• January 1, 2026

ರಿವೀಲ್ ಆಯ್ತು ಶಶಾಂಕ್, ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ನ ಚಿತ್ರದ ಟೈಟಲ್

ಇತ್ತೀಚೆಗಷ್ಟೇ ನಿರ್ದೆಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಸೆಟ್ಟೇರಿದೋ ಗೊತ್ತೆ ಇದೆ. ಇದೇ ಮೊದಲ ಭಾರಿಗೆ ಶಶಾಂಕ್ ಹಾಗೂ ಕೃಷ್ಣ ಒಂದಾಗ್ತಿರೋದ್ರಿಂದ ಗಾಂಧಿನಗರದಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಸದ್ಯ ಚಿತ್ರತಂಡ ಚಿತ್ರದ ಟೈಟಲ್ ರಿವೀಲ್ ಮಾಡಿದೆ. ನಟ ಡಾರ್ಲಿಂಗ್ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇತ್ತ ನಿರ್ದೇಶಕ ಶಶಾಂಕ್ ಕೂಡ ಕೆಲ ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾ ತೆರೆಕಂಡಿದ್ದು ಸೂಪರ್ ಹಿಟ್ ಆಗಿದೆ. ಇದೇ ಬೆನ್ನಲ್ಲೆ ಶಶಾಂಕ್ ಕೃಷ್ಣ ಜೊತೆ ಸೇರಿ ಮತ್ತೊಂದು ಸಿನಿಮಾ ಶುರುಮಾಡಿದ್ದಾರೆ. ಕೆಲ ದಿನಗಳ ಹಿಂದೆ ಅದ್ದೂರಿಯಾಗಿ ಸಿನಿಮಾದ ಮುಹೂರ್ತ ನೆರವೇರಿತ್ತು. ಆದರೆ ಚಿತ್ರದ ಟೈಟಲ್ ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಟೈಟಲ್ ರಿವೀಲ್ ಆಗಿದೆ. ಶಶಾಂಕ್ ಹಾಗೂ ಕೃಷ್ಣ ಇಬ್ಬರೂ ಸೇರಿ ವಿಶಿಷ್ಠವಾಗಿ ಟೈಟಲ್ ರಿವೀಲ್ ಮಾಡಿದ್ದಾರೆ. ಅಂದ್ಹಾಗೆ ಇವರಿಬ್ಬರ ಮೊದಲ ಕಾಂಬಿನೇಷನ್ ಸಿನಿಮಾದ ಟೈಟಲ್ ‘ಕೌಸಲ್ಯಾ ಸುಪ್ರಜಾ ರಾಮ’. ಶಶಾಂಕ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್‌ನನ್ನು ಬಿಸಿ ಪಾಟೀಲ್ ಹಾಗೂ ಶಶಾಂಕ್ ಇಬ್ಬರೂ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಕೃಷಿ ಸಚಿವ ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಲಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now