ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
“IKEA” ದಲ್ಲಿ ಬಿಡುಗಡೆಯಾದ ‘ಶಿವಾಜಿ ಸುರತ್ಕಲ್ 2’ ಸಿನಿಮಾದ ಒಲವಿನ ಟೀಸರ್
“ಶಿವಾಜಿ ಸುರತ್ಕಲ್” ಸಿಕ್ಕ ಗೆಲುವಿನಿಂದ ಭಾಗ 2 ಮಾಡಲು ಮುಂದಾದ್ದೆವು. ಅದರಲ್ಲೂ ರಮೇಶ್ ಅರವಿಂದ್ ಅವರ ಸಹಕಾರ ಅಪಾರ ಎಂದ ನಿರ್ಮಾಪಕ ಅನೂಪ್ ಗೌಡ, ನಿರ್ದೇಶಕರು ಸೇರಿದಂತೆ ಎಲ್ಲಾ ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ ತಿಳಿಸಿದರು.
ನನ್ನ ನಿಮ್ಮ ಸ್ನೇಹಕ್ಕೆ ಮೂರು ದಶಕಗಳಾಗಿದೆ. ಈ ಮೂವತ್ತು ವರ್ಷಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೆ ಒಂದೇ ಪಾತ್ರವನ್ನು ಎರಡನೇ ಬಾರಿ ಮಾಡುತ್ತಿರುವುದು “ಶಿವಾಜಿ ಸುರತ್ಕಲ್ 2” ಚಿತ್ರದಲ್ಲಿ ಮಾತ್ರ. ನನಗೆ ನಿರ್ದೇಶಕ ಆಕಾಶ್ ಶ್ರೀವತ್ಸ ಹದಿನೈದು ವರ್ಷಗಳಿಂದ ಪರಿಚಯ. “ಆಕ್ಸಿಡೆಂಟ್” ಚಿತ್ರದಲ್ಲಿ ನನ್ನೊಟ್ಟಿಗೆ ಕೆಲಸವನ್ನೂ ಮಾಡಿದ್ದಾರೆ. ಅದ್ಭುತ ನಿರ್ದೇಶಕ. ಒಳ್ಳೆಯ ತಂಡ. “ಶಿವಾಜಿ ಸುರತ್ಕಲ್ 2” ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ರಮೇಶ್ ಅರವಿಂದ್.
ನಾನು “ಶಿವಾಜಿ ಸುರತ್ಕಲ್” ಚಿತ್ರದಲ್ಲಿ ರಮೇಶ್ ಸರ್ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಹಾಗಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗೆ ಭಾಗ ಎರಡು, ಮೂರು ಹೀಗೆ ಮಾಡುತ್ತಿರಿ ಎಂದು ಹೇಳಿದ್ದೀನಿ ಎನ್ನುತ್ತಾರೆ ನಟಿ ರಾಧಿಕಾ ನಾರಾಯಣ್.
ನನಗೆ ಕೊರೋನ ನಂತರ ಇದು ಮೊದಲ ಪತ್ರಿಕಾಗೋಷ್ಠಿ. ರಮೇಶ್ ಸರ್ ಜೊತೆ ಅಭಿನಯ ಮಾಡುವುದು ನನ್ನ ಬಹು ದಿನಗಳ ಕನಸು. ಅದು ಈಗ ಈಡೇರಿದೆ. ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ ಎಂದರು ನಟಿ ಮೇಫನ ಗಾಂವ್ಕರ್.
ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಆಚರಣೆ ಸಹ ನಡೆಯಿತು. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ದರ್ಶನ್ – ಗುರುಪ್ರಸಾದ್ ಛಾಯಾಗ್ರಹಣ ಹಾಗೂ ಆಕಾಶ್ ಶ್ರೀವತ್ಸ ಸಂಕಲನ ಈ ಚಿತ್ರಕ್ಕಿದೆ.
ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ನಾಜರ್, ಆರಾಧ್ಯ, ರಮೇಶ್ ಭಟ್, ಶ್ರೀನಿವಾಸ್ ಪ್ರಭು, ಶೋಭ್ ರಾಜ್, ವಿದ್ಯಾಮೂರ್ತಿ, ವೀಣಾ ಸುಂದರ್, ರಘು ರಮಣಕೊಪ್ಪ, ಮಧುರ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
