• January 1, 2026

ಸಮಂತಾ ನಟನೆಯ ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

ಖ್ಯಾತ ನಟಿ ಸಮಂತಾ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ವಿದೇಶದಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ಸಮಂತಾ ಹೋಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಬಳಿಕ ಸಮಂತಾ ಮ್ಯಾನೇಜರ್ ಸ್ಪಷ್ಟನೆ ನೀಡಿ ಸಮಂತಾಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಇದೆಲ್ಲಾ ಗಾಳಿ ಸುದ್ದಿ ಎಂದು ಹೇಳಿದ್ದರು. ಇದನ್ನ ಕೇಳಿದ ಆಕೆಯ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು, ಈ ಮಧ್ಯೆ ಸಮಂತಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನಟಿ ಸಮಂತಾ ಪೌರಾಣಿಕ ಕಥೆಯುಳ್ಳ ಶಾಕುಂತಲಂ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈಗಾಗ್ಲೆ ಫಸ್ಟ್ ಲುಕ್ ಹಾಗೂ ಟ್ರೈಲರ್ ನೋಡಿ ಮೆಚ್ಚಿಕೊಂಡಿರೋ ಸಿನಿ ರಸಿಕರು ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಶಾಕುಂತಲಂ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಗುಣಶೇಖರ್ ನಿರ್ದೇಶನದ ಸಮಂತಾ ಹಾಗೂ ದೇವ್ ಮೋಹನ್ ಕಾಂಬಿನೇಷನ್ ನ ಪ್ಯಾನ್ ಇಂಡಿಯಾ ಶಾಂಕುತಲಂ ಸಿನಿಮಾ ನವೆಂಬರ್ 4ಕ್ಕೆ ತೆರೆ ಕಾಣಲಿದೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹ ಬಾಲನಟಿಯಾಗಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ್ದಾಳೆ. ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಬೆಟ್ಟಗಳು, ಗಾಂಧಿಪೇಟ್ ಲೇಕ್ ಸೇರಿದಂತೆ ಇನ್ನೀತರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿರುವ ಶಾಕುಂತಲಂ ಸಿನಿಮಾವನ್ನು ದಿಲ್ ರಾಜ್ ನಿರ್ಮಿಸುತ್ತಿದ್ದು, ನೀಲಿಮಾ ಗುಣ ಬಂಡವಾಳ ಹೂಡಿದ್ದಾರೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದ್ದು ಈಗಾಗ್ಲೆ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now