ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತಮಿಳು ನಟ ಧನುಷ್ ಜೊತೆಗಿನ ಫೋಟೋ ಹಂಚಿಕೊಂಡ ನಟಿ ರಮ್ಯಾ
ಹದಿನೈದು ವರ್ಷಗಳ ಹಿಂದೆ ಧನುಷ್ ಗೆ ಜೋಡಿಯಾಗಿ ರಮ್ಯಾ ಪೊಲ್ಲಾಧವನ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗೆ 15 ವರ್ಷಗಳ ಆದ ಹಿನ್ನೆಲೆಯಲ್ಲಿ ಮತ್ತೆ ಸಿನಿಮಾ ಟೀಮ್ ಜೊತೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಆ ಫೋಟೋಗಳನ್ನು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಆ ದಿನಗಳಲ್ಲಿ ರಮ್ಯಾ ಹೇಗಿದ್ದರು ಎನ್ನುವ ಕುರಿತಾಗಿಯೂ ಹಲವು ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಪೊಲ್ಲಾಧವನ್ ನೆನಪಿನಲ್ಲಿ ನಾನು ಹಲವು ವರ್ಷಗಳ ಗೆಳೆಯನನ್ನು ಭೇಟಿಯಾದೆ. ಅಲ್ಲದೇ, ನಾನು ಮೆಚ್ಚುವ ಪ್ರತಿಭಾವಂತ ನಿರ್ದೇಶಕರನ್ನೂ ಭೇಟಿಯಾಗಿದ್ದು ಖುಷಿ ತಂದಿತು. ಈ ಟೀಮ್ ನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಈ ಸಿನಿಮಾ ನನಗೆ ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಕಲಿಸಿದೆ. ಮತ್ತೊಂದು ವಿಷಯ ಹೇಳುವುದೆಂದರೆ, ನಾನು ಪೊಲ್ಲಾಧವನ್ 2 ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.
