• March 14, 2026

ಮಗನ ಜೊತೆ ರೀಲ್ಸ್ ಗೆ ಹೆಜ್ಜೆ ಹಾಕಿದ ಸಂಜನಾ ಗಲ್ರಾನಿ

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮನೆಯಲ್ಲಿ ಸಂತಸ ಮನೆ ಮಾಡಿದೆ. ಮುದ್ದು ಮಗುವಿನ ಆಗಮನದಿಂದ ಸಖತ್ ಖುಷಿಯಾಗಿರುವ ಸಂಜನಾ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಗ ಅಲಾರಿಕ್ ಜೊತೆ ಸಂಜನಾ ರೀಲ್ಸ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟಿ ಸಂಜನಾ ಗಲ್ರಾಣಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಮಗನ ಅದ್ದೂರಿ ನಾಮಕರಣ ಮಾಡಿರುವ ಸಂಜನಾ ಆಗಾಗ ರೀಲ್ಸ್ ಗಳನ್ನ ಮಾಡಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ಮೊದಲ ಬಾರಿಗೆ ಮುದ್ದು ಮಗ ಅಲಾರಿಕ್ ಜೊತೆ ರೀಲ್ಸ್ ಮಾಡಿದ್ದು ಈ ರೀಲ್ಸ್ ಸಖತ್ ವೈರಲ್ ಆಗಿದೆ. ಹಿಂದಿ ಹಾಡಿಗೆ ಮಗನನ್ನು ಹಿಂಡಿದು ಸಂಜನಾ ಸಖತ್ತಾಗೆ ಸ್ಟೆಪ್ ಹಾಕಿದ್ದಾರೆ. ಮಗುವಿನ ಆಗಮನದ ಬಳಿಕ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರೋ ಸಂಜನಾ ಆದಷ್ಟು ಬೇಗ ಮತ್ತೆ ಬೆಳ್ಳಿ ಪರದೆಗೆ ಬರಲಿ ಅಂತಿದ್ದಾರೆ ಅವರ ಅಭಿಮಾನಿಗಳು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now