• January 1, 2026

ನಾಗಚೈತನ್ಯ ಮೇಲೆ ಸಮಂತಾಗೆ ಕೊಲ್ಲುವಷ್ಟು ಕೋಪವಿದೆಯಾ?

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ಡಿವೋರ್ಸ್ ಪಡೆದುಕೊಂಡು ಸಾಕಷ್ಟು ತಿಂಗಳುಗಳೇ ಕಳೆದು ಹೋಗಿದೆ. ಆದರೆ ಇಂದಿಗೂ ಈ ಜೋಡಿ ಬೇರೆಯಾಗೋಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದೀಗ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ಡಿವೋರ್ಸ್ ಬಳಿಕ ನಾಗಚೈತನ್ಯ ಮೇಲೆ ಯಾವ ರೀತಿ ಭಾವನೆ ಇದೆ ಎಂದು ಹೇಳಿದ್ದಾರೆ. ಸಾಕಷ್ಟು ವರ್ಷಗಳ ಪ್ರೀತಿಸಿದ್ದ ಸಮಂತಾ ಹಾಗೂ ನಾಗಚೈತನ್ಯ ಗುರುಹಿರಿಯರ ಸಮ್ಮುಖದಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಹಸೆಮಣೆ ಏರಿದ್ದರು. ಆದರೆ ಮದುವೆ ಆದ ಮೂರು ವರ್ಷಕ್ಕೆ ದಾಂಪತ್ಯದಲ್ಲಿ ಭಿನ್ನಭಿಪ್ರಾಯ ಉಂಟಾಗಿ ಇಬ್ಬರು ವಿಚ್ಚೇದನ ಪಡೆದುಕೊಂಡರು. ಇದುವರೆಗೂ ತಮ್ಮ ಡಿವೋರ್ಸ್ ಬಗ್ಗೆ ಮಾತನಾಡದ ಸಮಂತಾ ಇದೇ ಮೊದಲ ಬಾರಿಗೆ ತುಟ್ಟಿ ಬಿಚ್ಚಿದ್ದಾರೆ. ನಿಮ್ಮನ್ನು ಹಾಗೂ ನಾಗಚೈತನ್ಯರನ್ನು ಒಂದೇ ರೂಮಿನಲ್ಲಿ ಬಿಟ್ಟರೆ ಅಲ್ಲಿ ಚೂಪದ ವಸ್ತುವನ್ನು ಇಡಬಹುದೇ ಎಂದು ಕರಣ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಮಂತಾ, ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದಿದ್ದಾರೆ. ಇದೇ ವೇಳೆ ಮತ್ತೊಂದು ಪ್ರಶ್ನೆ ಕೇಳಿದ ಕರಣ್, ನಿಮ್ಮನ್ನು ಸಾಕಷ್ಟು ನೋಯಿಸಿದ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಯಾವುದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಂತಾ, ನಾಗ ಚೈತನ್ಯಗೆ ವಿಚ್ಛೇದನ ನೀಡಲು 250 ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು. ನಾವು ಖುಷಿಯಿಂದ ಡಿವೋರ್ಸ್ ಪಡೆದುಕೊಂಡಿಲ್ಲ. ಸಾಕಷ್ಟು ನೋವಿನಿಂದಲೇ ದೂರ ಆಗಿದ್ದೇವೆ ಎಂದು ಸಮಂತಾ ಹೇಳಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now