• January 2, 2026

ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಬಿರುಗಾಳಿ: ಕನ್ನಡ ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ‘ರೋಡ್ ರೋಮಿಯೋ’ ನಟಿ

ಸ್ಯಾಂಡಲ್ ವುಡ್ ಸಿನಿಮಾ ರಂಗದಲ್ಲಿ ಮತ್ತೆ ಮೀ ಟೂ ಆರೋಪ ಕೇಳಿ ಬಂದಿದೆ. ನಟಿ ಶೃತಿ ಹರಿಹರನ್ ಮೀ ಟೂ ಆರೋಪದ ಬಳಿಕ ಮತ್ತೊಬ್ಬ ನಟಿ ಕನ್ನಡ ಚಿತ್ರರಂಗದ ಕರಾಳತೆಯನ್ನು ಬಿಚ್ಚಿಟ್ಟಿದ್ದು ಇದೇ ಕಾರಣಕ್ಕೆ ತಾವು ಸಿನಿಮಾ ಇಂಡಸ್ಟ್ರಿಯನ್ನು ತೊರೆದಿದ್ದಾಗಿ ಹೇಳಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ಬಂದಿರುವ ಬಾಬಾ ಬಾರೋ ರಸಿಕ ಖ್ಯಾತಿಯ ನಟಿ ಆಶಿತಾ ಇದೀಗ ಮೀ ಟೂ ಆರೋಪ ಮಾಡಿದ್ದಾರೆ. ಯುಟ್ಯೂಬ್ ಚಾನಲ್ ಒಂದರಲ್ಲಿ ಮಾತನಾಡಿದ ಆಶಿತಾ ತಮಗೆ ಕನ್ನಡ ಚಿತ್ರರಂಗದಲ್ಲಿ ಆದ ನೋವಿನ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ತಾವು ಸಿನಿಮಾ ರಂಗದಿಂದ ದೂರವಾಗಿರೋದಾಗಿ ಹೇಳಿದ್ದಾರೆ. ನಾನು ಸಿನಿಮಾ ರಂಗದಲ್ಲಿ ಸಾಕಷ್ಟು ಗುರುತಿಸಿಕೊಂಡ ಮೇಲೆ ನನಗೆ ಈ ರೀತಿಯ ಅನುಭವವಾಯಿತು. ಚಿತ್ರರಂಗದಲ್ಲಿ ನಟನೆ ಆರಂಭಿಸಿದ ಸಂದರ್ಭದಲ್ಲಿ ಈ ರೀತಿಯಾಗಿರಲಿಲ್ಲ. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡುವ ಸಂದರ್ಭದಲ್ಲಿ ನನಗೆ ಏನು ಆಗಿರ್ಲಿಲ್ಲ. ಆದರೆ ಹೊಸಬರ ಜೊತೆ ಕೆಲಸ ಮಾಡುವಾಗ ಇಂಥಹ ಅನುಭವವಾಗಿದೆ ಎಂದರು. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಬೇಕಾಬಿಟ್ಟಿ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ’ ಸಿನಿಮಾ ರಂಗ ತೊರೆಯುವ ನಿರ್ಧಾರ ಮಾಡಿದೆ ಎಂದಿದ್ದಾರೆ. ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಈ ರೀತಿಯ ಅನುಭವ ಆಗಿರುವಾಗ ಇನ್ನೂ ಹೊಸ ಹುಡುಗಿಯರು ಎಷ್ಟು ಕಷ್ಟ ಪಟ್ಟಿದ್ದಾರೋ ಗೊತ್ತಿಲ್ಲ. ನನಗೆ ಈಗಲೂ ನಟಿಸುವ ಆಸಕ್ತಿ ಇದೆ. ಉತ್ತಮ ಟೀಂ ಹಾಗೂ ಪಾತ್ರ ಸಿಕ್ಕರೆ ಖಂಡಿತ ನಟಿಸುವುದಾಗಿ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now