• January 1, 2026

ವರಮಹಾಲಕ್ಷ್ಮಿ ಹಬ್ಬದಂದು ದಚ್ಚು ಅಭಿಮಾನಿಗಳಿಗೆ ಡಬ್ಬಲ್ ಧಮಾಕ: ಕ್ರಾಂತಿ ಸಿನಿಮಾದ ಪೋಸ್ಟರ್ ರಿಲೀಸ್

ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಡಬ್ಬಲ್ ಧಮಾಕ. ಒಂದು ಕಡೆ ದರ್ಶನ್ ನಟನೆಯ ಮುಂದಿನ ಸಿನಿಮಾದ ನಾಯಕಿಯ ಆಯ್ಕೆಯಾಗಿದ್ದು ಮತ್ತೊಂದು ಕಡೆ ಕ್ರಾಂತಿ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆ ಆಗಿದೆ. ದರ್ಶನ್ ನಟನೆಯ 55ನೇ ಕ್ರಾಂತಿ ಸಿನಿಮಾದ ಪೋಸ್ಟರ್  ಬಿಡುಗಡೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಹಾರೈಸಿದ್ದಾರೆ. ಪೋಸ್ಟರ್ ನಲ್ಲಿ ದರ್ಶನ್ ಬಾಸ್ಕೆಟ್ ಬಾಲ್ ಹಿಡಿದು ನಡೆದುಕೊಂಡು ಬರುತ್ತಿರುವ ದೃಶ್ಯ ಕಾಣಬಹುದಾಗಿದೆ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಚಿತ್ರಕ್ಕೆ ನೀವು ತೋರಿರುವ ಪ್ರೀತಿ – ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ. ನಮ್ಮ ಚಿತ್ರದ ಹೊಸ ಪೋಸ್ಟರ್ ನಿಮಗಾಗಿ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ. ಪೋಸ್ಟರ್‌ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಅನ್ನೋದು ಗೊತ್ತಾಗುತ್ತಿದೆ. ಚಿತ್ರಕ್ಕೆ ಹರಿಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದು, ಶೈಲಜಾ ನಾಗ್ ಹಾಗೂ ಬಿ ಸುರೇಶ್ ಬಂಡವಾಳ ಹೂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಕ್ರಾಂತಿ’ ಮೂಡಿ ಬರಲಿದೆ. ಸದ್ಯ ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ದರ್ಶನ್‌ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಸ್ಕೆಟ್​ ಬಾಲ್​ ಹಿಡಿದು ನಡೆದುಕೊಂಡು ಬರುತ್ತಿರುವ ಚಿತ್ರದಲ್ಲಿ ಕಾಣ ಬಹುದಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now