• December 22, 2025

ಲಾಯಲ್ ವರ್ಲ್ಡ್ ಮಾರ್ಕೆಟ್ ಎರಡನೇ ಶಾಖೆ ಬೆಂಗಳೂರಿನ ಹೆಬ್ಬಾಳದಲ್ಲಿ ಶುಭಾರಂಭ….ಅತಿ ದೊಡ್ಡ ಹೈಪರ್ ಮಾರ್ಕೆಟ್ ಗೆ ಸಚಿವ ಕೃಷ್ಣ ಭೈರೇಗೌಡ ಚಾಲನೆ

ಲಾಯಲ್ ವರ್ಲ್ಡ್ ಮಾರ್ಕೆಟ್ ನ ಎರಡನೇ ಶಾಖೆ ಬೆಂಗಳೂರಿನ ಹೆಬ್ಬಾಳದ ಫೀನಿಕ್ಸ್ ಮಾಲ್ ಆಫ್ ಏಷ್ಯಾ ನಲ್ಲಿಂದು ಶುಭಾರಂಭಗೊಂಡಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಲಾಯಲ್ ವರ್ಲ್ಡ್ ಮಾರ್ಕೆಟ್ ಗೆ ಚಾಲನೆ‌ ನೀಡಿದರು. ಈ ಸಂದರ್ಭದಲ್ಲಿಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು. ದೈನಂದಿನ ಅಗತ್ಯ ವಸ್ತುಗಳ ಲಾಯಲ್ ವರ್ಲ್ಡ್ ಮಾರ್ಕೆಟ್ ಈಗಾಗಲೇ ಬೆಂಗಳೂರಿನ ವೈಟ್ ಫೀಲ್ಡ್ ಹಾಗೂ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಫೀನಿಕ್ಸ್ ಮಾಲ್ ಆಫ್ ಏಷ್ಯಾ ದಲ್ಲಿರುವ ಲಾಯಲ್ ವರ್ಲ್ಡ್ ಮಾರ್ಕೆಟ್ 25 ಸಾವಿರ ಚದರ ಅಡಿಯಷ್ಟು ವಿಸ್ತಾರವಿದ್ದು, ಒಂದು ಲಕ್ಷಕ್ಕೂ ಅಧಿಕ 100 ವಿಭಾಗಗಳ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಬ್ರ್ಯಾಂಡ್ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ. ಲಾಯಲ್ ವರ್ಲ್ಡ್ ಮಾರ್ಕೆಟ್ ಹಲವಾರು ವಿಶೇಷತೆಗಳನ್ನು ಹೊಂದಿದೆ. ಇದು ಬ್ರೆಡ್, ಟೋಸ್ಟ್‌ಗಳು, ಚೌಕ್ಸ್ ಪೇಸ್ಟ್ರಿಗಳು ಮತ್ತು ಖಾರದ ಟ್ರೀಟ್‌ಗಳಂತಹ ವಿವಿಧ ತಾಜಾ ಉತ್ಪನ್ನಗಳು. ಹಾಗೆಯೇ ಪ್ರಪಂಚದಾದ್ಯಂತದ ಅತ್ಯುತ್ತಮ ಹಣ್ಣುಗಳು ಇಲ್ಲಿ ದೊರೆಯುತ್ತವೆ. ಯಾವುದೇ ವಯೋಮಾನದವರು ಬಂದರು ವಸ್ತುಗಳನ್ನು ಕೊಂಡುಕೊಳ್ಳಲು ಗೊಂದಲವಾಗುವುದಿಲ್ಲ. ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಮೇಯ ಇಲ್ಲಿ ಇಲ್ಲವೇ ಇಲ್ಲ. ಒಂದೇ ಸೂರಿನಡಿ ವಿವಿಧ ರೀತಿಯ ದೈನಂದಿನ ವಸ್ತುಗಳ ದೊರೆಯುತ್ತದೆ. ಅದರಲ್ಲೂ ಬೇಕರಿ ಉತ್ಪನ್ನಗಳಾದ ಕೇಕ್, ಬನ್, ಬ್ರೆಡ್ ಹಾಗೂ ಐಸ್ ಕ್ರೀಮ್ ರುಚಿ ಅದ್ಭುತವಾಗಿದೆ. ಹೊರಗಡೆ ಮಾರುಕಟ್ಟೆಗಿಂತ ಇಲ್ಲಿ ಕಡಿಮೆ ದರದಲ್ಲಿ ತರಕಾರಿಗಳು ಸಿಗುತ್ತವೆ. ಸಖತ್ ಫ್ರೆಶ್ ಎನಿಸುವ ಉತ್ಪನ್ನಗಳು ದೊರೆಯುತ್ತಿವೆ. ದುಬೈ ಮಾಲ್ ರೀತಿ ಲಾಯಲ್ ವರ್ಲ್ಡ್ ಮಾರ್ಕೆಟ್ ಫೀಲ್ ಕೊಡುತ್ತದೆ ಎನ್ನುತ್ತಾರೆ ಗ್ರಾಹಕರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now