ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ರಶಾಂತ್ ಸಂಬರ್ಗಿಯನ್ನು ‘ಕುತಂತ್ರಿ ಕಲಾವಿದ’ ಎಂದ ಸಾನ್ಯಾ ಐಯ್ಯರ್
ಬಿಗ್ ಬಾಸ್ ಮನೆಗೆ ಹೋಗುವ ಮೊದಲ ನಟ ಸುದೀಪ್ ಪ್ರತಿಯೊಬ್ಬರಿಗೂ ಒಂದೊಂದು ಬ್ಯಾಂಡ್ ನೀಡಿದ್ದರು. ಆ ಬ್ಯಾಂಡ್ ಆಯಾ ಸ್ಪರ್ಧಿಗಳ ಬಳಿಯೇ ಇರಬೇಕು. ಬಿಗ್ ಬಾಸ್ ಹೇಳಿದ ಮೇಲೆ ಅದನ್ನು ಬೇರೆಯವರಿಗೆ ನೀಡಬೇಕು ಎಂದು ಹೇಳಿದ್ದರು. ಅಂತೆಯೇ ಸಾನ್ಯಾಗೆ ಸಿಕ್ಕ ಬ್ಯಾಂಡ್ ನಲ್ಲಿ ಕಲಾವಿದ ಎಂದು ಬರೆಯಲಾಗಿತ್ತು. ಅದನ್ನು ಸಾನ್ಯಾ ಕುತಂತ್ರಿ ಕಲೆ ಎಂದು ಬದಲಾಯಿಸಿ ಪ್ರಶಾಂತ್ ಸಂಬರ್ಗಿಗೆ ನೀಡಿದ್ದಾರೆ.
ಪ್ರಶಾಂತ ಸಂಬರ್ಗಿ ತಮಗೆ ಅನಿಸಿದ್ದರನ್ನು ನೇರಾ ನೇರವಾಗಿ ಹೇಳಿ ಸಾಕಷ್ಟು ಮಂದಿಯ ವಿರೋಧ ಕಟ್ಟಿಕೊಂಡಿದ್ದಾರೆ. ಇದೀಗ ಸಾನ್ಯಾ ಕೈಯಿಂದ ಕುತಂತ್ರಿ ಬ್ಯಾಂಡ್ ಪಡೆದುಕೊಂಡಿರುವ ಪ್ರಶಾಂತ್ ಮುಂದಿನ ದಿನಗಳಲ್ಲಿ ಸಾನ್ಯಾರನ್ನು ಯಾವ ರೀತಿ ಟ್ರೀಟ್ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
