕೆಜಿಎಫ್ ಸಿನಿಮಾ: ಯಶ್ ಅಲ್ಲ ಚಿಯಾನ್ ವಿಕ್ರಂ ಹೀರೋ
ತಮಿಳಿನ ಖ್ಯಾತ ನಿರ್ದೇಶಕ ಪ.ರಂಜಿತ್ ಕೆಜಿಎಫ್ ನ ರಿಯಲ್ ಇನ್ಸಿಡೆಂಟ್ ಗಳನ್ನು ತೆರೆ ಮೇಲೆ ತರುಲು ಮುಂದಾಗಿದ್ದಾರೆ. ಪ.ರಂಜಿತ್ ಗೆ ನಟ ಚಿಯಾನ್ ವಿಕ್ರಂ ಸಾಥ್ ನೀಡುತ್ತಿದ್ದಾರೆ.ಅಂದರೆ ಕೆಜಿಎಫ್ ಸಿನಿಮಾದಲ್ಲಿ ಚಿಯಾನ್ ವಿಕ್ರಂ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಆಗಿ ಬರುತ್ತಿರುವ ಸಿನಿಮಾ ತಮಿಳಿನ ಕೆಜಿಎಫ್ ಸಿನಿಮಾವಾಗಿರಲಿದೆ.
ಕೆಜಿಎಫ್ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂದಿದ್ದಾರೆ ವಿಕ್ರಮ್. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಇದಾಗಲಿದೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಪಾ.ರಂಜಿತ್ ದೇಸಿಯ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕ. ಶೋಷಿತರ ನೋವುಗಳನ್ನು ದೃಶ್ಯಕ್ಕೆ ತಂದ ಹೆಗ್ಗಳಿಕೆ ಇವರದ್ದು. ಒಟ್ನಲ್ಲಿ ಕೆಜಿಎಫ್ ಕಾಲ್ಪನಿಕ ಸಿನಿಮಾ ನೋಡಿದ ಅಭಿಮಾನಿಗಳು ಇದೀಗ ನೈಜ ಘಟನೆಯನ್ನು ತೆರೆ ಮೇಲೆ ನೋಡೋಕೆ ರೆಡಿಯಾಗಿದ್ದಾರೆ.
