• December 22, 2025

 ಈ ವೇದಿಕೆ ಮೇಲೆ ನಿಂತಿದ್ದೇನೆ ಎಂದರೆ ಅದಕ್ಕೆ ಡಾ.ರಾಜ್ ಕುಮಾರ್ ಕುಟುಂಬವೇ ಕಾರಣ: ರಮ್ಯಾ

ಸ್ಯಾಂಡಲ್ ವುಡ್ ಸಿನಿ ರಂಗದ ಬೆಸ್ಟ್ ಪೇರ್ ಗಳಲ್ಲಿ ಒಂದು ಪುನೀತ್ ರಾಜ್ ಕುಮಾರ್ ಹಾಗೂ ನಟಿ ರಮ್ಯಾ. ಪುನೀತ್ ನಟನೆಯ ಅಭಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ರಮ್ಯಾ ಬಳಿಕ ಅಪ್ಪು ಜೊತೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದರು. ಇದೀಗ ಗಂಧದ ಗುಡಿ ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮ್ಯಾ ಅಪ್ಪು ಜೊತೆಗಿನ ಒಡನಾಟವನ್ನು ಬಿಚ್ಚಿಟ್ಟಿದ್ದಾರೆ. ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಮ್ಯಾ ಅರಸು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಪುನೀತ್ ಒಡನಾಟದ ನೆನಪನ್ನು ಬಿಚ್ಚಿಟ್ಟಿದ್ದಾರೆ.     ಇನ್ನೂ ನನಗೆ ಅಷ್ಟಾಗಿ ಡ್ಯಾನ್ಸ್ ಬರುತ್ತಿರಲಿಲ್ಲ. ಅಪ್ಪು ನನಗೆ ಸಲಹೆ ನೀಡುತ್ತಿದ್ದರು. ನನ್ನ ಕೋ ಸ್ಟಾರ್ ನನಗೆ ತುಂಬಾ ಬೆಂಬಲ ನೀಡಿದ್ದಾರೆ. ನಾನು ಇಂದು ಈ ವೇದಿಕೆಯಲ್ಲಿ ನಿಂತಿದ್ದೇನೆ ಅಂದ್ರೆ ಅದಕ್ಕೆ ಡಾ.ರಾಜ್‌ಕುಮಾರ್ ಕುಟುಂಬವೇ ಕಾರಣ ಎಂದರು. ಅಪ್ಪು ಕುಟುಂಬದ ಧೀರೇನ್, ಯುವ, ಡಿಂಪಿ, ಅಮ್ಮುನ ನೋಡಿದಾಗ ಖುಷಿಯಾಗುತ್ತದೆ. ಏಲ್ಲೋ ಒಂದು ಕಡೆ ಅಪ್ಪುನ ಮಿಸ್ ಮಾಡಿಕೊಂಡರೂ ಕೂಡ ಅವರ ಫ್ಯಾಮಿಲಿ ಮತ್ತು ಅಭಿಮಾನಿಗಳ ಮೂಲಕ ಅಪ್ಪು ಬದುಕಿದ್ದಾರೆ ಎಂದು ಅನಿಸುತ್ತದೆ ಎಂದು ರಮ್ಯಾ ಹೇಳಿದರು. ಪುನೀತ್ ರಾಜ್ ಕುಮಾರ್ ರ ಕನಸಿನ ಪ್ರಾಜೆಕ್ಟ್ ಆಗಿದ್ದ ಗಂಧದ ಗುಡಿ ಚಿತ್ರ ಇದೇ ಅ.28ರಂದು ಅದ್ದೂರಿಯಾಗಿ ತೆರೆ ಮೇಲೆ ಬರ್ತಿದೆ. ಅದಕ್ಕೂ ಮೊದಲು ದೊಡ್ಮನೆ ಕುಟುಂಬ ಸಿನಿಮಾ ರಂಗ ಹಾಗೂ ಅಭಿಮಾನಿಗಳಿಗಾಗಿ  ಪ್ರೀರಿಲೀಸ್ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿ ಅಪ್ಪು ಗುಣಗಾನ ಮಾಡಿದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now