• January 1, 2026

ಕಾಂತಾರ ಸಿನಿಮಾವನ್ನು ನೇರವಾಗಿ ಆಸ್ಕರ್ ಗೆ ಕಳುಹಿಸಿ: ನಟಿ ಕಂಗಾನ ರಣಾವತ್

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾವನ್ನು ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಸಿನಿಮಾದ ಕುರಿತು ಮಾತನಾಡಿದ್ದ ನಟಿ ಕಂಗನಾ ರಣಾವತ್ ಇದೀಗ ಮತ್ತೊಮ್ಮೆ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದ ಚಿತ್ರವನ್ನು ನೇರವಾಗಿ ಆಸ್ಕರ್ ಗೆ ಕಳುಹಿಸಿ ಎಂದಿದ್ದಾರೆ. ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಕಾಂತಾರ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಹೇಳುವ ಮೂಲಕ ಸರ್ಕಾರ ಗಮನ ಸೆಳೆದಿದ್ದಾರೆ ನಟಿ ಕಂಗಾನ ರಣಾವತ್. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಕಂಗಾನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.     ಕಳೆದ ಎರಡು ದಿನಗಳ ಹಿಂದಷ್ಟೇ ಕಾಂತಾರ ಚಿತ್ರ ವೀಕ್ಷಿಸಿದ್ದ ಕಂಗಾನ ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದ್ದರು. ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ನಾನೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ಇದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಕಾಂತಾರ ಸಿನಿಮಾ ಮೂಡಿ ಬಂದಿದೆ ಎಂದಿದ್ದರು.     ಈಗಾಗ್ಲೆ ಕಾಂತಾರ ಸಿನಿಮಾಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ನಟ ಪ್ರಭಾಸ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕಂಗಾನ ರಣಾವತ್ ಸೇರಿದಂತೆ ಪರಭಾಷೆಯ ಕಲಾವಿದರು ಜೈ ಅಂದಿದ್ದರು. ಇದೀಗ ಕಂಗನಾ ಕಾಂತಾರವನ್ನು ಆಸ್ಕರ್ ಗೆ ಕಳುಹಿಸಲು ಮನವಿ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now