• March 14, 2026

ಡಾ.ರಾಜ್ ಕುಮಾರ್, ಪೃಥ್ವಿರಾಜ್ ಕಪೂರ್, ಬಾಲಕೃಷ್ಣರಂತಹ ದಿಗ್ಗಜರಿಗೆ ಮೇಕಪ್ ಮಾಡಿದ್ದ ಕೇಶವಣ್ಣ ವಿಧಿವಶ

ಚಿತ್ರರಂಗದ ಖ್ಯಾತ ನಟರುಗಳಾದ ಡಾ. ರಾಜ್ ಕುಮಾರ್, ಪೃಥ್ವಿ ರಾಜ್ಕಪೂರ್, ರಜನಿಕಾಂತ್ , ಬಾಲಕೃಷ್ಣ, ಅಂಬರೀಶ್, ನರಸಿಂಹ ರಾಜು, ಅನಂತ್ ನಾಗ್, ರವಿಚಂದ್ರನ್,ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ದಿಗ್ಗಜ ನಟರಿಗೆ ಮೇಕಪ್ ಮಾಡಿದ್ದ ಮೇಕಪ್ ಆರ್ಟಿಸ್ಟ್ ಎಂ. ಎಸ್ ಕೇಶವಣ್ಣ ನಿಧನರಾಗಿದ್ದಾರೆ. 85 ವರ್ಷ ವಯಸ್ಸಾಗಿದ್ದ ಕೇಶವಣ್ಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ 53 ವರ್ಷಗಳ ಕಾಲ ಮೇಕಪ್ ಮ್ಯಾನ್ ಆಗಿದ್ದ ಕೇಶವಣ್ಣ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಕೇಶವಣ್ಣ ಅವರ ತಂದೆ ಸುಬ್ಬಣ್ಣನವರು ಕೂಡ ರಾಜ್ಕುಮಾರ್ ಅವರಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದವರು. ಹಾಸ್ಯ ಕಲಾವಿದ ನರಸಿಂಹ ರಾಜು ಅವರಿಗೆ ಮೇಕಪ್ ಮಾಡುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೇಶವಣ್ಣ ಬಳಿಕ ಸುಮಾರು 53ಕ್ಕೂ ಹೆಚ್ಚು ವರ್ಷಗಳ ಕಾಲ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. 30 ವರ್ಷಗಳ ಕಾಲ ರಾಜ್ ಕುಮಾರ್ ಕಂಪೆನಿಯಲ್ಲಿ ಮೇಕಪ್ ಕಲಾವಿದರಾಗಿದ್ದ ಕೇಶವಣ್ಣ ನಿರ್ಮಾಪಕ ವೀರಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ ಹೌಸ್ ನಲ್ಲೂ ಕೆಲ ಕಾಲ ಕೆಲಸ ಮಾಡಿದ್ದರು. ಕೇಶವಣ್ಣ ನಿಧನಕ್ಕೆ ಸ್ಯಾಂಡಲ್ ವುಡ್ ಚಿತ್ರರಂಗ ಕಂಬನಿ ಮಿಡಿದಿದ್ದು, ಇಂದು ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬ ವರ್ಗ ತೀರ್ಮಾನಿಸಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now