• December 22, 2025

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ನಟಿ ರಮ್ಯಾ: ಗಣೇಶ ಹಬ್ಬಕ್ಕೆ ಆಪಲ್ ಬಾಕ್ಸ್ ನೀಡಿದ ಮೋಹಕ ತಾರೆ

ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಯಾವಾಗ ರಮ್ಯಾ ಗಾಂಧಿನಗರಕ್ಕೆ ಎಂಟ್ರಿಕೊಡ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಗಣೇಶ್ ಹಬ್ಬದಂತೆ ಸಿಹಿ ಸುದ್ದಿ ನೀಡಿದ್ದಾರೆ. ಗಣೇಶ ಹಬ್ಬದಂದು ಬುಧವಾರ ಬೆಳಗ್ಗೆ 11.15ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಹೇಳಿ ರಮ್ಯಾ ಸಾಕಷ್ಟು ಕುತೂಹಲ ಮೂಡಿಸಿದ್ದರು. ರಮ್ಯಾ ಯಾವ ಸಿಹಿ ಸುದ್ದಿ ನೀಡಬಹುದು ಎಂದು ಅಭಿಮಾನಿಗಳು ಕಾದು ಕೂತಿದ್ದರು.  ಕೊಟ್ಟ ಮಾತಿನಂತೆ ರಮ್ಯಾ ಸಿಹಿ ಸುದ್ದಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಈವರೆಗೂ ಬೇರೆಯವರ ಬ್ಯಾನರ್ ನಲ್ಲಿ ನಟಿಸುತ್ತಿದ್ದ ರಮ್ಯಾ, ಸ್ವತಃ ತಮ್ಮದೇ ಬ್ಯಾನರ್ ಶುರು ಮಾಡಿ ಅಚ್ಚರಿ ಮೂಡಿಸಿದ್ದಾರೆ. ರಮ್ಯಾ ಸಿಹಿ ಸುದ್ದಿ ನೀಡುತ್ತೇನೆ ಎಂದಾಗ ಪ್ರತಿಯೊಬ್ಬರು ಕ್ಯೂರಿಯಾಸಿಟಿಗೆ ಒಳಗಾಗಿದ್ದರು. ಅಲ್ಲದೆ ನಟಿಯಾಗಿ ಮತ್ತೆ ರಮ್ಯಾ ಚಂದನವನಕ್ಕೆ ಮರಳುತ್ತಾರಾ ಎಂದು ಪ್ರಶ್ನೆ ಮಾಡಿದ್ದರು. ಕೊನೆಗೂ ರಮ್ಯಾ ಕುತೂಹಲಕ್ಕೆ ತೆರೆ ಎಳೆದಿದ್ದು ನಿರ್ಮಾಪಕಿಯಾಗಿ ಜನರ ಮುಂದೆ ಬರಲು ಸಿದ್ದವಾಗಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯನ್ನು ಶುರು ಮಾಡಿದ್ದು, ಈ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಜೊತೆಗೆ ಸದ್ಯದಲ್ಲೇ ಈ ಸಂಸ್ಥೆಯ ಮೂಲಕ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿಯೂ ಹೇಳಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ರಮ್ಯಾ ನಟಿಸ್ತಾರೆ ಅನ್ನೋ ಸುದ್ದಿ ಜೋರಾಗಿಯೇ ಕೇಳಿ ಬಂದಿತ್ತು. ಆದ್ರೆ ಅದಕ್ಕೆಲ್ಲಾ ರಮ್ಯಾ ತೆರೆ ಎಳೆದಿದ್ದು ನಿರ್ಮಾಪಕಿಯಾಗಿ ಗಾಂಧಿನಗರದಲ್ಲಿ ಸದ್ದು ಮಾಡಲಿದ್ದಾರೆ. ಒಟ್ನಲ್ಲಿ ರಮ್ಯಾ ನೀಡಿರೋ ಸಿಹಿ ಸುದ್ದಿಯಿಂದ ಖುಷಿಯಾಗಿರೋ ಅಭಿಮಾನಿಗಳು ಆಕೆ ಆದಷ್ಟು ಬೇಗ ಸಿನಿಮಾದಲ್ಲಿ ನಟಿಸಲಿ ಅಂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now