• June 4, 2026

ಮಳೆಯಲ್ಲೇ ಭಾಷಣ ಮಾಡಿದ ರಾಹುಲ್ ಗಾಂಧಿ: ನಟಿ ರಮ್ಯಾ ಹೇಳಿದ್ದೇನು ಗೊತ್ತಾ?

ಮಳೆಯಲ್ಲೇ ಭಾಷಣ ಮಾಡಿದ ರಾಹುಲ್ ಗಾಂಧಿ: ನಟಿ ರಮ್ಯಾ ಹೇಳಿದ್ದೇನು ಗೊತ್ತಾ? ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದಾರೆ. ಬಿಸಿಲು, ಮಳೆ ಎನ್ನದೆ ಕಾಂಗ್ರೆಸ್ ಯುವರಾಜ ಯಾತ್ರೆಯಲ್ಲಿ ತೊಡಗಿಕೊಂಡಿದ್ದು ರಾಹುಲ್ ಭಾಷಣ ಕೇಳಲು ಸಾವಿರಾರು ಮಂದಿ ಹಾಜರಾಗುತ್ತಿದ್ದಾರೆ. ಸದ್ಯ ರಾಹುಲ್ ಗಾಂಧಿ ಮಳೆಯನ್ನು ಲೆಕ್ಕಿಸದೆ ಭಾಷಣ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಸ್ಯಾಂಡಲ್ ವುಡ್ ನಟಿ ರಮ್ಯಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿರುವ ನಟಿ ರಮ್ಯಾ, ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನಸೆಳೆದಿದೆ ಎಂದು ರಾಹುಲ್ ಗಾಂಧಿಯನ್ನು ನಟಿ ರಮ್ಯಾ ಹೊಗಳಿದ್ದಾರೆ. ಬಂಡೀಪಾಳ್ಯದ ಸಮೀಪ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದು ಈ ವೇಳೆ ಭಾರೀ ಮಳೆ ಸುರಿದಿದೆ. ಮಳೆಯ ನಡುವೆಯೂ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ರಾಹುಲ್ ಗಾಂಧಿ ಭಾಷಣ ಕೇಳಲು ನೂರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಈ ವೇಳೆ ಕಾಂಗ್ರೆಸ್ ನಾಯಕರು ಕೂಡ ರಾಹುಲ್ ಗಾಂಧಿ ಭಾಷಣ ಕೇಳುತ್ತ ವೇದಿಕೆ ಮೇಲೆಯೇ ನೆನೆಯುತ್ತ ಕುಳಿತರು. ಮಳೆಯಲ್ಲೇ ಭಾಷಣೆ ಮಾಡಿದ ರಾಹುಲ್ ಗಾಂಧಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ಧೋರಣೆ ವಿರುದ್ಧ ಧ್ವನಿ ಎತ್ತುತ್ತಲೇ ಇರುತ್ತೇನೆ. ಯಾವ ಕಾರಣಕ್ಕೂ ಯಾತ್ರೆ ನಿಲ್ಲುವುದಿಲ್ಲ. ಈಗ ಮಳೆ ಬರುತ್ತಿದೆ, ಹಾಗೆಂದು ಪಾದಯಾತ್ರೆ ನಿಲ್ಲಿಸಿದ್ದೇವೆಯೇ ಎಂದು ಪ್ರಶ್ನೆ ಮಾಡಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now