• December 22, 2025

ರಾಹುಲ್ ಗಾಂಧಿ ಕಾರ್ನರ್ ಮೀಟಿಂಗ್ ಗೆ ರಮ್ಯಾಗೆ ನೋ ಎಂಟ್ರಿ: ಕೋಪಗೊಂಡು ವಾಪಸ್ ಹೋದ ಮೋಹಕ ತಾರೆ

ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಸ್ಯಾಂಡಲ್ ವುಡ್  ನಟಿ ರಮ್ಯಾ ರಾಹುಲ್ ಗಾಂಧಿ ಕೈ ಕೈ ಹಿಡಿದುಕೊಂಡು ಯಾತ್ರೆಯಲ್ಲಿ ಭಾಗಿಯಾಗಿದ್ದರು. ಆದರೆ ಆ ಬಳಿಕ ರಮ್ಯಾಗೆ ಮುಜುಗರ ಆಗುವಂಥ ಪ್ರಸಂಗವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ರಾಯಚೂರಿನಲ್ಲಿ ನಡೆದ ರಾಹುಲ್ ಗಾಂಧಿಯ ಕಾರ್ನರ್ ಮೀಟಿಂಗ್ ಗೆ ರಮ್ಯಾಗೆ ಪ್ರವೇಶ ನಿರಾಕರಿಸಲಾಗಿದೆ. ಇದರಿಂದ ಕೋಪಗೊಂಡ ರಮ್ಯಾ ವಾಪಸ್ ಹೋಗಿದ್ದಾರೆ. ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದೆ. ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ ರಮ್ಯ, ಬಳಿಕ ಕಾರ್ನರ್ ಮೀಟಿಂಗ್ ನಡೆಯುತ್ತಿದ್ದ​ ಸ್ಥಳಕ್ಕೂ ಆಗಮಿಸಿದ್ದರು. ಈ ವೇಳೆ ವೇದಿಕೆ ಹತ್ತಲು ಹೋದ ರಮ್ಯಾಗೆ ಅವಕಾಶ ನಿರಾಕರಿಸಲಾಗಿದೆ. ಅತಿಥಿಗಳ ಪಟ್ಟಿಯಲ್ಲಿ ರಮ್ಯ ಹೆಸರು ಇರದ ಕಾರಣ ಭದ್ರತಾ ಸಿಬ್ಬಂದಿ ರಮ್ಯಾಗೆ ವೇದಿಕೆ ಹತ್ತಲು ಅವಕಾಶ ನೀಡಿಲ್ಲ. ಇದರಿಂದ ಸಿಟ್ಟಾದ ರಮ್ಯ, ಎಂಟ್ರಿ ಕೊಡದ ಭದ್ರತಾ ಸಿಬ್ಬಂದಿ ಹಾಗೂ ರಾಯಚೂರಿನ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಎಷ್ಟೇ ಕೇಳಿಕೊಂಡಲು ಅವಕಾಶ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ರಮ್ಯ ಕೆಲಹೊತ್ತು ಅಲ್ಲೇ ವೇದಿಕೆ ಬಳಿ ವಾಗ್ವಾದ ನಡೆಸಿ ನಂತರ ಕೋಪಗೊಂಡು ಅಲ್ಲಿಂದ ವಾಪಸ್ ಹೋದರು. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now